ETV Bharat / city

ಉಳ್ಳಾಲ ಮಹಿಳೆ ಗಂಭೀರ, ಆಸ್ಪತ್ರೆಗೆ ದಾಖಲು.. ಗಾಯದ ಕಾರಣ ನಿಗೂಢ!

ಮಹಿಳೆಯೊಬ್ಬರು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ನಿಗೂಢವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

Ullal
ಉಳ್ಳಾಲ
author img

By

Published : Jan 9, 2021, 7:46 AM IST

ಉಳ್ಳಾಲ (ಮಂಗಳೂರು): ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಮಹಿಳೆಯೊಬ್ಬರ ತಲೆಗೆ ಗಂಭೀರ ಏಟು ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಘಟನೆಗೆ ಕಾರಣ ನಿಗೂಢವಾಗಿದ್ದು, ಮಹಿಳೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಾತನಾಡದ ಸ್ಥಿತಿಯಲ್ಲಿದ್ದಾರೆ.

ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿಯ ಮಿರಾಕಲ್ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬ್ಲಮೊಗರುವಿನ ಮದಕ ಸಮೀಪದ ತಾರಿಗುಡ್ಡೆ ನಿವಾಸಿ ದಿನೇಶ್ ಎಂಬವರ ಪತ್ನಿ ಶೋಭಾ (30) ಎಂಬುವರೇ ಗಂಭೀರವಾಗಿ ಗಾಯಗೊಂಡವರು. ಜ.5 ರಂದು ತೊಕ್ಕೊಟ್ಟುವಿನಿಂದ ಬಸ್ಸಿನಲ್ಲಿ ಹೊರಟ ಶೋಭಾ ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ಆಸ್ಪತ್ರೆಯಿಂದಲೇ ಮನೆಗೆ ಮಾಹಿತಿ ಬಂದಿತ್ತು.

ಈ ಕುರಿತು ಆಸ್ಪತ್ರೆ ಮಂದಿಯಲ್ಲಿ ವಿಚಾರಿಸಿದಾಗ ರಿಕ್ಷಾ ಚಾಲಕನೊಬ್ಬ ಗಾಯಾಳು ಮಹಿಳೆಯನ್ನು ತಂದು ಆಸ್ಪತ್ರೆ ತುರ್ತು ನಿಗಾ ಘಟಕದ ಎದುರು ಕುಳ್ಳಿರಿಸಿ, ಗಾಯದ ಮೂಲವನ್ನು ತಿಳಿಸದೆ ಕಣ್ಮರೆಯಾಗಿದ್ದಾನೆ. ಆಸ್ಪತ್ರೆ ಆಡಳಿತ ಗಾಯಾಳು ಮಹಿಳೆಯನ್ನು ತಕ್ಷಣ ದಾಖಲಿಸಿ ಚಿಕಿತ್ಸೆ ಆರಂಭಿಸಿ ಮಾನವೀಯತೆ ಮರೆದಿದ್ದಾರೆ.

ತಲೆಗೆ ಗಾಯಗಳಾಗಿರುವುದರಿಂದ ಅಪಘಾತ ಪ್ರಕರಣವೆಂಬ ಸಂಶಯದಡಿ ನಾಗುರಿ ಸಂಚಾರಿ ಠಾಣೆಗೆ ಮಾಹಿತಿ ನೀಡಿದ್ದಾರೆ. ಆದರೆ ಶೋಭಾ ಬಲ್ಲವರ ಪ್ರಕಾರ, ಅವರ ಬಳಿ ಅಂದಿನ ಸಂಬಳದ ಹಣವಿರಬೇಕಿತ್ತು. ಆದರೆ ಅದು ಅವರ ಬಳಿಯಿರಲಿಲ್ಲ. ಅಪಘಾತ ಪ್ರಕರಣವಾಗಿದ್ದಲ್ಲಿ ರಿಕ್ಷಾ ಚಾಲಕ ಆಸ್ಪತ್ರೆ ಸಿಬ್ಬಂದಿಯಲ್ಲಿ ತಿಳಿಸಿ ತೆರಳಬಹುದಿತ್ತು ಅನ್ನುವ ಸಂಶಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಕಲಿ ಔಷಧಿ ನೀಡಿ ವಂಚಿಸುತ್ತಿದ್ದ ಜಾಲ ಪತ್ತೆ; ನಾಲ್ವರ ಬಂಧನ

ನಾಗುರಿ ಸಂಚಾರಿ ಠಾಣಾ ಪೊಲೀಸರು ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿ, ಅಪಘಾತ ನಡೆಸಿದೆ ಎನ್ನಲಾದ ವಾಹನಕ್ಕಾಗಿ ಶೋಧ ಮುಂದುವರಿಸಿದ್ದಾರೆ. ಆಸ್ಪತ್ರೆಯಿಂದ ರಿಕ್ಷಾ ಚಾಲಕನ ಕುರಿತ ಸಿಸಿಟಿವಿಯ ದಾಖಲೆಯನ್ನು ಪಡೆದುಕೊಂಡಿದ್ದಾರೆ. ಆದರೆ ಮೂರು ದಿನಗಳಾದರೂ ಆತನ ಪತ್ತೆಯಾಗಿಲ್ಲ. ಮಹಿಳೆ ಇನ್ನೂ ಮಾತನಾಡಲಾಗದ ಸ್ಥಿತಿಯಲ್ಲಿದ್ದಾಳೆ.

ಟೈಲರ್ಸ್ ಅಸೋಸಿಯೇಷನ್ ಆಗ್ರಹ :

ಪ್ರಕರಣದ ಸತ್ಯಾಸತ್ಯತೆಯನ್ನು ಕೂಡಲೇ ಪೊಲೀಸ್ ಇಲಾಖೆ ಕಂಡುಹಿಡಿದು ಮನೆಮಂದಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಟೈಲರ್ಸ್ ಅಸೋಸಿಯೇಶನ್ ಉಳ್ಳಾಲ ಕ್ಷೇತ್ರ ಸಮಿತಿ ಆಗ್ರಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.