ETV Bharat / city

ಭೀಕರ ಅಪಘಾತ : ಮಂಗಳೂರಿನಲ್ಲಿ ಇಬ್ಬರು ಸಾವು, ಓರ್ವನಿಗೆ ಗಾಯ

author img

By

Published : Apr 22, 2022, 10:00 AM IST

Updated : Apr 22, 2022, 1:26 PM IST

ಹಳೆಯಂಗಡಿ ಒಳ ರಸ್ತೆಯಿಂದ ಪಾವಂಜೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವಾಗ ಓಮ್ನಿ ಮಂಗಳೂರಿನಿಂದ ಬರುತ್ತಿದ್ದ ಎಕ್ಸ್​ಪ್ರೆಸ್ ಬಸ್ಸಿಗೆ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ, ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ..

Bus and omni car accident: 2 died at Mangaluru
ಭೀಕರ ಅಪಘಾತ: ಮಂಗಳೂರಿನಲ್ಲಿ ಇಬ್ಬರು ಸಾವು, ಓರ್ವನಿಗೆ ಗಾಯ

ಮಂಗಳೂರು : ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಪಾವಂಜೆಯ ಸಮೀಪ ಸಂಭವಿಸಿದ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾತ್ರಿ ನಡೆದಿದೆ. ಮಾರುತಿ ಓಮ್ನಿ ಕಾರು ಮತ್ತು ಎಕ್ಸ್​​ಪ್ರೆಸ್ ಬಸ್ಸಿನ ನಡುವೆ ಅಪಘಾತವಾಗಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಕ್ಕಪಡ್ರೆ ನಿವಾಸಿಗಳಾದ ಕಾರು ಚಾಲಕ ಭುಜಂಗ ಹಾಗೂ ವಸಂತ್ ಸಾವನ್ನಪ್ಪಿದವರು. ಇವರ ಜೊತೆಗಿದ್ದ ಬಾಲಕೃಷ್ಣ ಸಹ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಳೆಯಂಗಡಿ ಒಳ ರಸ್ತೆಯಿಂದ ಪಾವಂಜೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವಾಗ ಓಮ್ನಿ ಮಂಗಳೂರಿನಿಂದ ಬರುತ್ತಿದ್ದ ಎಕ್ಸ್​ಪ್ರೆಸ್ ಬಸ್ಸಿಗೆ ನೇರವಾಗಿ ಡಿಕ್ಕಿ ಹೊಡೆದ ಪರಿಣಾಮ, ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ವಯಂ ಸರ್ವೇಗೆ ಸರ್ಕಾರ ಅವಕಾಶ

Last Updated : Apr 22, 2022, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.