ETV Bharat / city

ಆಟೋ ಚಲಾಯಿಸುತ್ತಿರುವ ವೇಳೆ ಹೃದಯಾಘಾತ: ಚಾಲಕ ಸಾವು - ಆಟೋ ಚಾಲಕ ಸಾವು

ಆಟೋ ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತಕ್ಕೆ ಒಳಗಾಗಿ ಚಾಲಕ ಸಾವನಪ್ಪಿರುವ ಘಟನೆ ರಾ.ಹೆ 66 ರ ನೇತ್ರಾವತಿ ಸೇತುವೆಯಲ್ಲಿ ಇಂದು ನಡೆದಿದೆ.

Auto driver dies due to heart attack
ಆಟೋ ಚಲಿಸುತ್ತಿರುವ ವೇಳೆಯೇ ಹೃದಯಾಘಾತ: ಚಾಲಕ ಸಾವು
author img

By

Published : Dec 3, 2021, 3:43 PM IST

ಉಳ್ಳಾಲ: ಅಪಘಾತಕ್ಕೀಡಾದ ರಿಕ್ಷಾ ಚಾಲಕ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ರಾ.ಹೆ 66 ರ ನೇತ್ರಾವತಿ ಸೇತುವೆಯಲ್ಲಿ ಇಂದು ನಡೆದಿದೆ.

Auto driver dies due to heart attack
ಮೊಹಮ್ಮದ್ ಹನೀಫ್ -ಮೃತ ಆಟೋ ಚಾಲಕ

ಮೊಹಮ್ಮದ್ ಹನೀಫ್(40) ಮೃತ ಆಟೋ ಚಾಲಕ. ಮಂಗಳೂರು ನಗರದಿಂದ ಕಲ್ಲಾಪು ಗ್ಲೋಬಲ್ ಮಾರುಕಟ್ಟೆಗೆ ತರಕಾರಿ ಖರೀದಿಸಲಿ ಎಂದು ಇಂದು ನಸುಕಿನಲ್ಲಿ ವ್ಯಾಪಾರಿಯೊಬ್ಬರನ್ನು ಕರೆತರುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿದೆ. ಮಂಗಳೂರಿನಿಂದ ಜಪ್ಪಿನ ಮೊಗರು ಹೆದ್ದಾರಿಯಲ್ಲಿ ಚಾಲಕನಿಗೆ ಕಣ್ಣು ಮಂಜಾಗಿದ್ದು, ರಸ್ತೆ ಮಧ್ಯದ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದರು.

ಮಾನವೀಯತೆ ಮೆರೆದ ಆ್ಯಂಬುಲೆನ್ಸ್ ಚಾಲಕ:

ಈ ವೇಳೆ ರಿಕ್ಷಾ ಹಿಂಬದಿಯಿದ್ದ ಆ್ಯಂಬ್ಯುಲೆನ್ಸ್ ಚಾಲಕ ರಿಕ್ಷಾ ಚಾಲಕನಿಗೆ ಪ್ರಾಥಮಿಕ ಚಿಕಿತ್ಸೆಗೆ ನೀಡಲು ಯತ್ನಿಸಿ, ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಕಣ್ಣೂರು ಮಟ್ಟನ್ನೂರಿನ ಟೀಂ ಎಇಟಿಗೆ ಸೇರಿದ ಆ್ಯಂಬುಲೆನ್ಸ್ ಚಾಲಕ ಆಕಾಶ್ ವಿಜಯನ್ ಕೂಡಲೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಮೊಹಮ್ಮದ್ ಹನೀಫ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನೇಣು ಬಿಗಿದುಕೊಂಡು ಫೈನಾನ್ಸಿಯರ್ ಆತ್ಮಹತ್ಯೆ : ಸ್ಥಳದಲ್ಲಿ ಡೆತ್​ನೋಟ್​​​ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.