ಮಂಗಳೂರು: ಎಐಸಿಸಿ ಕಾರ್ಯದರ್ಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾಲೀಕತ್ವದ ಕಾರು ಡಿಕ್ಕಿಯಾಗಿ ನೇಪಾಳ ಮೂಲದ ವ್ಯಕ್ತಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಓದಿ: ಮೀಸಲಾತಿ ಘೋಷಣೆ ಮಾಡದಿದ್ದರೆ ವಿಧಾನಸೌಧ ಮುತ್ತಿಗೆ: ವಿಜಯಾನಂದ ಕಾಶಪ್ಪನವರ
ನೇಪಾಳ ನಿವಾಸಿ ಕಮಲ್ (50) ಎಂಬುವರು ಮೃತಪಟ್ಟವರು. ಘಟನೆ ಫೆ. 7ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಐವನ್ ಡಿಸೋಜ ಮಾಲೀಕತ್ವದ ಕಾರಿನ ಚಾಲಕ ಪ್ರದೀಪ್ ನಿರ್ಲಕ್ಷ್ಯದಿಂದ ಚಲಾಯಿಸಿ ಮಂಗಳೂರಿನ ಅಡ್ಯಾರ್ ಸಮೀಪ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ.
ಈ ಸಂದರ್ಭದಲ್ಲಿ ಐವನ್ ಡಿಸೋಜ ಕೇರಳ ಪ್ರವಾಸದಲ್ಲಿದ್ದು, ಕಾರಿನಲ್ಲಿ ಇರಲಿಲ್ಲ. ಅಪಘಾತದಿಂದ ತಲೆಗೆ ತೀವ್ರ ಗಾಯಗಳಾಗಿದ್ದ ಕಮಲ್ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಫೆ. 10ರಂದು ಮೃತಪಟ್ಟಿದ್ದಾರೆ.
ಮೃತದೇಹವನ್ನು ವೆನ್ಲಾಕ್ ಶವಗಾರದಲ್ಲಿರಿಸಲಾಗಿದ್ದು, ಕಮಲ್ ಕುಟುಂಬ ನೇಪಾಳದಿಂದ ಬಂದು ಕೊಂಡೊಯ್ಯಲಿದೆ ಎಂದು ತಿಳಿದು ಬಂದಿದೆ.