ETV Bharat / city

ಸಂತೋಷ್ ಪಾಟೀಲ್ ಕುಟುಂಬಕ್ಕೆ ಕನಿಷ್ಠ 1ಕೋಟಿ ರೂ. ಪರಿಹಾರ ನೀಡಲು ಡಾ.ಜಿ.ಪರಮೇಶ್ವರ್ ಒತ್ತಾಯ - 40% ಕಮಿಷನ್​ ಬಗ್ಗೆ ಇಡೀ ಸರ್ಕಾರದ ಮೇಲೆ ತನಿಖೆ ನಡೆಸಬೇಕು

ಬಿಜೆಪಿ ಸರಕಾರದ 40% ವಿಚಾರ ಸಂತೋಷ್ ಪಾಟೀಲ್ ಸಾವಿನಿಂದ ಎಲ್ಲರಿಗೂ ಗೊತ್ತಾಗಿದೆ. ಆದರೆ, ಸಂತೋಷ್ ಪಾಟೀಲ್ ತನಗೆ ಯಾರೆಂದೇ ಗೊತ್ತಿಲ್ಲ ಎಂದು ಹೇಳುವ ಈಶ್ವರಪ್ಪನವರಿಗೆ ಗೊತ್ತಿಲ್ಲದೆ ನಾಲ್ಕು ಕೋಟಿ ರೂ. ಕಾಮಗಾರಿ ಮಾಡಿದ್ದಾರೆಯೇ?. ಆದ್ದರಿಂದ 40% ಭ್ರಷ್ಟಾಚಾರದ ವಿಚಾರ ತನಿಖೆಯಾಗಲಿ..

G. Parameshwara
ಡಾ.ಜಿ.ಪರಮೇಶ್ವರ್
author img

By

Published : Apr 16, 2022, 7:48 PM IST

ಮಂಗಳೂರು : ಸಚಿವ ಈಶ್ವರಪ್ಪನವರು ತಾವು ಭ್ರಷ್ಟಾಚಾರಿ ಎಂದು ಒಪ್ಪಿದ ಕಾರಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ‌ನೀಡಿದ್ದಾರೆ. ಆದ್ದರಿಂದ ತಕ್ಷಣ ಅವರನ್ನು ಬಂಧಿಸಿ ತನಿಖೆ ನಡೆಸಲಿ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು. ಸಚಿವ ಈಶ್ವರಪ್ಪನವರನ್ನು ಬಂಧಿಸುವಂತೆ ಒತ್ತಾಯಿಸಿನಗರದ ಕ್ಲಾಕ್ ಟವರ್ ಮುಂಭಾಗ ಕಾಂಗ್ರೆಸ್ ನಡೆಸಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅದಲ್ಲದೆ ‌ಮೃತ ಸಂತೋಷ್ ಪಾಟೀಲ್ ಕುಟುಂಬಕ್ಕೆ ಕನಿಷ್ಠ 1ಕೋಟಿ ರೂ. ಪರಿಹಾರ ನೀಡಬೇಕು. ಪ್ರಧಾನಿಯಿಂದ ಹಿಡಿದು ರಾಜ್ಯ ಸರ್ಕಾರದವರೆಗೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡಬೇಡಿ. ಜನರು ನಿಮ್ಮನ್ನು ಕ್ಷಮಿಸೋಲ್ಲ. ಇವತ್ತಲ್ಲ ನಾಳೆ ಆಚೆಗೆ ಹಾಕುತ್ತಾರೆ ಎಂದರು.

ಸಂತೋಷ್ ಪಾಟೀಲ್ ಕುಟುಂಬಕ್ಕೆ ಕನಿಷ್ಠ 1ಕೋಟಿ ರೂ. ಪರಿಹಾರ ನೀಡಲು ಡಾ.ಜಿ.ಪರಮೇಶ್ವರ್ ಒತ್ತಾಯ

ಬಿಜೆಪಿ ಸರಕಾರದ 40% ವಿಚಾರ ಸಂತೋಷ್ ಪಾಟೀಲ್ ಸಾವಿನಿಂದ ಎಲ್ಲರಿಗೂ ಗೊತ್ತಾಗಿದೆ. ಆದರೆ, ಸಂತೋಷ್ ಪಾಟೀಲ್ ತನಗೆ ಯಾರೆಂದೇ ಗೊತ್ತಿಲ್ಲ ಎಂದು ಹೇಳುವ ಈಶ್ವರಪ್ಪನವರಿಗೆ ಗೊತ್ತಿಲ್ಲದೆ ನಾಲ್ಕು ಕೋಟಿ ರೂ. ಕಾಮಗಾರಿ ಮಾಡಿದ್ದಾರೆಯೇ?. ಆದ್ದರಿಂದ 40% ಭ್ರಷ್ಟಾಚಾರದ ವಿಚಾರ ತನಿಖೆಯಾಗಲಿ. ಇಡೀ ಸರಕಾರದ ಮೇಲೆಯೇ ತನಿಖೆಯಾಗಲಿ. ಸರಕಾರವನ್ನು ಬರ್ಖಾಸ್ತು ಮಾಡಬೇಕೆಂದು ಒತ್ತಾಯಿಸಿ ರಾಜ್ಯಪಾಲರಿಗೆ ಕಾಂಗ್ರೆಸ್ ಮನವಿ ಮಾಡಿದೆ ಎಂದರು.

ಪ್ರತಿಭಟನೆಯಲ್ಲಿ ಈಶ್ವರಪ್ಪನವರ ಪ್ರತಿಕೃತಿಗೆ ಕೈಕೋಳ ಹಾಕಿ ಥಳಿಸಲಾಯಿತು. ಅಲ್ಲದೆ ಪ್ರತಿಕೃತಿಯನ್ನು ಬೆಂಕಿಹಚ್ಚಿ ಸುಡಲಾಯಿತು. ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷ‌ ಸ್ಪರ್ಧೆ ಬಗ್ಗೆ ಸಿಎಂ ಜಗನ್​ ಜತೆ ಚರ್ಚೆ : ಆಂಧ್ರ ಸಚಿವೆ ಉಷಾ ಶ್ರೀಚರಣ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.