ETV Bharat / city

ಪ್ರಿಯಾಂಕ ಗಾಂಧಿ ಬಂಧಿಸಿದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವ ಸಿಎಂ ಯೋಗಿ ಆದಿತ್ಯನಾಥ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರು ನಗರದ ಕಾಂಗ್ರೆಸ್ ಕಚೇರಿ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.

author img

By

Published : Jul 20, 2019, 6:44 PM IST

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ.

ಮಂಗಳೂರು: ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವ ಸಿಎಂ ಯೋಗಿ ಆದಿತ್ಯನಾಥ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರು ನಗರದ ಕಾಂಗ್ರೆಸ್ ಕಚೇರಿ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.

ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ತೊಂದರೆ ಕೊಟ್ಟ ಈ ಹ್ಯೇಯ ಕೃತ್ಯ ಖಂಡಿಸಿದ ಪ್ರತಿಭಟನಾಕಾರರು ಯೋಗಿ ಆದಿತ್ಯನಾಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ.

ಈ ವೇಳೆ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ನೂರು ವರ್ಷಗಳ ಹಿಂದೆ ದಲಿತರು, ದುರ್ಬಲರು ಹಾಗೂ ಹಿಂದುಳಿದವರ ಮೇಲೆ ಎಸಗುತ್ತಿದ್ದ ಶೋಷಣೆಯಂತೆಯೇ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅದು ಮರುಕಳಿಸುತ್ತಿದೆ ಎಂದು ಆರೋಪಿಸಿದರು.

ಇತ್ತೀಚೆಗೆ ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಪಂಚಾಯಿತಿ ಅಧ್ಯಕ್ಷರೊಬ್ಬರು 10 ಜನರನ್ನು ಗುಂಡಿಕ್ಕಿ ಕೊಂದಿರುವ ಘಟನೆ ನಡೆದಿದೆ. ಬಿಹಾರದಲ್ಲಿ ಮೂವರನ್ನು ಹೊಡೆದು ಸಾಯಿಸಲಾಗಿದೆ. ಇದೇ ರೀತಿ ದೇಶದ ನಾನಾ ಭಾಗಗಳಲ್ಲಿ ಇಂತಹ ಘಟನೆಗಳು ಜರುಗುತ್ತಿವೆ. ಧರ್ಮದ ಹೆಸರಿನಲ್ಲೂ ಹಿಂಸೆಗಳು ನಡೆಯುತ್ತಿವೆ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಪ್ರತಿಯೊಂದು ಸಮಾಜಕ್ಕೂ ನೂರಾರು ಸೌಲಭ್ಯಗಳನ್ನು ನೀಡಿದೆ. ಈ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅದೇ ದುರ್ಬಲ ವರ್ಗದವರನ್ನು ಶೋಷಿಸುತ್ತಿದೆ. ಗುಂಡಿನ ದಾಳಿಗೆ ಬಲಿಯಾದ 10 ಮಂದಿ ಕುಟುಂಬದ ಸದಸ್ಯರಿಗೆ ಸಾಂತ್ವನ‌ ಹೇಳಲು ಹೋಗಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಲಾಗಿದೆ. ಅಲ್ಲದೆ, ನೀರು ಮತ್ತು ವಿದ್ಯುತ್​ ಸಂಪರ್ಕ ನೀಡದೇ ಪ್ರವಾಸಿ ಮಂದಿರದಲ್ಲಿ ಕೂಡಿಹಾಕಿದ್ದರು. ಇದು ಉತ್ತರ ಪ್ರದೇಶ ಸರ್ಕಾರದ ನಡೆಯನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Intro:ಮಂಗಳೂರು: ಸುಮಾರು ನೂರು ವರ್ಷಗಳ ಹಿಂದೆ ಸಮಾಜದ ದುರ್ಬಲ ವರ್ಗದವರ ಮೇಲೆ ನಡೆಯುತ್ತಿದ್ದ ಶೋಷಣೆ ಇಂದು ಮರುಕಳಿಸುತ್ತಿದೆ. ದೇಶದಲ್ಲಿ ಬಿಜೆಪಿ ಅಧಿಕಾರ ಕೈಗೆತ್ತಿಕೊಂಡ ಈ ಐದಾರು ವರ್ಷಗಳಲ್ಲಿ ದಲಿತರು, ದುರ್ಬಲರು ಹಾಗೂ ಹಿಂದುಳಿದವರ ಮೇಲಿನ ದಬ್ಬಾಳಿಕೆ ಅತಿಯಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದರು.

ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿರುವ ಯೋಗಿ ಸರಕಾರ ಹಾಗೂ ಕೇಂದ್ರ ಸರಕಾರದ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕಾಂಗ್ರೆಸ್ ಕಚೇರಿಯ ಮುಂಭಾಗ ಇಂದು ಬೆಳಗ್ಗೆ ನಡೆದ ಪ್ರತಿಭಟನೆಯನ್ನು‌ ಉದ್ದೇಶಿಸಿ ಅವರು ಮಾತನಾಡಿದರು‌.

Body:ಇತ್ತೀಚೆಗೆ ಉತ್ತರಪ್ರದೇಶದ ಹಳ್ಳಿಯೊಂದರ ಸರಪಂಚ(ಪಂಚಾಯತ್ ಅಧ್ಯಕ್ಷ)ನೋರ್ವ 10 ಜನರನ್ನು ಗುಂಡಿಕ್ಕಿ ಕೊಂದು ಹಾಕಿದ ಘಟನೆ ನಡೆದಿದೆ. ಇಂತಹ ಪ್ರಕರಣ ಉತ್ತರ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ. ಬಿಹಾರದಲ್ಲಿ ಮೂರು ಜನರನ್ನು ಹೊಡೆದು ಸಾಯಿಸಲಾಗಿದೆ. ದೇಶದ ನಾನಾ ಭಾಗಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಧರ್ಮದ ಹೆಸರಿನಲ್ಲಿಯೂ ಹಿಂಸೆಗಳು ನಡೆಯುತ್ತಿದೆ. ಹಿಂದೆ ಕಾಂಗ್ರೆಸ್ ಪಕ್ಷ ಸಮಾಜದ ದುರ್ಬಲ ವರ್ಗದ ಜನರಿಗೆ ವಿವಿಧ ಸವಲತ್ತುಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಲಾಗುತ್ತಿತ್ತು. ಆದರೆ ಇಂದು ಅದೇ ದುರ್ಬಲ ವರ್ಗದವರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ರಮಾನಾಥ ರೈಯವರು ಖೇದ ವ್ಯಕ್ತಪಡಿಸಿದರು.

ನಮ್ಮ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಉತ್ತರ ಪ್ರದೇಶದಲ್ಲಿ ಗುಂಡಿನ ದಾಳಿಗೆ ಬಲಿಯಾದ 10 ಜನರ ಕುಟುಂಬದ ಮಂದಿಗೆ ಸಾಂತ್ವನ‌ ಹೇಳಲು ಹೋದ ಸಂದರ್ಭ ಅವರನ್ನು ಬಂಧನ ಮಾಡಲಾಯಿತು. ಈ ಸಂದರ್ಭ ಪ್ರವಾಸಿ ಮಂದಿರವೊಂದರಲ್ಲಿ ಅವರನ್ನು ಕೂಡಿ ಹಾಕಲಾಗಿದೆ. ಉತ್ತರಪ್ರದೇಶ ಸರಕಾರ ಈ ಮೂಲಕ ಯಾವ ರೀತಿ ತನ್ನ ಕೆಟ್ಟ ನಡವಳಿಕೆಯನ್ನು ತೋರಿಸಿತೆಂದರೆ, ಆ ಪ್ರವಾಸಿ ಮಂದಿರದ ವಿದ್ಯುತ್ ಹಾಗೂ ನೀರಿನ ಸಂಪರ್ಕ ವ್ಯವಸ್ಥೆಯನ್ನು ಕಡಿತಗೊಳಿಸಿತು. ಇದನ್ನು ನಾವು ಖಂಡಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಪ್ರಿಯಾಂಕಾ ಗಾಂಧಿಯವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಜೈಲಿಗೆ ಹೋಗಿದ್ದವರ ಕುಟುಂಬದ ಸದಸ್ಯೆ. ಕೆಲವರು ಜೈಲಿಗೆ ಹೋದವರಿದ್ದಾರೆ. ಅವರು ದೊಡ್ಡ ಹುದ್ದೆಯನ್ನು ಅಲಂಕರಿಸಿ ಕೇಂದ್ರ ಸರಕಾರದಲ್ಲಿದ್ದಾರೆ. ಈ ಮೂಲಕ‌ ತಪ್ಪು ಮಾಡಿ ಜೈಲಿಗೆ ಹೋದವರು ಅಧಿಕಾರ ನಡೆಸುತ್ತಿದ್ದಾರೆ. ದೇಶದ ಸ್ವಾತಂತ್ರ್ಯಕ್ಕೋಸ್ಕರ ಜೈಲಿಗೆ ಹೋದ ಕುಟುಂಬದವರು ತಪ್ಪು ಮಾಡಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿಯವರಿಗೆ ತೊಂದರೆ ಕೊಟ್ಟ ಈ ಹ್ಯೇಯ ಕೃತ್ಯವನ್ನು ನಾವು ಖಂಡಿಸುತ್ತಿದ್ದೇವೆ. ದೇಶದಲ್ಲಿ ನಡೆಯುತ್ತಿರುವ ಇಂತಹ ಅಹಿತಕರ ಘಟನೆಗಳನ್ನು ಆಡಳಿತ ಮಾಡುತ್ತಿರುವಂತಹ ಸರಕಾರ ಮಾಡಬೇಕೆಂದು ರಮಾನಾಥ ರೈ ಹೇಳಿದರು.

Reporter_Vishwanath Panjimogaru

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.