ETV Bharat / city

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ.. 281 ಜೋಡಿಗಳು ಕಂಬಳದಲ್ಲಿ ಭಾಗಿ - kambala in putturu

ದೇವರಗದ್ದೆಯ ಕಂಬಳ ಎಂದೇ ಪ್ರಸಿದ್ಧಿ ಪಡೆದಿರುವ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಲಾಗಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಯಲ್ಲಿ ನಡೆಯುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ 281 ಜೋಡಿಗಳು ಈ ಬಾರಿ ಭಾಗವಹಿಸುತ್ತಿದ್ದು, ದಾಖಲೆಯನ್ನು ನಿರ್ಮಿಸಿವೆ.

buffalo-race-in-puttur-dakshina-kannada
ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ : 281 ಜೋಡಿಗಳು ಕಂಬಳದಲ್ಲಿ ಭಾಗಿ
author img

By

Published : Mar 20, 2022, 8:24 PM IST

ಪುತ್ತೂರು(ದಕ್ಷಿಣ ಕನ್ನಡ): ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಗದ್ದೆಯಲ್ಲಿ ನಡೆಯುತ್ತಿರುವ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ 281 ಜೋಡಿಗಳು ಈ ಬಾರಿ ಭಾಗವಹಿಸುತ್ತಿದ್ದು ದಾಖಲೆಯನ್ನು ನಿರ್ಮಿಸಿದೆ ಎಂದು ಪುತ್ತೂರು ಕೋಟಿ-ಚೆನ್ನಯ ಸಮಿತಿ ಉಪಾಧ್ಯಕ್ಷ ನಿರಂಜನ್​ ರೈ ಹೇಳಿದ್ದಾರೆ. 29ನೇ ವರ್ಷದ ಕಂಬಳವನ್ನು ಈ ಬಾರಿ ಆಯೋಜಿಸಲಾಗಿದ್ದು, ಮಿಕ್ಕ ಕಂಬಳಗಳಿಗಿಂತ ಕೊಂಚ ವಿಭಿನ್ನ ರೀತಿಯಲ್ಲಿ ಈ ಕಂಬಳ ನಡೆಯುತ್ತಿದೆ.

ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಲಾಗಿದೆ...

ದೇವರಗದ್ದೆಯ ಕಂಬಳ ಎಂದೇ ಪ್ರಸಿದ್ಧಿ ಪಡೆದಿರುವ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು. ಕೊರೊನಾದಿಂದ ಕಂಬಳವನ್ನು ಮಿಸ್ ಮಾಡಿಕೊಂಡಿದ್ದ ಕಂಬಳಪ್ರಿಯರು ಈ ಬಾರಿ ಅತ್ಯಂತ ಉತ್ಸಾಹದಿಂದ ಕಂಬಳವನ್ನು ವೀಕ್ಷಿಸಲು ಬರುತ್ತಿದ್ದಾರೆ. ಕೇವಲ ಕರಾವಳಿ ಜಿಲ್ಲೆಯವರು ಮಾತ್ರವಲ್ಲದೆ ರಾಜ್ಯದ ಇತರ ಭಾಗಗಳ ಜನರೂ ಕಂಬಳವನ್ನು ವೀಕ್ಷಿಸಲು ಬರುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಪುತ್ತೂರಿನಲ್ಲಿ ನಡೆಯುವ ಕಂಬಳಕ್ಕೆ ಹೆಚ್ಚಿನ ಸಂಖ್ಯೆಯ ಕೋಣಗಳು ಬರುವುದು ಇಲ್ಲಿನ ವಿಶೇಷತೆಯಾಗಿದೆ. ಈ ಬಾರಿ ಒಟ್ಟು 281 ಜೋಡಿ ಕೋಣಗಳು ಈ ಕಂಬಳದಲ್ಲಿ ಭಾಗಿಯಾಗಿದ್ದು, ವಿವಿಧ ವಿಭಾಗಗಳಲ್ಲಿ ಕೋಣಗಳ ಓಟದ ಸ್ಪರ್ಧೆ ನಡೆಯುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕರಾವಳಿ ಭಾಗದ ಜಾನಪದ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕಾದರೆ ಸಾರ್ವಜನಿಕರ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು. ಪುತ್ತೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಕಂಬಳದ ಅಭಿಮಾನಿಗಳು ಪುತ್ತೂರಿನ ಐತಿಹಾಸಿಕ ಕಂಬಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಈ ಬಾರಿ ಪುತ್ತೂರು ಕಂಬಳದ ಮೂಲಕವೇ ನಿರ್ದೇಶಕ ರಾಜೇಂದ್ರ ಸಿಂಗ್​ ಬಾಬು ಅವರ ಹೊಸ ಕಂಬಳಾಧಾರಿತ ಚಿತ್ರವನ್ನು ನಿರ್ದೇಶಿಸುತ್ತಿರುವುದು ಪುತ್ತೂರು ಕಂಬಳದ ಈ ಬಾರಿಯ ವಿಶೇಷತೆಯೂ ಆಗಿದೆ.

ಓದಿ : ರಾಷ್ಟ್ರೀಯ ಉದ್ಯಾನವನಲ್ಲಿ ಖುಷಿಯ ಸಫಾರಿ : ಪ್ರವಾಸಿಗರ ಕಣ್ಮನಗಳಿಗೆ ಹಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.