ETV Bharat / city

ಎನ್​ಆರ್​ಸಿ ಹಿಂಪಡೆದರೆ ಅಮಿತ್​​ ಶಾ ದೇಶದ ಜನರ ಮುಂದೆ ಕ್ಷಮೆ ಕೇಳಲಿ: ಐವನ್ ಡಿಸೋಜ

author img

By

Published : Jan 16, 2020, 8:22 PM IST

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ವಿಧಾನ ಪರಿಷತ್​ ಸದಸ್ಯ ಐವನ್ ಡಿಸೋಜ, ಪ್ರಧಾನಿ ಮೋದಿಯವರು ಎನ್ಆರ್‌ಸಿ ಕಾಯ್ದೆ ಜಾರಿಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಪ್ರಧಾನಿ ಹೇಳಿಕೆ ನಿಜವಾದಲ್ಲಿ ಅಮಿತ್ ಶಾ ದೇಶದ ಜನರ ಮುಂದೆ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದ್ದಾರೆ.

ivan-dsouza
ವಿಧಾನ ಪರಿಷತ್​ ಸದಸ್ಯ ಐವನ್ ಡಿಸೋಜ

ಮಂಗಳೂರು : ಪ್ರಧಾನಿ ಮೋದಿಯವರು ಎನ್ಆರ್‌ಸಿ ಕಾಯ್ದೆ ಜಾರಿಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಗೃಹ ಮಂತ್ರಿ ಅಮಿತ್ ಶಾ ಅವರು ಎನ್ಆರ್‌ಸಿ ಜಾರಿಗೊಳಿಸುವ ಬಗ್ಗೆ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ‌. ಒಂದು ವೇಳೆ ಪ್ರಧಾನಿ ಹೇಳಿಕೆ ನಿಜವಾದಲ್ಲಿ ಅಮಿತ್ ಶಾ ದೇಶದ ಜನರ ಮುಂದೆ ಕ್ಷಮೆ ಯಾಚಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆಗ್ರಹಿಸಿದ್ದಾರೆ.

ನಗರದ ಮ.ನ.ಪಾದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಅಮಿತ್ ಶಾ ತಮ್ಮ ಹೇಳಿಕೆ ಹಿಂದಕ್ಕೆ ತೆಗೆದುಕೊಳ್ಳುವುದಾದರೆ ಇಂತಹ ಗೊಂದಲ ಯಾಕೆ ಸೃಷ್ಟಿಸಲಾಗಿದೆ ಎಂದು ಸ್ಪಷ್ಟನೆ ನೀಡಲಿ ಎಂದು ಕಿಡಿಕಾರಿದರು.

ಅಮಿತ್ ಶಾ ವಿರುದ್ಧ ಗುಡುಗಿದ ವಿಧಾನ ಪರಿಷತ್​ ಸದಸ್ಯ ಐವನ್ ಡಿಸೋಜ

ಚುನಾವಣೆ ಸಂದರ್ಭದಲ್ಲಿ ಮಹದಾಯಿ ವಿಚಾರ ಬಗೆಹರಿಸುವುದಾಗಿ ಹೇಳಿ ಚುನಾವಣೆ ಗಿಮಿಕ್ ಮಾಡಿದ್ದರು. ಆದರೆ ಚುನಾವಣೆ ಮುಗಿದು ಇಷ್ಟು ದಿನವಾದ್ರೂ ಯಾವುದೇ ಚಕಾರವೆತ್ತಿಲ್ಲ. ಈ ಬಗ್ಗೆ ರಾಜ್ಯದ ಜನರಿಗೆ ಎನು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಲಿ ಎಂದು ಒತ್ತಾಯಿಸಿದರು.

ಮೂರು ಲಕ್ಷ ಕೋಟಿ ರೂ. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡಲಾಗಿದೆ, ಸಿದ್ದರಾಮಯ್ಯ ಸರ್ಕಾರ ಅದನ್ನು ಜನರಿಗೆ ತಲುಪಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈಗ ನಿಮ್ಮದೇ ಸರಕಾರವಿದೆ. ಈ ಬಾರಿ ಎಷ್ಟು ಅನುದಾನ ನೀಡಿದ್ದೀರಿ ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸಿ. ಈ ಬಗ್ಗೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಯಲಿ ಎಂದು ಸವಾಲೆಸೆದರು.

ರಾಜ್ಯದಲ್ಲಿ ಭೀಕರ ಪ್ರವಾಹ ಬಂದು 35 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ರಾಜ್ಯಸರ್ಕಾರ ವರದಿ ಮಾಡಿತ್ತು. ಆದರೆ ಈವರೆಗೆ ಕೇವಲ 1,800 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದಾರೆ. ಬೇರೆ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದೀರಿ, ಈ ರೀತಿಯ ಮಲತಾಯಿ ಧೋರಣೆ ನೀತಿ ಏಕೆ? ಎಂದರು.

ಜ. 18,19 ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದು ಇದೆಲ್ಲದ್ದಕ್ಕೂ ಉತ್ತರ ನೀಡಲಿ ಎಂದು ಐವನ್ ಡಿಸೋಜ ಹೇಳಿದರು.

Intro:ಮಂಗಳೂರು: ದೇಶದ ಪ್ರಧಾನಿ ಮೋದಿಯವರು ಎನ್ಆರ್ ಸಿ ಕಾಯ್ದೆ ಜಾರಿಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ದೇಶದ ಗೃಹ ಮಂತ್ರಿ ಅಮಿತ್ ಶಾ ಅವರು ಎನ್ಆರ್ ಸಿ ಜಾರಿಗೊಳಿಸುವ ಬಗ್ಗೆ ಒಂದಿಂಚೂ ಹಿಂದೆ ಸರಿಯುದಿಲ್ಲ ಎಂದು ಗೊಂದಲ ಸೃಷ್ಟಿಸುತ್ತಿದ್ದಾರೆ‌. ಪ್ರಧಾನಿ ಹೇಳಿಕೆ ನಿಜವಾದಲ್ಲಿ ಅಮಿತ್ ಶಾ ದೇಶದ ಜನರ ಮುಂದೆ ಕ್ಷಮೆ ಯಾಚಿಸಲಿ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಹೇಳಿದರು.

ಮಂಗಳೂರು ಮನಪಾದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಅಮಿತ್ ಶಾ ತಮ್ಮ ಹೇಳಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುವುದಾದರೆ ಇಂತಹ ಗೊಂದಲ ಯಾಕೆ ಸೃಷ್ಟಿಸಲಾಗಿದೆ ಎಂದು ಸ್ಪಷ್ಟನೆ ನೀಡಲಿ ಎಂದು ಹೇಳಿದರು.

Body:ಹಿಂದೆ ಚುನಾವಣೆಯ ಸಂದರ್ಭ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ಅವರನ್ನು ಮನೆಗೆ ಕರೆಸಿ ಮಹಾದಾಯಿ ವಿಚಾರದಲ್ಲಿ‌ ಮಾತನಾಡಿ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಗೋವಾದ ಜೊತೆಯಲ್ಲಿಯೂ ಮಾತನಾಡಿ ಈ ಸಮಸ್ಯೆಯನ್ನು ಇತ್ಯರ್ಥ ಗೊಳಿಸುವ ಪ್ರಯತ್ನ ಮಾಡುತ್ತೇನೆ ಎಂದು ಚುನಾವಣಾ ಗಿಮಿಕ್ ಮಾಡಿದ್ದರು‌. ಆದರೆ ಚುನಾವಣೆ ಮುಗಿದು ಇಷ್ಟು ಕಾಲವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅಮಿತ್ ಶಾ ಅವರು ಏನು ಪರಿಹಾರ ಕ್ರಮ ಕೈಗೊಂಡಿದ್ದಾರೆ ತಿಳಿಸಲಿ ಎಂದು ಐವನ್ ಡಿಸೋಜ ಹೇಳಿದರು.

ಕಳೆದ ಬಾರಿ ಅಮಿತ್ ಶಾ ರಾಜ್ಯಕ್ಕೆ ಬಂದಾಗ ಮೂರು ಲಕ್ಷ ಲ ಕೋಟಿ ರೂ. ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡಲಾಗಿದೆ, ಸಿದ್ದರಾಮಯ್ಯ ಸರಕಾರ ಅದನ್ನು ಜನರಿಗೆ ತಲುಪಿಸಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈಗ ನಿಮ್ಮದೇ ಸರಕಾರವಿದೆ. ಈ ಬಾರಿ ಎಷ್ಟು ಅನುದಾನ ನೀಡಿದ್ದೀರಿ ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸಿ. ಈ ಬಗ್ಗೆ ಮುಂದಿನ ವಿಧಾನ ಸಭಾ ಅಧಿವೇಶನದಲ್ಲಿ ಚರ್ಚೆ ನಡೆಯಲಿ ಎಂದು ಸವಾಲೆಸೆದರು.

ರಾಜ್ಯದಲ್ಲಿ ಭೀಕರ ಪ್ರವಾಹ ಎದುರಾದಾಗ ಅಮಿತ್ ಶಾ ಕರ್ನಾಟಕ ಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಸುಮಾರು 35 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ರಾಜ್ಯ ವರದಿ ಮಾಡಿತ್ತು. ಆದರೆ ಈವರೆಗೆ ಕೇವಲ 1800 ಕೋಟಿ ರೂ. ಮಾತ್ರ ಬಿಡುಗಡೆ ಆಗಿದೆ. ಆದರೆ ಇತರ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದೀರಿ. ಈ ರೀತಿಯ ಮಲತಾಯಿ ಧೋರಣೆ ನೀತಿ ಯಾಕೆ ಅನುಸರಿಸಿದ್ದೀರಿ ಎಂದು ರಾಜ್ಯದ ಜನತೆಯ ಮುಂದೆ ಸ್ಪಷ್ಟ ಪಡಿಸಲಿ. ನಾಡಿದ್ದು ಜನವರಿ18,19 ಅಮಿತ್ ಶಾ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ರಾಜ್ಯದ ಜನತೆ ಬೀದಿಪಾಲಾಗಿದ್ದಾರೆ, ಮನೆ, ಭೂಮಿ, ಬೆಳೆ ಕಳೆದುಕೊಂಡಿದ್ದಾರೆ. ಇದೆಲ್ಲದ್ದಕ್ಕೂ ಅಮಿತ್ ಶಾ ನಾಡಿದ್ದು ಉತ್ತರ ನೀಡಲಿ ಎಂದು ಐವನ್ ಡಿಸೋಜ ಹೇಳಿದರು.

Vishwanath Panjimogaru

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.