ETV Bharat / city

ಕೇಂದ್ರ ಸರ್ಕಾರ ಬ್ಯಾಂಕ್​ಗಳ ಮರ್ಜರ್ ಮಾಡುತ್ತಿಲ್ಲ, ಮರ್ಡರ್ ಮಾಡುತ್ತಿದೆ: ವಿನ್ಸೆಂಟ್ ಡಿಸೋಜ - ಕೇಂದ್ರದ ಬಿಜೆಪಿ ಸರ್ಕಾರದ ಬ್ಯಾಂಕ್ ವಿಲೀನ ಪ್ರಕ್ರಿಯೆ

ಕಾರ್ಪೊರೇಷನ್ ಬ್ಯಾಂಕ್ ವಿಲೀನ ಕೇಂದ್ರದ ತಪ್ಪು ನಿರ್ಧಾರ. ವಿಲೀನಗೊಂಡ ಬಳಿಕ ಕಾರ್ಪೊರೇಷನ್ ಬ್ಯಾಂಕ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಆದ್ದರಿಂದ ಇದು ಬ್ಯಾಂಕ್​ಗಳ ಮರ್ಜರ್ ಅಲ್ಲ ಮರ್ಡರ್ ಎಂದು ಕೇಂದ್ರದ ಬಿಜೆಪಿ ಸರ್ಕಾರದ ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ವಿನ್ಸೆಂಟ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೊರೇಷನ್ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ
author img

By

Published : Aug 31, 2019, 4:29 AM IST

ಮಂಗಳೂರು: ಕೇಂದ್ರದ ಬಿಜೆಪಿ ಸರ್ಕಾರದ ಬ್ಯಾಂಕ್ ವಿಲೀನ ಪ್ರಕ್ರಿಯೆ ಈ ಅವಧಿಯಲ್ಲಿಯೂ ಮತ್ತೆ ಮುಂದುವರಿದಿದ್ದು, ಈ ಅವಧಿಯ ವಿಲೀನ ಪ್ರಕ್ರಿಯೆಯಲ್ಲಿ ಕರಾವಳಿಯಲ್ಲಿ ಜನ್ಮ ತಳೆದ ಮೂರು ಬ್ಯಾಂಕ್​ಗಳು ವಿಲೀನಗೊಳ್ಳಲಿವೆ.

ಕೇಂದ್ರ ಬಿಜೆಪಿ‌ ಸರಕಾರ ಕಳೆದ ಅವಧಿಯಲ್ಲಿ ನಡೆಸಿದ ಬ್ಯಾಂಕ್ ವಿಲೀನ ಪ್ರಕ್ರಿಯೆಯಲ್ಲಿ ಕರಾವಳಿಯ ಪ್ರತಿಷ್ಠಿತ ವಿಜಯ ಬ್ಯಾಂಕ್ ತನ್ನ ಅಸ್ತಿತ್ವ ಕಳೆದುಕೊಂಡು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾಯಿತು. ಈ ಅವಧಿಯಲ್ಲಿ ಮತ್ತೆ ಕರಾವಳಿಯಲ್ಲಿ ಹುಟ್ಟಿದ ಕೆನರಾ ಬ್ಯಾಂಕ್, ಕಾರ್ಪೊರೇಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್​ಗಳು ವಿಲೀನಗೊಳ್ಳಲಿವೆ. ಈ ಬ್ಯಾಂಕ್ ವಿಲೀನದ ಸಾಧ್ಯತೆ-ಭಾದ್ಯತೆಗಳ ಬಗ್ಗೆ ಕಾರ್ಪೊರೇಷನ್ ಬ್ಯಾಂಕ್​​ನ ಕೇಂದ್ರ ಕಚೇರಿಯ ಉದ್ಯೋಗಿ ಹಾಗೂ ಕಾರ್ಪೊರೇಷನ್ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ ತಮ್ಮ ಅಭಿಪ್ರಾಯವನ್ನು ಶುಕ್ರವಾರ ಈಟಿವಿ ಭಾರತ್​​ನೊಂದಿಗೆ ಹಂಚಿಕೊಂಡಿದ್ದಾರೆ.

ಕಾರ್ಪೊರೇಷನ್ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ

ಇಂದಿನ ದಿನ ಬ್ಯಾಂಕ್ ಉದ್ಯೋಗಿಗಳ ಪಾಲಿಗೆ ಕರಾಳದಿನ‌. ಇಂದು ಕೇಂದ್ರ ಸರ್ಕಾರ ನಾಲ್ಕು ಹಂತದ ವಿಲೀನ ಪ್ರಕ್ರಿಯೆ ಆರಂಭಿಸಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್​​​ನಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಬ್ಯಾಂಕ್ ಉದ್ಯೋಗಿಗಳು ಸದಸ್ಯರಾಗಿದ್ದಾರೆ. ನಾವೆಲ್ಲರೂ ಈ ವಿಲೀನ ಪ್ರಕ್ರಿಯೆಯನ್ನು ವಿರೋಧಿಸಿ ಆದಷ್ಟು ಶೀಘ್ರವಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.

ಸಾವರ್ಜನಿಕರಿಗೆ ಮನವರಿಕೆ ಮಾಡಿದ್ದಲ್ಲಿ ಈ ವಿಲೀನ ಪ್ರಕ್ರಿಯೆಯನ್ನು ತಡೆಯಲು ಸಾಧ್ಯವಾಗುತ್ತದೆ. ಕಳೆದ ವರ್ಷ ಕೇಂದ್ರ ಸರ್ಕಾರ ಎಫ್ಆರ್​ಡಿಎ ಬಿಲ್‌ ಪಾಸ್ ಮಾಡಿತು. ಯಾಕೆಂದರೆ ನಷ್ಟದಲ್ಲಿರುವ ಬ್ಯಾಂಕುಗಳನ್ನು ಲಾಭದ ಹಾದಿಗೆ ತರಲು ಜನರ ಲಕ್ಷಗಟ್ಟಲೆ ಕೋಟಿ ರೂ. ಠೇವಣಿಗಳನ್ನು ಹೂಡಿಕೆ ಮಾಡಲು ಕೇಂದ್ರ ಸರಕಾರ ಹುನ್ನಾರ ಮಾಡಿತ್ತು. ಇದರ ವಿರುದ್ಧವಾಗಿ ನಾವು ನಮ್ಮ ಯೂನಿಯನ್ ಮುಖಾಂತರ ಹೋರಾಟ ನಡೆಸಿ ಎಫ್ಆರ್​ಡಿಎ ಬಿಲ್ ರದ್ದುಗೊಳ್ಳುವಂತೆ ಮಾಡಿದ್ದೆವು. ಆದ್ದರಿಂದ ನಾವೆಲ್ಲರೂ ಸೇರಿ ಹೋರಾಟ ಮಾಡಿದ್ದಲ್ಲಿ ಈ ವಿಲೀನ ಪ್ರಕ್ರಿಯೆಗೆ ಇತಿಶ್ರೀ ಹಾಡಬಹುದೆಂದು ಅನಿಸುತ್ತದೆ ಎಂದರು..

ಇದು ಬ್ಯಾಂಕ್​ಗಳ ಮರ್ಜರ್ ಅಲ್ಲ ಮರ್ಡರ್:

ಕೇಂದ್ರ ಸರ್ಕಾರ, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನಮಗೆ ದೊಡ್ಡ ಬ್ಯಾಂಕುಗಳ ಅವಶ್ಯಕತೆ ಇದೆ ಎಂದು ಹೇಳುತ್ತದೆ. ಇದರ ತದ್ವಿರುದ್ಧವಾಗಿ ಸಣ್ಣ ಪುಟ್ಟ ಬ್ಯಾಂಕ್​ಗಳನ್ನು ನಡೆಸಲು ಕೇಂದ್ರವೇ ಪರವಾನಿಗೆ ನೀಡುತ್ತಿದೆ. ಈ ಪರವಾನಿಗೆಗಳು ಬಂಡವಾಳ ಶಾಹಿಗಳಿಗೆ ದೊರಕುತ್ತದೆ. ಆದ್ದರಿಂದ ಬಂಡವಾಳ ಶಾಹಿಗಳಿಗೆ ಪೂರಕವಾಗಿ ಈ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ಸತತ ಲಾಭದ ಹಾದಿಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ವಿಲೀನ ಕೇಂದ್ರದ ತಪ್ಪು ನಿರ್ಧಾರ. ವಿಲೀನಗೊಂಡ ಬಳಿಕ ಕಾರ್ಪೊರೇಷನ್ ಬ್ಯಾಂಕ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಆದ್ದರಿಂದ ಇದು ಬ್ಯಾಂಕ್​ಗಳ ಮರ್ಜರ್ ಅಲ್ಲ ಮರ್ಡರ್ ಎಂದು ವಿನ್ಸೆಂಟ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.

Intro:ಮಂಗಳೂರು: ಕೇಂದ್ರದ ಬಿಜೆಪಿ ಸರಕಾರದ ಬ್ಯಾಂಕ್ ವಿಲೀನ ಪ್ರಕ್ರಿಯೆ ಈ ಅವಧಿಯಲ್ಲಿಯೂ ಮತ್ತೆ ಮುಂದುವರಿದಿದ್ದು, ಈ ಅವಧಿಯ ವಿಲೀನ ಪ್ರಕ್ರಿಯೆಯಲ್ಲಿ ಕರಾವಳಿಯಲ್ಲಿ ಜನ್ಮ ತಳೆದ ಮತ್ತೆ ಮೂರು ಬ್ಯಾಂಕ್ ಗಳು ವಿಲೀನಗೊಳ್ಳಲಿವೆ.

ಕೇಂದ್ರ ಬಿಜೆಪಿ‌ ಸರಕಾರ ಕಳೆದ ಅವಧಿಯಲ್ಲಿ ನಡೆಸಿದ ಬ್ಯಾಂಕ್ ವಿಲೀನ ಪ್ರಕ್ರಿಯೆಯಲ್ಲಿ ಕರಾವಳಿಯ ಪ್ರತಿಷ್ಠಿತ ವಿಜಯ ಬ್ಯಾಂಕ್ ತನ್ನ ಅಸ್ತಿತ್ವ ಕಳೆದುಕೊಂಡು ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾಯಿತು. ಈ ಅವಧಿಯಲ್ಲಿ ಮತ್ತೆ ಕರಾವಳಿಯಲ್ಲಿ ಹುಟ್ಟಿದ ಕೆನರಾ ಬ್ಯಾಂಕ್, ಕಾರ್ಪೊರೇಷನ್ ಹಾಗೂ ಸಿಂಡಿಕೇಟ್ ಬ್ಯಾಂಕುಗಳು ವಿಲೀನಗೊಳ್ಳಲಿವೆ. ಈ ಬ್ಯಾಂಕ್ ವಿಲೀನದ ಸಾಧ್ಯತೆ ಭಾದ್ಯತೆಗಳ ಬಗ್ಗೆ ಕಾರ್ಪೊರೇಷನ್ ಬ್ಯಾಂಕ್ ನ ಕೇಂದ್ರ ಕಚೇರಿಯ ಉದ್ಯೋಗಿ ಹಾಗೂ ಕಾರ್ಪೊರೇಷನ್ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಡಿಸೋಜ ತಮ್ಮ ಅನಿಸಿಕೆಯನ್ನು ಈಟಿವಿ ಭಾರತ್ ನೊಂದಿಗೆ ಹಂಚಿಕೊಂಡಿದ್ದಾರೆ.

Body:ಇಂದಿನ ದಿನ ಬ್ಯಾಂಕ್ ಉದ್ಯೋಗಿಗಳ ಪಾಲಿಗೆ ಕರಾಳದಿನ‌. ಇಂದು ಕೇಂದ್ರ ಸರಕಾರ ನಾಲ್ಕು ಹಂತದ ವಿಲೀನ ಪ್ರಕ್ರಿಯೆ ಆರಂಭಿಸಿದೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ನಲ್ಲಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಬ್ಯಾಂಕ್ ಉದ್ಯೋಗಿಗಳು ಸದಸ್ಯರಾಗಿದ್ದಾರೆ. ನಾವೆಲ್ಲರೂ ಈ ವಿಲೀನ ಪ್ರಕ್ರಿಯೆಯನ್ನು ವಿರೋಧಿಸಿ ಆದಷ್ಟು ಶೀಘ್ರವಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು.

ವಿಲೀನ ಪ್ರಕ್ರಿಯೆ ಪಟ್ಟಿಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ 1906ರಲ್ಲಿ ಉಡುಪಿಯಲ್ಲಿ ಆರಂಭಗೊಂಡಿತು. ಅಂದರೆ 116 ವರ್ಷದ ಇತಿಹಾಸ ವುಳ್ಳ ದೇಶದ ಪ್ರತಿಷ್ಠಿತ ಬ್ಯಾಂಕ್. ಅಲ್ಲದೆ ಸತತವಾಗಿ ಲಾಭದಿಂದಲೇ ಮುನ್ನಡೆಯುತ್ತಿರುವ ಬ್ಯಾಂಕ್. ಆದರೆ ಈಗ ಯೂನಿಯನ್ ಬ್ಯಾಂಕ್ ನೊಂದಿಗೆ ಆಂಧ್ರ ಬ್ಯಾಂಕ್ ಹಾಗೂ ಕಾರ್ಪೊರೇಷನ್ ಬ್ಯಾಂಕ್ ಗಳನ್ನು ಕೇಂದ್ರ ಸರಕಾರ ವಿಲೀನಗೊಳಿಸುವ ಹುನ್ನಾರ ನಡೆಸುತ್ತಿದೆ. ಬ್ಯಾಂಕ್ ನ ಇತಿಹಾಸ ವನ್ನೂ ಗಮನಿಸದೆ, ಉದ್ಯೋಗಿಗಳ ಭಾವನೆಗಳಿಗೆ ಧಕ್ಕೆ ತರುವಂತೆ ವಿಲೀನ ಗೊಳಿಸಲಾಗುತ್ತಿದೆ. ಇದರಿಂದ ಉದ್ಯೋಗಿಗಳು ಹಲವಾರು ಸಂಕಷ್ಟಗಳನ್ನು ಎದುರಿಸಲಿದ್ದಾರೆ. ವಿಜಯಬ್ಯಾಂಕ್, ದೇನಾ ಬ್ಯಾಂಕುಗಳು ವಿಲೀನಗೊಂಡ ಬಳಿಕ ಈಗಿನ ಬರೋಡಾ ಬ್ಯಾಂಕ್ ಮಲತಾಯಿ ಧೋರಣೆ ನೀತಿಯನ್ನು ಅನುಸರಿಸುತ್ತಿದೆ. ಮುಂದೆ ಕಾರ್ಪೊರೇಷನ್ ಬ್ಯಾಂಕ್ ಉದ್ಯೋಗಿಗಳು ಇಂತಹದೇ ಭವಣೆಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ವಿಲೀನೀಕರಣ ಯಾವ ರೀತಿಯಲ್ಲೂ ಯಾರಿಗೂ ಲಾಭ ತರುವಂತಹ ಪ್ರಕ್ರಿಯೆ ಅಲ್ಲ. ಇದು ಬಂಡವಾಳ ಶಾಹಿಗಳ ಒತ್ತಡದಿಂದ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಧಾರ. ಯಾಕೆಂದರೆ 1991 ರಿಂದ ಬಂಡವಾಳ ಶಾಹಿಗಳು ರಾಷ್ಟ್ರೀಕರಣಗೊಂಡ ಬ್ಯಾಂಕ್ ಗಳನ್ನು ಮತ್ತೆ ತಮಗೆ ಮರಳಿಸಬೇಕೆಂದು ಕೇಂದ್ರ ಸರಕಾರಕ್ಕೆ ಹಾಕುವ ಈ ವಿಲೀನೀಕರಣದಲ್ಲಿ ತೊಡಗಿದ್ದಾರೆ ಎಂದು ವಿನ್ಸೆಂಟ್‌ ಡಿಸೋಜ ಹೇಳಿದರು.

ಸಾವರ್ಜನಿಕರಿಗೆ ಮನವರಿಕೆ ಮಾಡಿದ್ದಲ್ಲಿ ಈ ವಿಲೀನ ಪ್ರಕ್ರಿಯೆಯನ್ನು ತಡೆಯಲು ಸಾಧ್ಯವಾಗುತ್ತದೆ. ಕಳೆದ ವರ್ಷ ಕೇಂದ್ರ ಸರಕಾರ ಎಫ್ ಆರ್ ಡಿಎ ಬಿಲ್‌ ಪಾಸ್ ಮಾಡಿತು. ಯಾಕೆಂದರೆ ನಷ್ಟದಲ್ಲಿರುವ ಬ್ಯಾಂಕುಗಳನ್ನು ಲಾಭದ ಹಾದಿಗೆ ತರಲು ಜನರ ಲಕ್ಷಗಟ್ಟಲೆ ಕೋಟಿ ರೂ. ಠೇವಣಿಗಳನ್ನು ಹೂಡಿಕೆ ಮಾಡಲು ಕೇಂದ್ರ ಸರಕಾರ ಹುನ್ನಾರ ಹೂಡಿತ್ತು. ಇದರ ವಿರುದ್ಧವಾಗಿ ನಾವು ನಮ್ಮ ಯೂನಿಯನ್ ಮುಖಾಂತರ ಹೋರಾಟ ನಡೆಸಿ ಎಫ್ ಆರ್ ಡಿಎ ಬಿಲ್ ರದ್ದುಗೊಳ್ಳುವಂತೆ ಮಾಡಿದ್ದೆವು. ಆದ್ದರಿಂದ ನಾವೆಲ್ಲರೂ ಸೇರಿ ಹೋರಾಟ ಮಾಡಿದ್ದಲ್ಲಿ ಈ ವಿಲೀನ ಪ್ರಕ್ರಿಯೆಗೆ ಇತಿಶ್ರೀ ಹಾಡಬಹುದೆಂದು ಅನಿಸುತ್ತದೆ ಎಂದು ಅವರು ಹೇಳಿದರು.

Conclusion:ಕೇಂದ್ರ ಸರಕಾರದ ಪ್ರಕಾರ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ನಮಗೆ ದೊಡ್ಡ ಬ್ಯಾಂಕುಗಳ ಅವಶ್ಯಕತೆ ಇದೆ ಎಂದು ಹೇಳುತ್ತದೆ. ಇದರ ತದ್ವಿರುದ್ಧವಾಗಿ ಸಣ್ಣ ಪುಟ್ಟ ಬ್ಯಾಂಕ್ ಗಳನ್ನು ನಡೆಸಲು ಕೇಂದ್ರ ಸರಕಾರವೇ ಪರವಾನಿಗೆ ನೀಡುತ್ತಿದೆ. ಈ ಪರವಾನಿಗೆಗಳು ಬಂಡವಾಳ ಶಾಹಿಗಳಿಗೆ ದೊರಕುತ್ತದೆ. ಆದ್ದರಿಂದ ಬಂಡವಾಳ ಶಾಹಿಗಳಿಗೆ ಪೂರಕವಾಗಿ ಈ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ಸತತ ಲಾಭದ ಹಾದಿಯಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ವಿಲೀನ ಕೇಂದ್ರದ ತಪ್ಪು ನಿರ್ಧಾರ. ವಿಲೀನ ಗೊಂಡ ಬಳಿಕ ಕಾರ್ಪೊರೇಷನ್ ಬ್ಯಾಂಕ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ. ಆದ್ದರಿಂದ ಇದು ಬ್ಯಾಂಕ್ ಗಳ ಮರ್ಜರ್ ಅಲ್ಲ ಮರ್ಡರ್ ಎಂದು ವಿನ್ಸೆಂಟ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.

ಆಗಿನ ಯುಪಿಎ ಮೊದಲ ಅವಧಿಯ ಸರಕಾರ 1991ರಲ್ಲಿ ಈ ವಿಲೀನ ಪ್ರಕ್ರಿಯೆ ಗೆ ನಾಂದಿ ಹಾಡಿದ್ದು ನಿಜ. ಆದರೆ ಆ ಸಂದರ್ಭ ಕೇವಲ ಪ್ರಯತ್ನ ಪಟ್ಟಿದ್ದು ಮಾತ್ರ ಆದರೆ ಬ್ಯಾಂಕ್ ಗಳನ್ನು ವಿಲೀನಗೊಳಿಸಲು ಅದಕ್ಕೆ ಸಾಧ್ಯವಾಗಿರಲಿಲ್ಲ. ಮತ್ತೊಂದು ಅವಧಿಯಲ್ಲೂ ಯುಪಿಎ ಸರಕಾರ ಈ ದೆಸೆಯಲ್ಲಿ ಮುಂದುವರಿಯಲು ಬಹಳಷ್ಟು ಪ್ರಯತ್ನ ಕೈಗೊಂಡಿತ್ತು ಆದರೆ ಸಫಲತೆ ಕಾಣಲಿಲ್ಲ‌‌. ಬಳಿಕದ ಎನ್ ಡಿ ಎ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕನ್ನು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೊಂದಿಗೆ ವಿಲೀನ ಗೊಳಿಸಿತು. ಅದೇ ಅವಧಿಯಲ್ಲಿ ಮತ್ತೆ ಬರೋಡಾ ಬ್ಯಾಂಕ್ ನೊಂದಿಗೆ ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕುಗಳನ್ನು‌ ವಿಲೀನಗೊಳಿಸಿತು. ಆದರೆ ಮತ್ತೆ ಈ ಅವಧಿಯಲ್ಲಿಯೂ ಎನ್ ಡಿ ಎ ಸರಕಾರ ಬ್ಯಾಂಕ್ ವಿಲೀನ ಪ್ರಕ್ರಿಯೆಯಲ್ಲಿ ಮುತುವರ್ಜಿ ವಹಿಸಿರುವುದು ನಮ್ಮ ಬ್ಯಾಂಕಿಂಗ್ ಕ್ಷೇತ್ರದ ದೌರ್ಭಾಗ್ಯ ಎಂದು ಹೇಳಿದರು.

Reporter_Vishwanath Panjimogaru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.