ETV Bharat / city

ಇಂದಿನಿಂದ 61 ದಿನಗಳ ಕಾಲ ಆಳಸಮುದ್ರ ಮೀನುಗಾರಿಕೆಗೆ ನಿಷೇಧ... - undefined

ಈ ಅವಧಿಯಲ್ಲಿ ಸಮುದ್ರದ ಮೀನುಗಳು ಸಂತಾನೋತ್ಪತ್ತಿ ವೃದ್ದಿಸುವುದರಿಂದ ಜೂನ್‌ 1 ರಿಂದ ಜುಲೈ 31 ರ ವರೆಗೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧ‌ ಹೇರಲಾಗಿದೆ.

ಆಳಸಮುದ್ರ ಮೀನುಗಾರಿಕೆಗೆ ನಿಷೇಧ
author img

By

Published : Jun 1, 2019, 12:35 PM IST

ಮಂಗಳೂರು: ಕರಾವಳಿಯ ಪ್ರಮುಖ ವಾಣಿಜ್ಯ ವಹಿವಾಟಿನ ಮತ್ಸೋದ್ಯಮಕ್ಕೆ ಇಂದಿನಿಂದ ರಜೆ ದೊರೆತಿದೆ. ಮೀನುಗಾರರು ಬೋಟ್​ಗಳ ಮೂಲಕ ನಡೆಸುತ್ತಿದ್ದ ಆಳಸಮುದ್ರ ಮೀನುಗಾರಿಕೆಗೆ ಇಂದಿನಿಂದ 61 ದಿನಗಳ ಕಾಲ ಪ್ರತಿ ವರ್ಷದಂತೆ ನಿಷೇಧ‌ ಹೇರಲಾಗಿದೆ.

ನಿಷೇಧ‌ಕ್ಕೆ ಕಾರಣ:

ಜೂನ್‌ 1 ರಿಂದ ಮಳೆಗಾಲದ ಅವಧಿ. ಈ ಅವಧಿಯಲ್ಲಿ ಸಮುದ್ರದ ಮೀನುಗಳು ತನ್ನ ಜೀವದಲ್ಲಿ ತತ್ತಿಗಳನ್ನು ಇಟ್ಟುಕೊಂಡು ಸಂತಾನೋತ್ಪತ್ತಿ ವೃದ್ದಿಸುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಮುಂದೆ ಮತ್ಸ್ಯ ಕ್ಷಾಮ ಉಂಟಾಗಲಿದೆ ಎಂಬ ನೆಲೆಯಲ್ಲಿ ಹಾಗೂ ಇದೇ ವೇಳೆ, ಸಮುದ್ರ ಪ್ರಕ್ಷುಬ್ದವಾಗಿ ಮೀನುಗಾರಿಕೆ ನಡೆಸುವ‌ ಬೋಟ್ ಮತ್ತು‌ಮೀನುಗಾರರ ಪ್ರಾಣಕ್ಕೆ ಅಪಾಯ ಇರುವುದರಿಂದ ಸರಕಾರವೇ ಈ ಅವಧಿಯಲ್ಲಿ ಆಳಸಮುದ್ರ ಮೀನುಗಾರಿಕೆಯನ್ನು ನಿಷೇಧಿಸಿದೆ.

ಆಳಸಮುದ್ರ ಮೀನುಗಾರಿಕೆಗೆ ನಿಷೇಧ

ಈ ನಿಷೇಧ ಜುಲೈ 31 ರ ವರೆಗೆ ಇರಲಿದ್ದು ಒಟ್ಟು 61 ದಿನಗಳ ಕಾಲ ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿರುತ್ತದೆ. ಆದರೆ ಈ ಅವಧಿಯಲ್ಲಿ ಸಮುದ್ರತೀರದಲ್ಲಿ ಮೀನುಗಾರಿಕೆಗೆ ಅವಕಾಶವಿದೆ. 10 ಅಶ್ವಶಕ್ತಿಯೊಳಗಿನ ಮೀನುಗಾರಿಕಾ ದೋಣಿಗಳು, ನಾಡದೋಣಿಗಳಿಗೆ ಮೀನುಗಾರಿಕೆ ನಡೆಸಲು ಅವಕಾಶವಿದೆ. ಆದರೆ ಇವುಗಳಿಂದ ಆಳಸಮುದ್ರ ಮೀನುಗಾರಿಕೆ ನಡೆಸುವ ಬೋಟ್ಟ್​ಗಳಲ್ಲಿ ಸಿಗುತ್ತಿದ್ದ ಮೀನುಗಳು ಸಿಗದೇ ಇರುವುದರಿಂದ ಈ ಮೀನುಗಳು ಮಾರುಕಟ್ಟೆ ಬೇಡಿಕೆಗೆ ಸಾಲುವುದಿಲ್ಲ.

ಮೀನುಗಾರಿಕಾ ನಿಷೇಧ ಅವಧಿಯಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಸಿದರೆ ಮೀನುಗಾರಿಕಾ ಇಲಾಖೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದು, ಹೆಚ್ಚಿನ ಮೀನುಗಾರರು ಈ ಆ‌ದೇಶ ಪಾಲಿಸುತ್ತಾರೆ. ಇಂದಿನಿಂದ ‌ಮೀನುಗಾರಿಕೆ ನಿಷೇಧವಾಗಿರುವುದರಿಂದ ಬೋಟ್​ಗಳು ಬಂದರಿನಲ್ಲಿ ಲಂಗರು ಹಾಕಿವೆ.

Intro:ಮಂಗಳೂರು; ಕರಾವಳಿಯ ಪ್ರಮುಖ ವಾಣಿಜ್ಯ ವಹಿವಾಟದ ಮತ್ಸೋದ್ಯಮಕ್ಕೆ ಇಂದಿನಿಂದ ರಜೆ. ಮೀನುಗಾರರು ಬೋಟ್ ಗಳ ಮೂಲಕ ನಡೆಸುತ್ತಿದ್ದ ಆಳಸಮುದ್ರ ಮೀನುಗಾರಿಕೆ ಗೆ ಇಂದಿನಿಂದ 61 ದಿನಗಳ ಕಾಲ ಪ್ರತಿ ವರುಷದಂತೆ ನಿಷೇಧ‌ ಹೇರಲಾಗಿದೆ. ಪರಿಣಾಮ ಇನ್ನು ಕರಾವಳಿ ಕಡಲ ತೀರದಲ್ಲಿ ಆಳಸಮುದ್ರದಿಂದ ಬರುವ ಮೀನುಗಳು ಮಾರುಕಟ್ಟೆ ಗೆ ಬರುವುದಿಲ್ಲ. ಇನ್ನೇನಿದ್ದರೂ 10 ಅಶ್ವಶಕ್ತಿ ಯೊಳಗಿನ ಬೋಟ್ ಗಳು, ನಾಡದೋಣಿಗಳು ಸಮುದ್ರತೀರದಲ್ಲಿ ನಡೆಸುವ ಮೀನುಗಳೆ ಗತಿಯಾಗಿದೆ.

Body:ಜೂನ್‌1 ರಿಂದ ಮಳೆಗಾಲದ ಅವಧಿ. ಈ ಅವಧಿಯಲ್ಲಿ ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿ ವೃದ್ದಿಸುವ ಅವಧಿ. ಮೀನುಗಳು ತನ್ನ ಜೀವದಲ್ಲಿ ತತ್ತಿಗಳನ್ನು ಇಟ್ಟುಕೊಂಡಿರುತ್ತದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಮುಂದೆ ಮತ್ಸ್ಯ ಕ್ಷಾಮ ಉಂಟಾಗಲಿದೆ ಎಂಬ ನೆಲೆಯಲ್ಲಿ ಹಾಗೂ ಈ ಸಂದರ್ಭದಲ್ಲಿ ಸಮುದ್ರ ಪ್ರಕ್ಷುಬ್ದವಾಗಿ ಮೀನುಗಾರಿಕೆ ನಡೆಸುವ‌ ಮೀನುಗಾರಿಕಾ ಬೋಟ್ ಮತ್ತು‌ಮೀನುಗಾರರ ಪ್ರಾಣಕ್ಕೆ ಅಪಾಯವಿರುವುದರಿಂದ ಸರಕಾರವೇ ಈ ಅವಧಿಯಲ್ಲಿ ಆಳಸಮುದ್ರ ಮೀನುಗಾರಿಕೆಯನ್ನು ನಿಷೇಧಿಸಿದೆ. ಈ ಅವಧಿ ಜುಲೈ 31 ರ ವರೆಗೆ ಇರಲಿದ್ದು ಒಟ್ಟು 61 ದಿನಗಳ ಕಾಲ ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿರುತ್ತದೆ.
ಈ ಅವಧಿಯಲ್ಲಿ ಸಮುದ್ರತೀರದಲ್ಲಿ ಮೀನುಗಾರಿಕೆಗೆ ಅವಕಾಶವಿದೆ. 10 ಅಶ್ವಶಕ್ತಿಯೊಳಗಿನ ಮೀನುಗಾರಿಕಾ ದೋಣಿಗಳು ಮೀನುಗಾರಿಕೆ ನಡೆಸಲು ಅವಕಾಶವಿದೆ. ಆದರೆ ಇವುಗಳು ಆಳಸಮುದ್ರ ಮೀನುಗಾರಿಕೆ ನಡೆಸುವ ಬೋಟ್ ಗಳಲ್ಲಿ ಸಿಗುತ್ತಿದ್ದ ಮೀನುಗಳಷ್ಟು ಸಿಗದೆ ಇರುವುದರಿಂದ ಈ ಮೀನುಗಳು ಮಾರುಕಟ್ಟೆ ಬೇಡಿಕೆಗೆ ಏನೇನು ಸಾಲದು.
ಮೀನುಗಾರಿಕಾ ನಿಷೇಧ ಅವಧಿಯಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಸಿದರೆ ಮೀನುಗಾರಿಕಾ ಇಲಾಖೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದು ಈ ಅವಧಿಯಲ್ಲಿ ಹೆಚ್ಚಿನ ಮೀನುಗಾರರು ಈ ಆ‌ದೇಶ ಪಾಲಿಸುತ್ತಾರೆ. ಈ ಬಾರಿ ಮೀನುಗಳ ಕ್ಷಾಮದಿಂದ ಅವಧಿಗೆ ಮುಂಚೆಯೆ ಹಲವು ಆಳಸಮುದ್ರ ಬೋಟ್ ಗಳು ಮೀನುಗಾರಿಕೆ ಸ್ಥಗಿತಗೊಳಿಸಿ ಲಂಗರು ಹಾಕಿತ್ತು. ಇಂದಿನಿಂದ ‌ಮೀನುಗಾರಿಕೆ ನಿಷೇಧವಾಗಿರುವುದರಿಂದ ಬೋಟ್ ಗಳು ಬಂದರುನಲ್ಲಿ ಲಂಗರು ಹಾಕಿದೆ.

ಬೈಟ್- ತಿಪ್ಪೇಸ್ವಾಮಿ, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.