ETV Bharat / city

3ನೇ ಮಹಡಿಯಿಂದ ಬಿದ್ದ ಬಾಲಕ : ಚಿಕಿತ್ಸೆ ಫಲಕಾರಿಯಾಗದೇ ಸಾವು! - ಬಾಲಕ ಸಾವು

ಆಟವಾಡುತ್ತಿದ್ದ ವೇಳೆ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಲಕ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ..

Boy dies in Bantwal
ಮಹಮ್ಮದ್ ಸಾಹಿಲ್
author img

By

Published : May 27, 2022, 2:13 PM IST

ಬಂಟ್ವಾಳ : ಗೆಳೆಯಯರ ಜೊತೆ ಆಟ ಆಡುತ್ತಿದ್ದ ವೇಳೆ 6ನೇ ತರಗತಿ ವಿದ್ಯಾರ್ಥಿ ಆಯತಪ್ಪಿ 3ನೇ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ‌ಕಲ್ಲಡ್ಕ ನಿವಾಸಿ ಅಹಮ್ಮದ್ ಎಂಬುವರ ಪುತ್ರ ಮಹಮ್ಮದ್ ಸಾಹಿಲ್ (10) ಮೃತ ಬಾಲಕ.

ಕಲ್ಲಡ್ಕ ಸಮೀಪದ ಗೊಳ್ತಮಜಲು ಎಂಬಲ್ಲಿರುವ ಸಿಟಪ್ಲಾಜಾ ರೆಸಿಡೆನ್ಸಿಯ ಮೂರನೇ ಮಹಡಿಯ ಸೀಟ್‌ಹೌಸ್​​ನಲ್ಲಿ ಮೇ 26ರಂದು ಸಾಹಿಲ್ ಗೆಳೆಯರ ಜೊತೆ ಆಟವಾಡುತ್ತಿದ್ದ. ಈ ವೇಳೆ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ.

ಗಾಯಾಳು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.