ETV Bharat / city

ಫೋನ್​ನಲ್ಲಿ ನೀವು ಕೇಳುವ ಕೊರೊನಾ ಜಾಗೃತಿ ಧ್ವನಿ ಈ ಮೂವರು ಕಲಾವಿದೆಯರದ್ದು - Covid-19 Awareness on through phone

ಕೋವಿಡ್​-19 ಕುರಿತು ಫೋನ್ ಮೂಲಕ ಜಾಗೃತಿಯ ಧ್ವನಿ ಸಂದೇಶ ಬಿತ್ತರವಾಗುತ್ತಿದೆ. ಇದೀಗ ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಈ ಸಂದೇಶಕ್ಕೆ ಧ್ವನಿ ನೀಡಿದವರು ಯಾರು ಎಂಬುದು ತಿಳಿದುಬಂದಿದೆ. ಈ ಮೂವರು ಕಲಾವಿದರು ದಕ್ಷಿಣ ಕನ್ನಡ ಜಿಲ್ಲೆಯವರು ಎಂಬುದು ವಿಶೇಷ.

ಧ್ವನಿ ಸುಂದರಿಯರು
ಧ್ವನಿ ಸುಂದರಿಯರು
author img

By

Published : May 16, 2020, 10:59 AM IST

ಸುಳ್ಯ: ಕೊರೊನಾ ಆರಂಭವಾದ ದಿನದಿಂದಲೂ ಫೋನ್ ಮೂಲಕ ಜಾಗೃತಿಯ ಧ್ವನಿ ಸಂದೇಶ ಬಿತ್ತರವಾಗುತ್ತಿದೆ. ಇದು ಮೊದ ಮೊದಲು ಕೆಲವರಿಗೆ ಕಿರಿಕಿರಿ ನೀಡಿದರೂ ಕೂಡ ಇದೀಗ ಕೋಟ್ಯಂತರ ಜನರ ಮನ ಗೆದ್ದಿದೆ.

ಫೋನ್ ಮೂಲಕ ಕೊರೊನಾ ಜಾಗೃತಿ ಮೂಡಿಸಿದ ಕಲಾವಿದರು

ಜಗತ್ತಿನಲ್ಲಿ ಕೊರೊನಾ ಆರಂಭವಾದ ದಿನದಿಂದ ಮೊಬೈಲ್ ಮೂಲಕ ಧ್ವನಿ ಸಂದೇಶಗಳನ್ನು ನೀಡಿ ಜಾಗೃತಿ ಮೂಡಿಸಲಾಗುತ್ತಿತ್ತು. ಎಲ್ಲಿಗೇ ಕರೆ ಮಾಡಿದರೂ ಕನೆಕ್ಟ್ ಆದ ಕೂಡಲೇ ಆಯಾ ರಾಜ್ಯದ ಭಾಷೆಗಳಲ್ಲಿ ಕೊರೊನಾ ಜಾಗೃತಿ ಕುರಿತಾದ ಈ ಧ್ವನಿ ಸಂದೇಶ ಕೇಳತೊಡಗುತ್ತದೆ. ಹಾಗಾದರೆ ಈ ಧ್ವನಿ ಯಾರದ್ದು? ಎಂಬ ಕುತೂಹಲ ಎಲ್ಲರಿಗೂ ಇರಬಹುದು. ಇದೀಗ ಈ ಕುತೂಹಲಕ್ಕೆ ಬ್ರೇಕ್​ ಬಿದ್ದಿದ್ದು, ಇವರು ಮೂವರು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕಿನವರು ಅನ್ನೋದು ಗೊತ್ತಾಗಿದೆ.

ಹೌದು, ಈ ಪೈಕಿ ಮೊದಲ ಹಂತದ ಧ್ವನಿ, ಮಂಗಳೂರು ಮೂಲದ ಡಾರೆಲ್ ಜೆಸಿಂತಾ ಫೆರ್ನಾಂಡಿಸ್ ಅವರದ್ದು. ಪಡೀಲ್‌ನಲ್ಲಿರುವ ದಿ. ವಲೇರಿಯನ್ ಫೆರ್ನಾಂಡಿಸ್ ಹಾಗೂ ಲವೀನಾ ಫೆರ್ನಾಂಡಿಸ್ ಅವರ ಪುತ್ರಿಯಾಗಿರುವ ಡಾರೆಲ್ ಜೆಸಿಂತಾ ತಮ್ಮ ಎಂ.ಪಿ.ಎಡ್ ಪದವಿಯ ಬಳಿಕ ಸ್ವಲ್ಪ ಕಾಲ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕಿಯಾಗಿದ್ದರು. 2013 ರಲ್ಲಿ ದೆಹಲಿಯ ಕನ್ನಡ ಸೀನಿಯರ್ ಸೆಕೆಂಡರಿ ಸ್ಕೂಲ್ ಗೆ ದೈಹಿಕ ಶಿಕ್ಷಕಿಯಾಗಿ ಸೇರಿದರು. ಈ ಶಾಲೆಯ ಸಂಚಾಲಕರಾಗಿದ್ದ ಖ್ಯಾತ ವಾಯ್ಸ್ ಆರ್ಟಿಸ್ಟ್ ಸರವು ಕೃಷ್ಣ ಭಟ್ ಅವರು, ಡಾರೆಲ್ ಅವರ ಧ್ವನಿ ಶಕ್ತಿ ಗುರುತಿಸಿ ವಾಯ್ಸ್ ಓವರ್ ಅವಕಾಶ ನೀಡಿದ್ದರಂತೆ. ರೇಡಿಯೋ ಹಾಗೂ ಟಿ.ವಿ ಗಳಲ್ಲಿ ಅನೇಕ ಪ್ರಕಟನೆಗಳಿಗೆ ಧ್ವನಿ ನೀಡಿದ ಡಾರೆಲ್ ಅವರಿಗೆ ಕೊರೋನಾ ಜಾಗೃತಿಯ ಪ್ರಕಟನೆಗೆ ಧ್ವನಿ ನೀಡುವ ಅವಕಾಶವೂ ಬಂತು. ಜೊತೆಗೆ ಇವರು ಅತ್ಯುತ್ತಮ ಕ್ರೀಡಾಪಟು. ಹಿಮಾಚಲ ಪ್ರದೇಶ ಮೂಲದ ಡೋರ್ಜೆಯವರು ಡಾರೆಲ್ ಅವರ ಪತಿ. ಸೈನಿಕರಾಗಿರುವ ಡೋರ್ಜೆ ಪ್ರಸ್ತುತ ಚಂಡೀಗಢದಲ್ಲಿದ್ದಾರೆ.

ಕನ್ನಡ ಭಾಷೆಯ ಎರಡು ಮತ್ತು ಮೂರನೇ ಹಂತದಲ್ಲಿ ಜಾಗೃತಿ ಸಂದೇಶಕ್ಕೆ ಧ್ವನಿ ನೀಡಿದವರು ವಿಟ್ಲದ ಮುಳಿಯದವರಾದ ವಿದ್ಯಾ ಭಟ್. ಮುಳಿಯದ ಗೋಪಾಲಕೃಷ್ಣ ಭಟ್- ವಾಣಿ ಭಟ್ ದಂಪತಿಯ ಪುತ್ರಿಯಾಗಿರುವ ವಿದ್ಯಾ ಅವರು ಮುಚ್ಚೂರುಪದವು, ಅಳಿಕೆ, ಮೂಡಬಿದಿರೆಗಳಲ್ಲಿ ಶಿಕ್ಷಣ ಪೂರೈಸಿದ ಬಳಿಕ ಕಾಸರಗೋಡಿನ ಸಿ.ಪಿ.ಸಿ.ಆರ್.ಐ ಯಲ್ಲಿ ಸೈಂಟಿಸ್ಟ್ ಆಗಿದ್ದ ಪುತ್ತೂರು ಮೂಲದ ಡಾ. ನಾರಾಯಣ ಭಟ್ ಅವರೊಂದಿಗೆ ವಿವಾಹವಾಯಿತು. ಪತಿಯ ಉದ್ಯೋಗ ನಿಮಿತ್ತ ಶಿಲ್ಲಾಂಗ್, ಸಿಕ್ಕೀಂ, ಸೂರತ್ ಮೊದಲಾದ ಸ್ಥಳಗಳಲ್ಲಿ ನೆಲೆಸಿ 2009 ರಲ್ಲಿ ದೆಹಲಿಗೆ ತೆರಳಿದರು. ಅದಾಗಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿದ್ದ ಅವರಿಗೆ ದೆಹಲಿಗೆ ಬಂದ ನಂತರ ಕರ್ನಾಟಕ ಸಂಘ ಉತ್ತಮ ವೇದಿಕೆ ಒದಗಿಸಿತು. 'ಸೇವಂತಿ ಪ್ರಸಂಗ’ ನಾಟಕದ ಸೇವಂತಿ, ‘ಕಣ್ಣು’ ನಾಟಕದ ಸೀತಾ ಎಂಬ ಅಂಧೆಯ ಪಾತ್ರ ವಿದ್ಯಾ ಅವರೊಳಗಿದ್ದ ಪ್ರಬುದ್ಧ ಅಭಿನಯವನ್ನು ಅನಾವರಣಗೊಳಿಸಿತು. ರಕ್ತ ರಾತ್ರಿ, ಜೋಗಿಯ ರಾಣಿ, ಅಂತಿಗೊನೆ ಮೊದಲಾದ ನಾಟಕಗಳ ಮೂಲಕ ಮಿಂಚಿದ ವಿದ್ಯಾಗೆ ವಾಯ್ಸ್ ಓವರ್ ಅವಕಾಶವೂ ಒದಗಿ ಬಂತು.

ದೂರದರ್ಶನದ ಗ್ರಾಮ ವಿಕಾಸ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಂಡರು. ರೇಡಿಯೋಗಳಲ್ಲಿ ಧ್ವನಿ ಕಲಾವಿದರಾಗಿ, ರೇಡಿಯೋ ನಾಟಕದಲ್ಲಿ ಪಾತ್ರಧಾರಿಯಾಗಿ ಮಿಂಚಿದರು. ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಕಿಸಾನ್ ಮಾನ್ ಧನ್ ಯೋಜನೆ, ಬೇಟಿ ಬಚಾವೋ, ಬೇಟಿ ಪಡಾವೋ ಮೊದಲಾದ ಪ್ರಕಟಣೆಗಳಿಗೆ ಧ್ವನಿ ನೀಡಿದರು. ಕೊರೊನಾ ಕುರಿತ ಎರಡು ಹಾಗೂ ಮೂರನೇ ಹಂತದ ಸಂದೇಶಕ್ಕೂ ಧ್ವನಿ ನೀಡಿದರು.

ಇದರ ಜೊತೆಗೆ ಕೇರಳ ರಾಜ್ಯದ ಮಲಯಾಳಂನ ಧ್ವನಿಯೂ ಕನ್ನಡತಿಯಾದ ಸುಳ್ಯದ ಮರ್ಕಂಜದ ಟಿ.ವಿ ಜೊಸೆಫ್ ಮತ್ತು ಆಲೀಸ್ ಜೊಸೇಫ್ ದಂಪತಿಯ ಮಗಳಾಗಿರುವ ಪ್ರಸ್ತುತ ದೆಹಲಿಯಲ್ಲಿರುವ ಟಿಂಟುಮೋಳ್ ಜೋಸೆಫ್ ಅವರದ್ದು ಅನ್ನೋದು ವಿಶೇಷ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.