ETV Bharat / city

ಎಫ್​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಕೆಪಿಎಸ್​ಸಿ ನೌಕರ, ಕಾನ್​ಸ್ಟೇಬಲ್ ಅರೆಸ್ಟ್ - ಎಫ್​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ

ಎಫ್​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕಾನ್‌ಸ್ಟೇಬಲ್ ಹಾಗು ಕೆಪಿಎಸ್​ಸಿ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

constable arrested on FDA exam paper leak case  FDA exam paper leak case  constable arrested  FDA exam paper leak case  ಎಫ್​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ  ಬೆಂಗಳೂರು  ಕಾನ್​ಸ್ಟೇಬಲ್ ಬಂಧನ  ಎಫ್​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ  bangalore news
ಕಾನ್​ಸ್ಟೇಬಲ್ ಜೊತೆಗೆ ಕೆಪಿಎಸ್​ಸಿ ನೌಕರ ಅರೆಸ್ಟ್
author img

By

Published : Jan 27, 2021, 4:09 PM IST

Updated : Jan 27, 2021, 9:50 PM IST

ಬೆಂಗಳೂರು: ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ‌ ಮೂಲಕ‌ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಸಂಖ್ಯೆ 18ಕ್ಕೆ ಏರಿದೆ.

ನಗರ ಸಶಸ್ತ್ರ ವಿಭಾಗ (ಸಿಎಆರ್) ಬೆಂಗಳೂರು ವಿಭಾಗದಲ್ಲಿ ಕೆಲಸ‌ ಮಾಡುತ್ತಿದ್ದ ಕಾನ್‌ಸ್ಟೇಬಲ್ ಮತ್ತು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕೆಲಸ‌ ಮಾಡುತ್ತಿದ್ದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಮುಸ್ತಾಕ್ ಕ್ವಾಟಿ ನಾಯಕ್ ಬಂಧಿತ ಕಾನ್‌ಸ್ಟೇಬಲ್‌. ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಈತ ಸಿಎಆರ್‌ನಲ್ಲಿ ಕಾನ್​ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ವಿಭಾಗದ ಕಂಟ್ರೋಲ್ ವಿಭಾಗದಲ್ಲಿ ಸ್ಟೆನೋಗ್ರಾಫರ್ ಆಗಿ ಕೆಲಸ‌ ಮಾಡುತ್ತಿದ್ದ ಆರೋಪಿ ಸನಾ ಬೇಡಿ, ಪ್ರಶ್ನೆಪತ್ರಿಕೆಯನ್ನು ವಾಟ್ಸಾಪ್​ ಮೂಲಕ ಈತನಿಗೆ ಕಳುಹಿಸಿದ್ದಳು ಎನ್ನಲಾಗ್ತಿದೆ.

ಪ್ರಶ್ನೆ‌ಪತ್ರಿಕೆ ವಿಚಾರವಾಗಿಯೇ ಇಬ್ಬರು ಚಾಟ್ ಮಾಡಿಕೊಂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾನ್ಸ್​ಟೇಬಲ್​ ಹಾವೇರಿಯಲ್ಲಿ ನಾಪತ್ತೆಯಾಗಿದ್ದ.

ಕಾನ್ ಸ್ಟೇಬಲ್ ಜೊತೆಗೆ ಕೆಪಿಎಸ್​ಸಿ ನೌಕರ ಸಹ ಬಂಧನ

ಪ್ರಕರಣದಲ್ಲಿ ಕಾನ್ ಸ್ಟೇಬಲ್ ಜೊತೆಗೆ ಕೆಪಿಎಸ್​ಸಿ ನೌಕರನ ಬಂಧನವೂ ಆಗಿದೆ. ಬಂಧನಕ್ಕೊಳಗಾಗಿರುವ ಬಾಗಲಕೋಟೆ ಮೂಲದ ರಮೇಶ್ ಹೆರಕಲ್ ತನ್ನ ರೂಮ್ ಮೇಟ್ ಆಗಿರುವ ಹಾಗೂ ಕೆಪಿಎಸ್​ಸಿ ಅಕೌಂಟ್​ಟೆಂಟ್ ಆಗಿದ್ದ ಬಸವರಾಜ್​ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಣ ವಿಭಾಗದಲ್ಲಿ ಸ್ಟೆನೋಗ್ರಾಫರ್ ಆಗಿದ್ದ ಸನಾ ಬೇಡಿ, ಸ್ನೇಹಿತ ರಮೇಶ್​ಗೆ ಪೆನ್​ಡ್ರೈವ್​ ನೀಡಿ ಪ್ರಶ್ನೆಪತ್ರಿಕೆ ಸೋರಿಕೆಗೆ ಸಹಕರಿಸಿದ್ದಳು. ಈತ ಇದೇ ಪ್ರಶ್ನೆಪತ್ರಿಕೆಯನ್ನು ಬಸವರಾಜ್‌ಗೆ ಕಳುಹಿಸಿದ್ದಾನೆ. ಬಳಿಕ ಈತ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Last Updated : Jan 27, 2021, 9:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.