ETV Bharat / city

ಕ್ಯಾಶ್‌ಲೆಸ್ ವ್ಯಾಪಾರ ಮಾಡುವ ವರ್ತಕರಿಗೆ ಬಿಗ್ ಶಾಕ್ : ಸೈಬರ್ ವಂಚಕರ ಹೊಸ ಮೋಸದಾಟ - Digital Payments problems

ಕೆಲ ಕಡೆಗಳಲ್ಲಿ ಅಂಗಡಿಗಳ ಕ್ಯೂಆರ್ ಕೋಡ್​ಗಳ ಮೇಲೆ ಸೈಬರ್ ವಂಚಕರು ತಮ್ಮ ಕೋಡ್ ಅಂಟಿಸಿ ಭಾರಿ ವಂಚನೆ ನಡೆಸುತ್ತಿದ್ದಾರೆ. ಈ ಮೂಲಕ ಕ್ಯೂಆರ್ ಕೋಡ್ ಬಳಸಿ ಪೇಮೆಂಟ್ ಮಾಡಿರುವ ಗ್ರಾಹಕರ ಹಣ ಸೈಬರ್ ವಂಚಕರ ಪಾಲಾಗುತ್ತದೆ..

big-shock-for-cashless-trading-traders
ಕ್ಯಾಶ್ ಲೆಸ್ ವ್ಯಾಪಾರ ಮಾಡುವ ವರ್ತಕರಿಗೆ ಬಿಗ್ ಶಾಕ್
author img

By

Published : Apr 2, 2022, 2:52 PM IST

ಮಂಗಳೂರು : ಗೂಗಲ್ ಪೇ, ಪೇಟಿಎಂ, ಫೋನ್ ಪೇ ಹೀಗೆ ಡಿಜಿಟಲ್ ಪೇಮೆಂಟ್​ಗೆ ದೇಶದಲ್ಲಿ ಭಾರಿ ಒತ್ತು ನೀಡುತ್ತಿರುವ ಈ ಕಾಲಘಟ್ಟದಲ್ಲಿ ಇದನ್ನೇ ಬಂಡವಾಳವಾಗಿರಿಸಿಕೊಂಡು ಸೈಬರ್ ಖದೀಮರು ವಂಚಿಸುತ್ತಿದ್ದಾರೆ‌. ಇಂತಹ ವಂಚನೆಗಳಿಗೆ ಸಿಲುಕಿ ಬಹಳಷ್ಟು ಮಂದಿ ಉದ್ಯಮಿಗಳು, ವ್ಯಾಪಾರಿಗಳು ತಮ್ಮ ಹಣ ಕಳೆದುಕೊಂಡಿದ್ದಾರೆ.

ಕ್ಯಾಶ್‌ಲೆಸ್ ವ್ಯಾಪಾರ ಮಾಡುವ ವರ್ತಕರಿಗೆ ಬಿಗ್ ಶಾಕ್

ಡಿಜಿಟಲ್ ಪೇಮೆಂಟ್​ನತ್ತ ಜನ ವಾಲುತ್ತಿರುವಂತೆ ವ್ಯಾಪಾರ, ವಹಿವಾಟುದಾರರು ಅದಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ತಮ್ಮ ವ್ಯಾಪಾರ, ವಹಿವಾಟು ನಡೆಯುವ ಸ್ಥಳಗಳು, ಅಂಗಡಿ-ಮಳಿಗೆಗಳಲ್ಲಿ ಕ್ಯೂಆರ್ ಕೋಡ್​ಗಳನ್ನು ಅಳವಡಿಸಲು‌ ಆರಂಭಿಸಿದ್ದಾರೆ. ಇಂತಹ ಮಳಿಗೆ, ಅಂಗಡಿಗಳಿಗೆ ಗ್ರಾಹಕರ ಸೋಗಿನಲ್ಲಿ ಎಂಟ್ರಿ ಕೊಡುವ ಸೈಬರ್ ಖದೀಮರು ತಮಗೆ ಬೇಕಾಗುವ ವಸ್ತುಗಳನ್ನು ಖರೀದಿಸಿ ಡಿಜಿಟಲ್ ಪೇಮೆಂಟ್ ಮಾಡುತ್ತಾರೆ.

ಆದರೆ, ಪಾವತಿಯಾದ ಬಗ್ಗೆ ಅವರ ಮೊಬೈಲ್​ನಲ್ಲಿ ತೋರಿಸುತ್ತದೆ‌. ಹಣ ಪಾವತಿಯಾದ ಬಗ್ಗೆ ಅಂಗಡಿ ಮಾಲೀಕನಿಗೂ ಮೆಸೇಜ್ ಬರುತ್ತದೆ. ಆದರೆ, ಮೆಸೇಜ್ ಬರುತ್ತದೆಯೇ ಹೊರತು ಖಾತೆಗೆ ಹಣ ಜಮೆ ಆಗಿರುವುದಿಲ್ಲ. ಅಂಗಡಿಯ ಕ್ಯೂಆರ್ ಕೋಡ್​ಗಳ ಬಗ್ಗೆಯೂ ಮಾಲೀಕರು ನಿಗಾ ಇರಿಸಬೇಕಾಗುತ್ತದೆ.

ಕೆಲ ಕಡೆಗಳಲ್ಲಿ ಅಂಗಡಿಗಳ ಕ್ಯೂಆರ್ ಕೋಡ್​ಗಳ ಮೇಲೆ ಸೈಬರ್ ವಂಚಕರು ತಮ್ಮ ಕೋಡ್ ಅಂಟಿಸಿ ಭಾರಿ ವಂಚನೆ ನಡೆಸುತ್ತಿದ್ದಾರೆ. ಈ ಮೂಲಕ ಕ್ಯೂಆರ್ ಕೋಡ್ ಬಳಸಿ ಪೇಮೆಂಟ್ ಮಾಡಿರುವ ಗ್ರಾಹಕರ ಹಣ ಸೈಬರ್ ವಂಚಕರ ಪಾಲಾಗುತ್ತದೆ. ಈ ಬಗ್ಗೆ ಎಚ್ಚರಿಕೆ ಅತ್ಯಗತ್ಯ ಎಂದು ಪೊಲೀಸರು, ಸೈಬರ್ ತಂತ್ರಜ್ಞರು ಹೇಳುತ್ತಿದ್ದಾರೆ.

ಇದನ್ನೂ ಓದಿ: ರೈಲಿನಿಂದ ಹಾರಿ ಸಹೋದರಿಯರಿಬ್ಬರ ಆತ್ಮಹತ್ಯೆ!

ಕ್ಯಾಶ್​ಲೆಸ್ ವ್ಯಾಪಾರ ಮಾಡುವ ವರ್ತಕರಿಗೆ ಇದು ಬಿಗ್ ಶಾಕ್ ಆಗಿದೆ. ಸೈಬರ್ ಖದೀಮರ ಇಂತಹ ಹೊಸ ಮೋಸದಾಟಕ್ಕೆ ವರ್ತಕರು ಬೆಚ್ಚಿಬಿದ್ದಿದ್ದಾರೆ. ಈ ಬಗ್ಗೆ ಅನೇಕ ದೂರುಗಳು ದಾಖಲಾಗುತ್ತಿವೆ. ಪೊಲೀಸರೂ ಇಂತಹ ಮೋಸದಾಟಕ್ಕೆ ಕಡಿವಾಣ ಹಾಕಲು ಸೈಬರ್ ಖದೀಮರ ಮೇಲೆ ನಿಗಾ ಇರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.