ETV Bharat / city

ಲಾಕ್​​ಡೌನ್‌ ಇದ್ರೂ ಜನರೊಂದಿಗೆ ತಾಳ್ಮೆಯಿಂದ ವರ್ತಿಸಲು ಪೊಲೀಸರಿಗೆ ಕಮಿಷನರ್ ಸೂಚನೆ..

ಕೇರಳದಿಂದ ಬರುವ ಅಗತ್ಯ ಸಾಮಾಗ್ರಿಗಳನ್ನು ತರುವ ಗೂಡ್ಸ್ ವಾಹನಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.

Mangalore Police Commissioner Dr. PPS Harsha
ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ
author img

By

Published : Mar 27, 2020, 11:04 PM IST

ಮಂಗಳೂರು : ಲಾಕ್​​​​​ಡೌನ್ ಸಂದರ್ಭದಲ್ಲಿ ಜನರೊಂದಿಗೆ ತಾಳ್ಮೆಯಿಂದ ವರ್ತಿಸಿ. ಯಾವುದೇ ಕಾರಣಕ್ಕೂ ಲಾಠಿ ಎತ್ತಬೇಡಿ. ಅನಗತ್ಯವಾಗಿ ಜನರನ್ನು ನೋಯಿಸಬೇಡಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ ಎಸ್ ಹರ್ಷ ಅವರು ಸಿಬ್ಬಂದಿಗೆ ಸೂಚನೆ ನೀಡಿರುವ ಬಗೆಗಿನ ಆಡಿಯೋವೊಂದು ವೈರಲ್​​ ಆಗಿದೆ.

ಆಯುಕ್ತರು ಪೊಲೀಸರಿಗೆ ಸೂಚನೆ ನೀಡಿದ್ದಾರೆನ್ನಲಾದ ಈ ಆಡಿಯೋದಲ್ಲಿ, 'ಅಗತ್ಯ ಸಾಮಾಗ್ರಿಗಳಿಗಾಗಿ ಹೊರಗಡೆ ಬಂದಿರುವ ಜನರಿಗೆ ತೊಂದರೆ ಕೊಡಬೇಡಿ. ಅಗತ್ಯ ಸಾಮಾಗ್ರಿಗಳ ಗೂಡ್ಸ್‌ ಲಾರಿ, ವಾಹನಗಳನ್ನು ಯಾವುದೇ ಕಾರಣಕ್ಕೂ ತಡೆದು ನಿಲ್ಲಿಸಬೇಡಿ. ಅದರ ಚಾಲಕರನ್ನು ಪರೀಕ್ಷಿಸಿ ಅವರಿಗೆ ಜ್ವರ, ಸೋಂಕು ಇದ್ದಲ್ಲಿ ಮಾತ್ರ ಅವರನ್ನು ತಡೆಯಬೇಕು. ಅನಗತ್ಯವಾಗಿ ಲಾರಿಗಳನ್ನು ಹೋಗಲು ಬಿಡದೆ ಸಮಸ್ಯೆ ಸೃಷ್ಟಿಸದಿರಿ ಎಂದಿದ್ದಾರೆ.

ಸರ್ಕಾರಿ ಐಡಿ ಕಾರ್ಡ್ ಇರುವವರು, ಬ್ಯಾಂಕ್ ಸಿಬ್ಬಂದಿ ಮತ್ತು ‘ಜಿ’ ನಂಬರ್ ಪ್ಲೇಟ್ ಇರುವ ವಾಹನಗಳನ್ನು ತಡೆದು ನಿಲ್ಲಿಸದಿರಿ. ಕೇರಳ ರಾಜ್ಯದಿಂದ ಬರುವ ಯಾವುದೇ ವ್ಯಕ್ತಿಯನ್ನು ಒಳಗೆ ಬಿಡಲೇಬಾರದು ಎಂದು ಅವರು ತಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.