ಮಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಇಂದು ಪ್ರಕಟಗೊಂಡಿದ್ದು, ನ್ಯಾಚುರೋಪಥಿ, ಬಿಎಸ್ಸಿ ಕೃಷಿ, ಬಿಎಸ್ಸಿ ಪಶು ವಿಜ್ಞಾನ, ಫಾರ್ಮಸಿ, ಇಂಜಿನಿಯರಿಂಗ್, ಮತ್ತು ಯೋಗ ವಿಜ್ಞಾನ ವಿಭಾಗಗಳಲ್ಲಿ ಮೊದಲ 10 ಸ್ಥಾನಗಳಲ್ಲಿ ದ.ಕ. ಜಿಲ್ಲೆಯ 13 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಈ ಮೂಲಕ ಸಿಂಹಪಾಲು ದ.ಕ.ಜಿಲ್ಲೆಗೆ ಸಿಕ್ಕಿದೆ.
ಬಿಎಸ್ಸಿ ಕೃಷಿ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿ ವಿದ್ಯಾರ್ಥಿ ವರುಣ್ ಗೌಡ ಎ.ಬಿ. ಪ್ರಥಮ ಸ್ಥಾನ ಗಳಿಸಿದ್ದಾರೆ. ಅದೇ ರೀತಿ ಯೋಗ ವಿಜ್ಞಾನ ಮತ್ತು ನ್ಯಾಚುರೋಪಥಿ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿ ಆರ್ನವ್ ಅಯ್ಯಪ್ಪ ಪಿ.ಪಿ. ಅಗ್ರ ಸ್ಥಾನ ಪಡೆದಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿ ಶಶಾಂಕ್ ಪಿ. ತೃತೀಯ ಸ್ಥಾ ನ ಪಡೆದರೆ, ಪುತ್ತೂರು ವಿವೇಕಾನಂದ ಪಿಯು ಕಾಲೇಜಿನ ದ್ಯಾರ್ಥಿ ಗೌರೀಶ ಕಜಂಪಾಡಿ 9ನೇ ರ್ಯಾಂಕ್ ಗಳಿಸಿದ್ದಾರೆ.
ಬಿಎಸ್ಸಿ ಕೃಷಿ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿ ಆರ್ನವ್ ಅಯ್ಯಪ್ಪ ಪಿ.ಪಿ. 4ನೇ ರ್ಯಾಂಕ್, ಮಂಗಳೂರು ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿ ಎಚ್.ಸಿ.ಗೌರೀಶ್ 9ನೇ ರ್ಯಾಂಕ್ ಗಳಿಸಿದ್ದಾರೆ.
ಬಿಎಸ್ಸಿ ಪಶು ವಿಜ್ಞಾನ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿ ಆರ್ನವ್ ಅಯ್ಯಪ್ಪ ಪಿ.ಪಿ. 5ನೇ ರ್ಯಾಂಕ್, ಮಂಗಳೂರು ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿ ವರುಣ್ ಗೌಡ ಎ.ಬಿ. ಹಾಗೂ ಮಂಗಳೂರಿನ ಶಾರದಾ ಪಿಯು ಕಾಲೇಜು ವಿದ್ಯಾರ್ಥಿ ತೇಜಸ್ ಭಟ್ 10ನೇ ಸ್ಥಾನ ಗಳಿಸಿದ್ದಾರೆ.
ಮೂಡುಬಿದಿರೆ ಆಳ್ವಾಸ್ ಪಿಯು ಕಾಲೇಜು ವಿದ್ಯಾರ್ಥಿ ಆರ್ನವ್ ಅಯ್ಯಪ್ಪ ಪಿ.ಪಿ. ಬಿ ಫಾರ್ಮಾ/ ಡಿ ಫಾರ್ಮಾ ವಿಭಾಗದಲ್ಲಿ 7ನೇ ಸ್ಥಾನ ಗಳಿಸಿದ್ದು, ಪುತ್ತೂರು ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿ ಗೌರೀಶ ಕಜಂಪಾಡಿ ಫಾರ್ಮಾ/ ಡಿ ಫಾರ್ಮಾದಲ್ಲಿ 10ನೇ ರ್ಯಾಂಕ್ ಗಳಿಸಿದ್ದಾರೆ.
ಯೋಗ ವಿಜ್ಞಾನ ಮತ್ತು ನ್ಯಾಚುರೋಪಥಿ ವಿಭಾಗದಲ್ಲಿ ಮಂಗಳೂರು ಎಕ್ಸ್‌ಪರ್ಟ್ ಪಿಯು ಕಾಲೇಜು ವಿದ್ಯಾರ್ಥಿ ವರುಣ್ ಗೌಡ ಎ.ಬಿ. 5ನೇ ಸ್ಥಾನ ಗಳಿಸಿದ್ದಾರೆ.