ಉಳ್ಳಾಲ: ದರ್ಗಾದಂತಹ ಪವಿತ್ರ ಜಾಗದಲ್ಲಿ ಧರ್ಮ, ಜಾತಿ ಆಧಾರಿತ ವಿಂಗಡಣೆ ಇರುವುದಿಲ್ಲ. ಎಲ್ಲರೂ ಸಹಬಾಳ್ವೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಶಾಂತಿಯುತ, ಸೌಹಾರ್ದಯುತ ಸಮಾಜ ನಿರ್ಮಾಣ ಸಾಧ್ಯ ಎಂದು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದರು.
ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದವರಲ್ಲಿ ಮಂಗಳೂರಿನ ಜನತೆ ಅಗ್ರಸ್ಥಾನದಲ್ಲಿದ್ದಾರೆ. ಪ್ರತಿಯೊಬ್ಬರು ತಮ್ಮ ಧರ್ಮವನ್ನು ಅರ್ಥ ಮಾಡಿಕೊಂಡರೆ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದರು.
ಈ ವೇಳೆ ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಯು.ಕೆ.ಇಬ್ರಾಹೀಮ್, ಎ.ಕೆ ಮೊಹಿಯದ್ದೀನ್, ಅಬೂಬಕ್ಕರ್ ಕೋಟೆಪುರ, ಎಂ.ಹೆಚ್.ಇಬ್ರಾಹೀಂ ಹಳೆಕೋಟೆ, ಅಮೀರ್, ಆಸಿಫ್ ಅಬ್ದುಲ್ಲ, ಅಬ್ಬಾಸ್ ಪಿಲಾರು, ಸದಸ್ಯರಾದ ಕುಂಞ ಅಹ್ಮದ್ ಅಳೇಕಲ, ಇಬ್ರಾಹೀಮ್ ಹಾಜಿ ಉಳ್ಳಾಲಬೈಲು, ಕಾಸಿಂ ಕೋಡಿ, ಹನೀಫ್ ಸೋಲಾರ್, ಕಾದರ್ ಮೊಯ್ಲಾರ್, ಅಲಿಮೋನು, ಹಸನ್ ಕೈಕೊ, ನಝೀರ್ ಸುಂದರಿಬಾಗ್, ಹಸೈನಾರ್ ಬೊಟ್ಟು, ಕೆ.ಎನ್.ಮಹ್ಮೂದ್, ಜಮಾಲ್ ಮೇಲಂಗಡಿ, ಹಮ್ಮಬ್ಬ ಕೋಟೇಪುರ ಮತ್ತಿತರರು ಉಪಸ್ಥಿತರಿದ್ದರು.