ETV Bharat / city

ಸ್ಥಳೀಯರಿಗೆ ಉದ್ಯೋಗಾವಕಾಶಕ್ಕಾಗಿ ಎಂಆರ್​ಪಿಎಲ್ ಸಂಸ್ಥೆಯೊಂದಿಗೆ ಮಾತುಕತೆ: ಸಚಿವ ನಿರಾಣಿ - Employments for localites in MRPL

ಮಂಗಳೂರಿನಲ್ಲಿ ಇಪಿ ಆ್ಯಕ್ಟ್ ಕಾರ್ಯಕ್ರಮದಲ್ಲಿ ಎಕ್ಸ್​ಪೋರ್ಟ್ ಪ್ರೊಮೋಷನಲ್ ಇಂಡಸ್ಟ್ರೀಯಲ್ ಪಾರ್ಕ್​ನಲ್ಲಿ 5000 ಮಂದಿಗೆ ಉದ್ಯೋಗಾವಕಾಶ ಲಭ್ಯವಾಗುವ ಅಂದಾಜು ಇದೆ. ಈ ಯೋಜನೆಗೆ ರಾಜ್ಯದಿಂದ 32 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದಿಂದ 32 ಕೋಟಿ ರೂ. ಸೇರಿ 64 ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ‌ ಎಂದು ಸಚಿವ ಮುರುಗೇಶ್ ನಿರಾಣಿ ಮಾಹಿತಿ ನೀಡಿದ್ದಾರೆ.

Minister Murugesh Nirani Talked to Press
ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ
author img

By

Published : Apr 3, 2022, 5:55 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉದ್ಯೋಗಾಂಕ್ಷಿಗಳಿಗೆ ಬೃಹತ್​ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್​ ನಿರಾಣಿ ಸಿಹಿ ಸುದ್ದಿ ನೀಡಿದ್ದಾರೆ. ನಗರದ ಎಂಆರ್​ಪಿಎಲ್​ನಲ್ಲಿ‌ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯದ ಕುರಿತು ಇಂದು ಕಂಪನಿಯ ಸಿಎಂಡಿ ಹಾಗೂ ಜನರಲ್ ಮ್ಯಾನೇಜರ್​ಗಳೊಂದಿಗೆ ಮಾತನಾಡಲಿದ್ದೇನೆ ಎಂದು ಸಚಿವರು ಭರವಸೆ ನೀಡಿದ್ದು, ಈ ಭಾಗದ ಜನತೆಗೆ ಹೊಸ ನಿರೀಕ್ಷೆ ಗರಿಗೆದರಿದೆ.

ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಮುರುಗೇಶ್ ನಿರಾಣಿ

ನಗರದ ಎಸ್​ಸಿಡಿಸಿಸಿ ಬ್ಯಾಂಕ್​ಗೆ ಆಗಮಿಸಿದ ಮುರುಗೇಶ್ ನಿರಾಣಿಯವರೊಂದಿಗೆ ಮಾಧ್ಯಮದವರು ಎಂಆರ್​ಪಿಎಲ್​ನಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯದ ಹಿನ್ನೆಲೆಯಲ್ಲಿ ಪ್ರಶ್ನಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇಂದು ಎಂಆರ್​ಪಿಎಲ್ ಮುಖ್ಯಸ್ಥರೊಂದಿಗೆ ಹೊಸದಾಗಿ ಉದ್ಯೋಗ ಸೃಷ್ಟಿ ಹಾಗೂ ಸ್ಥಳೀಯರಿಗೆ ಉದ್ಯೋಗ ಲಭ್ಯತೆಯ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಲಿದ್ದೇನೆ. ಅಲ್ಲದೆ ಅವರಿಗೆ ಕೇಂದ್ರ ಸರ್ಕಾರದಿಂದ ಯಾವ ರೀತಿ ಸಹಕಾರ ಬೇಕು‌, ಏನೇನು ಸಮಸ್ಯೆಗಳಿವೆ ಎಂಬುದನ್ನು ನೋಡಿಕೊಂಡು ಈ ಭಾಗದಲ್ಲಿ ಅನುಕೂಲ ಮಾಡಿಕೊಡಲಿದ್ದೇವೆ ಎಂದು ಹೇಳಿದರು.

ಇತ್ತೀಚೆಗೆ ಕಾರ್ಖಾನೆಗಳ ಕೊಳವೆಗಳಿಂದ ಬರುವ ಮಾಲಿನ್ಯಯುಕ್ತ ಹೊಗೆಯ ಬಗ್ಗೆ ಬಹಳ ಮುಂಜಾಗ್ರತೆ ವಹಿಸುತ್ತಿದೆ. ಮೊದಲು 100ಕ್ಕಿಂತಲೂ ಅಧಿಕ ಪಿಪಿಇ ಮಾದರಿಯಲ್ಲಿ ಪರವಾನಿಗೆ ಇತ್ತು. ಇದೀಗ ಹೊಸದಾಗಿ ಆರಂಭವಾಗುತ್ತಿರುವ ಕಾರ್ಖಾನೆಗಳಲ್ಲಿ 50ಕ್ಕಿಂತಲೂ ಕಡಿಮೆ ಇದೆ. ಈಗ ಚಿಮಿಣಿಗಳಲ್ಲಿ ಹೊಗೆಯೂ ಕಾಣಿಸುತ್ತಿಲ್ಲ. ಹಳೆಯದ್ದನ್ನು ಸರಿಪಡಿಸಲಾಗುತ್ತಿದ್ದು, ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ.‌ ಈ ಮೂಲಕ ಮುಂದಿನ ಎರಡು ವರ್ಷಗಳಲ್ಲಿ ಕಾರ್ಖಾನೆಗಳ ಮಾಲಿನ್ಯತೆಯು ಸಂಪೂರ್ಣ ಹತೋಟಿಗೆ ಬರಲಿದೆ ಎಂದು ಭರವಸೆ ನೀಡಿದರು.

ಮಂಗಳೂರಿನಲ್ಲಿ ಇಪಿ ಆ್ಯಕ್ಟ್ ಕಾರ್ಯಕ್ರಮದಲ್ಲಿ ಎಕ್ಸ್​ಪೋರ್ಟ್ ಪ್ರೊಮೋಷನಲ್ ಇಂಡಸ್ಟ್ರಿಯಲ್ ಪಾರ್ಕ್​ನಲ್ಲಿ 5000 ಮಂದಿಗೆ ಉದ್ಯೋಗಾವಕಾಶ ಲಭ್ಯವಾಗುವ ಅಂದಾಜು ಇದೆ. ಈ ಯೋಜನೆಗೆ ರಾಜ್ಯ ಸರ್ಕಾರದಿಂದ 32 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದಿಂದ 32 ಕೋಟಿ ರೂ. ಸೇರಿ 64 ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ‌. ಕರಾವಳಿಯ ಸಾವಿರ ಎಕರೆ ಭೂಮಿಯನ್ನು ಹೊಸದಾಗಿ ಬರುವ ಕಾರ್ಖನೆಗಳಿಗೆ ಮೀಸಲಿರಿಸಲಾಗುತ್ತದೆ. ಇದರಲ್ಲಿ 145 ಎಕರೆ ಭೂಮಿ ಸರ್ಕಾರದ ಜಾಗವಾಗಿದ್ದು, ಉಳಿದದ್ದು ಖಾಸಗಿ ಭೂಮಿಯಾಗಿದೆ. ಅದನ್ನು ಡಿಸಿಯವರ ಅಧ್ಯಕ್ಷತೆಯಲ್ಲಿ ಎಸ್ಎಲ್ಒರವರು ಸ್ಥಳೀಯ ಬೆಲೆಯ ಮೂಲಕ‌ ಸರ್ವೇ ಮಾಡುತ್ತಾರೆ‌. ಆ ಬಳಿಕ ನಮ್ಮ ಬೋರ್ಡ್​ನಲ್ಲಿ ಅದಕ್ಕೆ ಅನುಮೋದನೆ ಕೊಡಿಸಲಾಗುತ್ತದೆ ಎಂದು ಸಚಿವ ನಿರಾಣಿ ಮಾಹಿತಿ ನೀಡಿದರು.

ಇದನ್ನೂ ಓದಿ: ನೈಸ್ ಸಂಸ್ಥೆ ವಿರುದ್ಧ ಮತ್ತೆ ತೊಡೆ ತಟ್ಟಿ ನಿಂತ ದೊಡ್ಡಗೌಡರು.. ಕ್ರಮ ಕೈಗೊಳ್ಳುವಂತೆ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.