ETV Bharat / city

ಶಂಕಿತ ಇಲಿ ಜ್ವರಕ್ಕೆ ಮಂಗಳೂರಲ್ಲಿ ಯುವಕ ಬಲಿ

author img

By

Published : Sep 11, 2019, 9:44 AM IST

ಶಂಕಿತ ಇಲಿ ಜ್ವರಕ್ಕೆ ಕಡಬ ಮೂಲದ ಯುವಕನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಇಲಿ ಜ್ವರಕ್ಕೆ ಯುವಕನೋರ್ವ ಬಲಿ

ಮಂಗಳೂರು: ಶಂಕಿತ ಇಲಿ ಜ್ವರಕ್ಕೆ ಕಡಬ ಮೂಲದ ಯುವಕನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಹಳೆನೇರಂಕಿ ಗ್ರಾಮದ ಕುಕ್ಕೇಜಾಲು ನಿವಾಸಿ ಕುಂಞಿ ಮುಗೇರ ಎಂಬುವರ ಪುತ್ರ ಅನೀಶ್ ಕೆ. ಮೃತಪಟ್ಟಿರುವ ಯುವಕ. ಅನೀಶ್ ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಸಂಬಂಧ ಪಟ್ಟ ಮಲ್ಲಿಕಟ್ಟೆಯಲ್ಲಿರುವ ಪರಂಪರಾ ಕರಕುಶಲ ವಸ್ತುಗಳ ಮಾರಾಟ ಮಳಿಗೆಯಲ್ಲಿ ಉದ್ಯೋಗಿಯಾಗಿದ್ದರು. ಸೆ.5 ರಂದು ಆತನಿಗೆ ದಿಢೀರ್ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅನಿಶ್​ನನ್ನು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಯುವಕ ಕೊನೆಯುಸಿರೆಳೆದಿದ್ದಾನೆ.

ಈ ಕುರಿತು ದ‌ಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಪ್ರತಿಕ್ರಿಯಿಸಿ, ಅನೀಶ್​ ಇಲಿ ಜ್ವರದಿಂದ ಮೃತಪಟ್ಟಿದ್ದಾರೆಂದು ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ. ವರದಿ ಬಂದ ನಂತರವೇ ಈ ಬಗ್ಗೆ ಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

Intro:ಮಂಗಳೂರು: ಶಂಕಿತ ಇಲಿಜ್ವರಕ್ಕೆ ಕಡಬ ಮೂಲದ ಯುವಕನೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹಳೆನೇರಂಕಿ ಗ್ರಾಮದ ಕುಕ್ಕೇಜಾಲು ನಿವಾಸಿ ಕುಂಞಿ ಮುಗೇರ ಎಂಬವರ ಪುತ್ರ ಅನೀಶ್ ಕೆ. ಎಂಬವರು ಮೃತಪಟ್ಟ ಯುವಕ.

Body:ಅನೀಶ್ ಅವರು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಸಂಬಂಧಪಟ್ಟ ಮಲ್ಲಿಕಟ್ಟೆಯಲ್ಲಿರುವ ಪರಂಪರಾ ಕರಕುಶಲ ವಸ್ತುಗಳ ಮಾರಾಟ ಮಳಿಗೆಯಲ್ಲಿ ಉದ್ಯೋಗಿಯಾಗಿದ್ದರು. ಸೆ.5 ರಂದು ಅವರಿಗೆ ದಿಢೀರ್ ಜ್ವರ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅನೀಶ್ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ದ‌.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಪ್ರತಿಕ್ರಿಯಿಸಿ, ಈಗಲೇ ಇಲಿಜ್ವರದಿಂದ ಮೃತಪಟ್ಟಿದ್ದಾರೆಂದು ಹೇಳಲು ಸಾಧ್ಯವಿಲ್ಲ. ವರದಿ ಬಂದ ನಂತರವೇ ಈ ಬಗ್ಗೆ ಹೇಳಲು ಸಾಧ್ಯವೆಂದು ಹೇಳಿದರು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.