ETV Bharat / city

ಬೆಂಗಳೂರಿನ ಜಿಕೆವಿಕೆಯಿಂದ ಕೃಷಿ ಸಾಧಕರಿಗೂ ಸಿಗಲಿದೆ ಗೌರವ ಡಾಕ್ಟರೇಟ್! - ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಘಟಿಕೋತ್ಸವ

ಇನ್ನುಮುಂದೆ ಕೃಷಿ ಸಾಧನೆ ಮಾಡಿದ ರೈತರಿಗೂ ಗೌರವ ಡಾಕ್ಟರೇಟ್​ ನೀಡಲು ಬೆಂಗಳೂರು ಕೃಷಿ ವಿದ್ಯಾಲಯ ನಿರ್ಧಾರ ಮಾಡಿದೆ.

bengaluru-agriculture-university-decided-to-give-doctorate-to-farmers
ಬೆಂಗಳೂರಿನಿಂದ ಜಿಕೆವಿಕೆಯಿಂದ ಕೃಷಿ ಸಾಧಕರಿಗೂ ಸಿಗಲಿದೆ ಗೌರವ ಡಾಕ್ಟರೇಟ್!
author img

By

Published : Sep 22, 2021, 2:27 AM IST

ಬೆಂಗಳೂರು: ಗಣ್ಯರು ಮತ್ತು ಸಾಧಕರಿಗೆ ಸಿಗುತ್ತಿದ್ದ ಗೌರವ ಡಾಕ್ಟರೇಟ್ ಪದವಿ ಇನ್ಮುಂದೆ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರಿಗೂ ಸಿಗಲಿದೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮುಂದಿನ ವರ್ಷ ನಡೆಯುವ ಘಟಿಕೋತ್ಸವದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ( ಜಿಕೆವಿಕೆ) ಈ ವರ್ಷದಿಂದ ಕೃಷಿ ಸಾಧಕರನ್ನು ಗುರುತಿಸಿ 55ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಕೊಡುವ ತೀರ್ಮಾನ ಮಾಡಲಾಗಿತ್ತು. ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಅವಿಷ್ಕಾರ, ಕೃಷಿಯನ್ನ ಆದಾಯದ ಹೊಸ ಮಾರ್ಗವನ್ನು ಕಂಡು ಹಿಡಿದು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರೈತರನ್ನ ಗೌರವಿಸುವ ಕಾರಣಕ್ಕೆ ಗೌರವ ಡಾಕ್ಟರೇಟ್ ನೀಡುವ ತಿರ್ಮಾನಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಬಂದಿತ್ತು.

ಆದರೆ ಕೋವಿಡ್ ಮಹಾಮಾರಿಯಿಂದ ರೈತರ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ವರ್ಷ ನಡೆಯುವ 56ನೇ ಘಟಿಕೋತ್ಸವದಲ್ಲಿ ರೈತರಿಗೂ ಗೌರವ ಡಾಕ್ಟರೇಟ್ ನೀಡಲಾಗುವುದು.

ಇದನ್ನೂ ಓದಿ: ಆನ್​​​ಲೈನ್ ಜೂಜಿಗೆ ಕಡಿವಾಣ ಹಾಕುವ ವಿಧೇಯಕ ಸೇರಿದಂತೆ ಹಲವು ವಿಧೇಯಕಗಳಿಗೆ ವಿಧಾನಸಭೆಯಲ್ಲಿ ಅಂಗೀಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.