ETV Bharat / city

ಮಂಗಳೂರಿನಲ್ಲಿ ಕೇರಳದ ಮೂಲದ ನಾಲ್ಕು ಮಂದಿಗೆ ಕೊರೊನಾ ದೃಢ...

ಮಂಗಳೂರಿನಲ್ಲಿ ಕೇರಳದ ನಾಲ್ಕು ಮಂದಿಗೆ ಕೊರೊನಾ ದೃಢಪಟ್ಟಿದ್ದು ನಗರದಲ್ಲಿರುವ ಕೊರೊನಾ‌ಪೀಡಿತರ ಸಂಖ್ಯೆ ಐದಕ್ಕೇರಿದೆ.

another-four-members-got-corona-virus
ಮಂಗಳೂರಿನಲ್ಲಿ ಕೇರಳದ ನಾಲ್ಕು ಮಂದಿಗೆ ಕೊರೊನಾ ದೃಢ.
author img

By

Published : Mar 24, 2020, 5:59 PM IST

ಮಂಗಳೂರು: ಮಂಗಳೂರಿನಲ್ಲಿ ಕೇರಳ ಮೂಲದ ನಾಲ್ಕು ಮಂದಿಗೆ ಕೊರೊನಾ ದೃಢಪಟ್ಟಿದ್ದು ನಗರದಲ್ಲಿ ಕೊರೊನಾ‌ಪೀಡಿತರ ಸಂಖ್ಯೆ ಐದಕ್ಕೇರಿದೆ.

ಮಾರ್ಚ್ 19ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ದುಬೈನಿಂದ ಸ್ಪೈಸ್​​ ಜೆಟ್ ವಿಮಾನದಲ್ಲಿ ಬಂದಿದ್ದ ಭಟ್ಕಳದ ವ್ಯಕ್ತಿಗೆ ಕೊರೊನಾ ಇರುವುದು ಭಾನುವಾರ ದೃಢಪಟ್ಟಿತ್ತು.

ಅದೇ ವಿಮಾನದಲ್ಲಿ ಬಂದಿದ್ದ ಮತ್ತೆ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ. ಇನ್ನಿಬ್ಬರಲ್ಲಿ ಓರ್ವ ವ್ಯಕ್ತಿಯು ದುಬೈನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್​​​ಪ್ರೆಸ್ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಾ.19 ರಂದು ಬಂದಿದ್ದರೆ, ಮತ್ತೋರ್ವ ವ್ಯಕ್ತಿ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಮಾ.9 ಕ್ಕೆ‌ ಬಂದು ಮಾ.20 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

another-four-members-got-corona-virus
ಕೊರೊನಾ ದೃಢಪಟ್ಟಿರುವ ಸೋಂಕಿತರ ವರದಿ

ಇಂದು ಕೊರೊನಾ ದೃಢಪಟ್ಟವರೆಲ್ಲರೂ ಕೇರಳದವರು ಆಗಿದ್ದಾರೆ. ಕೊರೊನಾ ಪೀಡಿತರು 32 ವರ್ಷ, 47 ವರ್ಷ, 23 ವರ್ಷ ಮತ್ತು 70 ವರ್ಷದವರಾಗಿದ್ದಾರೆ. ಇದರಲ್ಲಿ ಮೂವರಿಗೆ ವೆನ್ಲಾಕ್ ಆಸ್ಪತ್ರೆ ಹಾಗೂ ಓರ್ವನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.