ETV Bharat / city

ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಪ್ರಭಾಕರ್​ ಭಟ್​ಗೆ ಆಹ್ವಾನ ವಿರೋಧಿಸಿ ಸಿಎಫ್ಐ ಪ್ರತಿಭಟನೆ - CFI protest in mangalore

ಅವರು ಜಿಲ್ಲೆಯಾದ್ಯಂತ ಕೋಮು ದ್ವೇಷದ ಭಾಷಣ ಮಾಡಿ ಸಮಾಜದ ಶಾಂತಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾರೆ. ಇಂತಹವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿರುವುದು ದುರದೃಷ್ಟಕರ. ಹಾಗಾಗಿ, ಮಂಗಳೂರು ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಕಲ್ಲಡ್ಕ ಪ್ರಭಾಕರ್​ ಭಟ್​ ಹೆಸರನ್ನು ಕೈಬಿಡಬೇಕು ಎಂದು ಸಿಎಫ್ಐ ಕಾರ್ಯಕರ್ತರು ಮನವಿ ಮಾಡಿದರು..

CFI protest against Kalladka prabhakar bhat
ಕಲ್ಲಡ್ಕ ಪ್ರಭಾಕರ್​ ಭಟ್ ವಿರುದ್ಧ ಸಿಎಫ್ಐ ಪ್ರತಿಭಟನೆ
author img

By

Published : Mar 30, 2022, 1:00 PM IST

ಮಂಗಳೂರು (ದಕ್ಷಿಣಕನ್ನಡ) : ಕೊಣಾಜೆಯ ಮಂಗಳೂರು ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆರ್​​ಎಸ್​​ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್​ ಭಟ್ ಆಹ್ವಾನವನ್ನು ವಿರೋಧಿಸಿ ಮಂಗಳೂರು ವಿವಿ ಗೇಟ್ ಮುಂಭಾಗದಲ್ಲಿ ಸಿಎಫ್ಐ ಪ್ರತಿಭಟನೆ ನಡೆಸಿತು. ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ್​ ಭಟ್ ಭಾಗಿಯಾಗಿದ್ದಾರೆ.

ಮಂಗಳೂರು ವಿವಿ ಗೇಟ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಸಿಎಫ್ಐ ಕಾರ್ಯಕರ್ತರು ಕಲ್ಲಡ್ಕ ಪ್ರಭಾಕರ್ ಭಟ್ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು. ಅಲ್ಲದೇ ಮಂಗಳೂರು ವಿವಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಸಿಎಫ್ಐ ವಿದ್ಯಾರ್ಥಿ ನಾಯಕ ಸೇರಿ ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡರು.

ಕಲ್ಲಡ್ಕ ಪ್ರಭಾಕರ್​ ಭಟ್ ವಿರುದ್ಧ ಸಿಎಫ್ಐ ಪ್ರತಿಭಟನೆ

ಕಾರ್ಯಕ್ರಮದಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೆಸರನ್ನು ಕೈಬಿಡುವಂತೆ ಮಂಗಳೂರು ವಿವಿ ಕುಲಪತಿ ಡಾ.ಪಿ.ಎಸ್. ಯಡಪಡಿತ್ತಾಯರಿಗೆ ಸಿಎಫ್ಐ ಕಾರ್ಯಕರ್ತರು ಮನವಿ ಮಾಡಿದರು. ಮಂಗಳೂರು ವಿವಿಯ ಅಧಿಕೃತ ಕಾರ್ಯಕ್ರಮಕ್ಕೆ ಕೋಮುದ್ವೇಷ ಬಿತ್ತುವ ಭಾಷಣಗಾರ ಪ್ರಭಾಕರ ಭಟ್ ಅವರನ್ನು ಕರೆದಲ್ಲಿ ಶೈಕ್ಷಣಿಕ ವಾತಾವರಣದಲ್ಲಿ ಕೋಮು ವೈಷಮ್ಯ ಬೆಳೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಚುನಾವಣೆ ಯಾವಾಗ ನಡೆದರೂ ನಾವು ಸಿದ್ಧ: ಇಡಿ - ಸಿಬಿಐ ಬಿಜೆಪಿ ಅಂಗ ಪಕ್ಷಗಳು ಎಂದ ಕುಮಾರಸ್ವಾಮಿ

ಅವರು ಜಿಲ್ಲೆಯಾದ್ಯಂತ ಕೋಮು ದ್ವೇಷದ ಭಾಷಣ ಮಾಡಿ ಸಮಾಜದ ಶಾಂತಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾರೆ. ಇಂತಹವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿರುವುದು ದುರದೃಷ್ಟಕರ. ಹಾಗಾಗಿ, ಮಂಗಳೂರು ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಕಲ್ಲಡ್ಕ ಪ್ರಭಾಕರ್​ ಭಟ್​ ಹೆಸರನ್ನು ಕೈಬಿಡಬೇಕು ಎಂದು ಸಿಎಫ್ಐ ಕಾರ್ಯಕರ್ತರು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.