ಮಂಗಳೂರು: ಮಂಗಳೂರಿನ ಸುರತ್ಕಲ್ನಲ್ಲಿರುವ ಬಾರ್ನಲ್ಲಿ ಕುಡಿದ ಮತ್ತಿನಲ್ಲಿ ನಡೆದ ಗಲಾಟೆಯಲ್ಲಿ ಒಬ್ಬನ ಹತ್ಯೆಯಾಗಿದ್ದು,ಮೂವರನ್ನು ಬಂಧಿಸಲಾಗಿದೆ.
ಮಂಗಳೂರಿನ ಗುಡ್ಡೆಕೊಪ್ಲ ನಿವಾಸಿ ಸಂದೇಶ್ (30) ಹತ್ಯೆಯಾದ ಯುವಕ. ಸುರತ್ಕಲ್ ಜಂಕ್ಷನ್ನಲ್ಲಿರುವ ಬಾರ್ನಲ್ಲಿ ಸಂದೇಶ್ ಕುಡಿಯುತ್ತಿದ್ದಾಗ ರಾಜ,ಗಣೇಶ್,ಸುಹೈಲ್ ಕೂಡ ಅಲ್ಲಿಗೆ ಬಂದಿದ್ದರು. ಈ ವೇಳೆ ಅವರ ನಡುವೆ ಗಲಾಟೆ ಆಗಿತ್ತು. ಬಳಿಕ ಮೂವರು ಸೇರಿ ಸಂದೇಶ್ಗೆ ಇರಿದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ದೂರು ಸ್ವೀಕರಿಸಿದ ಪೊಲೀಸರು ಸದ್ಯ, ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.