ETV Bharat / city

ಮಕ್ಕಳ ಅಶ್ಲೀಲ ವಿಡಿಯೋ ಶೇರ್: ಮಂಗಳೂರಲ್ಲಿ ಇಬ್ಬರ ವಿರುದ್ಧ ಪ್ರಕರಣ

author img

By

Published : Jun 24, 2021, 7:41 AM IST

ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಡೌನ್​​ಲೋಡ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿದ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಮಂಗಳೂರಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

Mangalore
ಮಕ್ಕಳ ಅಶ್ಲೀಲ ವಿಡಿಯೋ ಶೇರ್ ಮಾಡಿರುವ‌ ಇಬ್ಬರ ವಿರುದ್ಧ ಪ್ರಕರಣ

ಮಂಗಳೂರು: ಮಕ್ಕಳ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಳೂರಿಗೆ ಸಂಬಂಧಿಸಿದ ಈ ದೂರನ್ನು ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಸಿಐಡಿ ಸ್ವೀಕರಿಸಿ, ದೂರಿನ ಪ್ರಾಥಮಿಕ ವಿಚಾರಣೆ ಕೈಗೊಂಡು ಮುಂದಿನ ತನಿಖೆಯ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಕಳುಹಿಸಿಕೊಟ್ಟಿದೆ‌.‌

2020 ಜೂನ್ 28ರಂದು ಆ್ಯಸ್ಟನ್ ಎಂಬಾತ ಮಗುವೊಂದರ ಅಶ್ಲೀಲ ವಿಡಿಯೋವನ್ನು ಡೌನ್​ಲೋಡ್ ಮಾಡಿಕೊಂಡು ಅಪ್ಲೋಡ್ ಮಾಡಿರುವ ಬಗ್ಗೆ 2021 ಜೂನ್ 22ರಂದು ಮಾಹಿತಿ ಲಭ್ಯವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಗುವಿನ ಅಶ್ಲೀಲ ವಿಡಿಯೋ, ಆರೋಪಿಯ ಮೊಬೈಲ್ ನಂಬರ್, ಇಮೇಲ್ ಐಡಿ ಇತರೆ ಒಳಗೊಂಡಿರುವುದು ಕಂಡುಬಂದಿತ್ತು. ಸದರಿ ದೂರಿನ ಬಗ್ಗೆ ಪ್ರಾಥಮಿಕ ವಿಚಾರಣೆ ಮಾಡಿ, ಸಿಡಿಯಲ್ಲಿರುವ ಮಾಹಿತಿಯನ್ನು ದೃಢಪಡಿಸಿಕೊಂಡು ಆರೋಪಿಯ ವಿರುದ್ಧ ಕಲಂ 67(ಬಿ) ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅದೇ ರೀತಿ ಮತ್ತೊಂದು ಪ್ರಕರಣದಲ್ಲಿ 2021ರ ಜೂ 4ರಂದು ಶಾನ್ ರಾಯ್ಸ್ ಅಲಿಯಾಸ್ ಸಂಜೀತ್ ಎಂಬಾತ ಮಗುವಿನ ಅಶ್ಲೀಲ ವಿಡಿಯೊ ಡೌನ್‌ಲೋಡ್ ಮಾಡಿ, ಅಪ್ಲೋಡ್ ಮಾಡಿರುವ ಮಾಹಿತಿ ಇದೆ.‌‌ ಅದರಂತೆ ಆರೋಪಿ ವಿರುದ್ಧ ಕಲಂ 67 (ಬಿ) ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲೂ ಡೆಲ್ಟಾ ಪ್ಲಸ್ ವೈರಸ್ ಪ್ರಕರಣ ಪತ್ತೆ- ಆರೋಗ್ಯ ಸಚಿವ ಡಾ.ಸುಧಾಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.