ETV Bharat / city

ಭೂಕುಸಿತ ತಡೆ ಅಧ್ಯಯನ ವರದಿ ಶೀಘ್ರ ಸರ್ಕಾರಕ್ಕೆ ಸಲ್ಲಿಕೆ: ಅನಂತ ಹೆಗಡೆ ಆಶೀಸರ

ಜೀವ ವೈವಿಧ್ಯ ಕಾಯ್ದೆಯಡಿಯಲ್ಲಿ ರಾಜ್ಯದಲ್ಲಿ ಪಾರಂಪರಿಕ ಜೀವವೈವಿಧ್ಯ ತಾಣವೆಂದು ಘೋಷಣೆ ಮಾಡುವ ಪ್ರಕ್ರಿಯೆ ಈಗಾಗಲೇ 2009-10ರಲ್ಲಿ ಪ್ರಾರಂಭವಾಗಿದೆ. ಈಗಾಗಲೇ ದ.ಕ.ಜಿಲ್ಲೆಯ ಪವಿತ್ರ ವನ ಹಾಗೂ ಸಸ್ಯ ಸಂಪತ್ತುಗಳ ದಾಖಲೀಕರಣ ಅಧ್ಯಯನ ನಡೆಸಲಾಗಿದೆ. ಕಂದಾಯ ಇಲಾಖೆಯ ಆಧಾರದ ಮೇಲೆ ಮಂಗಳೂರು, ಪುತ್ತೂರು, ಬೆಳ್ತಂಗಡಿ, ಮೂಡುಬಿದಿರೆ ಹಾಗೂ ಸುಳ್ಯದಲ್ಲಿ ಒಟ್ಟು 987 ಪವಿತ್ರ ವನಗಳನ್ನು ಪಟ್ಟಿ ಮಾಡಲಾಗಿದೆ. ‌

anatha-hegde-ashish-talk-about-report-government-for-landslides
ಭೂಕುಸಿತಗಳ ತಡೆ ಕ್ರಮಕ್ಕೆ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಕೆ: ಅನಂತ ಹೆಗಡೆ ಆಶೀಶ್
author img

By

Published : Oct 3, 2020, 3:46 PM IST

ಮಂಗಳೂರು: ರಾಜ್ಯದಲ್ಲಿ ಭೂಕುಸಿತಗಳು ಹೆಚ್ಚಾಗುತ್ತಿದ್ದು, ಇದಕ್ಕಾಗಿ ಸರ್ಕಾರ ಅಧ್ಯಯನ ಸಮಿತಿಗಳನ್ನು ರಚನೆ ಮಾಡಿದೆ. ಈ ಸಮಿತಿಯು ಭೂಕುಸಿತಗಳು ಉಂಟಾದ ಪ್ರದೇಶಗಳಿಗೆ ತೆರಳಿ ಅಧ್ಯಯನ ನಡೆಸಲಿದೆ. ಆ ಬಳಿಕ ದೊಡ್ಡ ಪ್ರಮಾಣದಲ್ಲಿ ಭೂಕುಸಿತಗಳು ಏಕೆ ಉಂಟಾಗುತ್ತವೆ. ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ತಜ್ಞರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು‌ ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ಭೂಕುಸಿತಗಳ ತಡೆ ಕ್ರಮಕ್ಕೆ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಕೆ: ಅನಂತ ಹೆಗಡೆ ಆಶೀಶ್

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಡಳಿಯ ಅಧ್ಯಕ್ಷನಾಗಿ ನಾನು‌ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಹಲವಾರು ಸಭೆಗಳನ್ನು ನಡೆಸಿದ್ದು, ಸ್ಥಳ ಭೇಟಿ ನಡೆಸಿದ್ದೇನೆ. ಅಂತಿಮ ರೂಪಕ್ಕೆ ಇನ್ನಷ್ಟೇ ವ್ಯವಸ್ಥಿತವಾದ ಶಿಫಾರಸ್ಸು ನೀಡಬೇಕಾಗಿದೆ ಎಂದು ಹೇಳಿದರು.

ಜೀವ ವೈವಿಧ್ಯ ಕಾಯ್ದೆಯಡಿಯಲ್ಲಿ ರಾಜ್ಯದಲ್ಲಿ ಪಾರಂಪರಿಕ ಜೀವವೈವಿಧ್ಯ ತಾಣವೆಂದು ಘೋಷಣೆ ಮಾಡುವ ಪ್ರಕ್ರಿಯೆ ಈಗಾಗಲೇ 2009-10ರಲ್ಲಿ ಪ್ರಾರಂಭವಾಗಿದೆ. ಈಗಾಗಲೇ ದ.ಕ.ಜಿಲ್ಲೆಯ ಪವಿತ್ರ ವನ ಹಾಗೂ ಸಸ್ಯ ಸಂಪತ್ತುಗಳ ದಾಖಲೀಕರಣ ಅಧ್ಯಯನ ನಡೆಸಲಾಗಿದೆ. ಕಂದಾಯ ಇಲಾಖೆಯ ಆಧಾರದ ಮೇಲೆ ಮಂಗಳೂರು, ಪುತ್ತೂರು, ಬೆಳ್ತಂಗಡಿ, ಮೂಡುಬಿದಿರೆ ಹಾಗೂ ಸುಳ್ಯದಲ್ಲಿ ಒಟ್ಟು 987 ಪವಿತ್ರ ವನಗಳನ್ನು ಪಟ್ಟಿ ಮಾಡಲಾಗಿದೆ. ‌

ಇವುಗಳ ಪೈಕಿ 24 ವನಗಳನ್ನು ಅವುಗಳ ಗಾತ್ರ, ಮಾಲಿಕತ್ವ, ನಿರ್ವಹಣೆ ದೇವತೆ ಹಾಗೂ ಆಚರಣೆಗಳಿಗೆ ಸಂಬಂಧಿಸಿದಂತೆ ವಿವರಗಳನ್ನು ದಾಖಲಿಸಲು ಆಯ್ಕೆ ಮಾಡಲಾಗಿದೆ. ಇಲ್ಲಿ 290 ವಿವಿಧ ಸಸ್ಯ ಪ್ರಬೇಧಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ 119 ಮರ ಜಾತಿ, 67 ಪೊದೆ ಜಾತಿ, 46 ಹಬ್ಬು ಸಸ್ಯಗಳು, 51 ಗಿಡಮೂಲಿಕೆಗಳು, 3 ಅಪ್ಪು ಸಸ್ಯಗಳು ಹಾಗೂ 4 ಜರಿ ಸಸ್ಯಗಳು ಎಂದು ಅಧ್ಯಯನ ನಡೆಸಲಾಗಿದೆ. ಅಲ್ಲದೆ ಅಧ್ಯಯನದಲ್ಲಿ ಆರು ಅಳಿವಿನಂಚಿನಲ್ಲಿರುವ ಪ್ರಬೇಧಗಳು ಹಾಗೂ ಎರಡು ತೀವ್ರ ಅಳಿವಿನಂಚಿನಲ್ಲಿರುವ ಪ್ರಬೇಧಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.