ಮಂಗಳೂರು : ವೈದ್ಯರೊಬ್ಬರ ಮಗು ಕ್ಲಿನಿಕ್ ಕೊಠಡಿಯೊಳಗಿನಿಂದ ಬಾಗಿಲು ಲಾಕ್ ಮಾಡಿಕೊಂಡು ಆತಂಕ ಸೃಷ್ಟಿಸಿದ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ. ಪುತ್ತೂರಿನ ಕಲ್ಲಾರೆ ಎಂಬಲ್ಲಿನ ಖಾಸಗಿ ಕಟ್ಟಡದಲ್ಲಿ ಈ ಕ್ಲಿನಿಕ್ ಇದೆ.
ಶನಿವಾರ ವೈದ್ಯರ 5 ವರ್ಷದ ಮಗು ಕ್ಲಿನಿಕ್ಗೆ ಬಂದಿತ್ತು. ಮಗು ಕ್ಲಿನಿಕ್ ಒಳಗಡೆ ಇದ್ದ ಕೊಠಡಿಯೊಳಗೆ ಹೋಗಿ ಒಳಗಿನಿಂದ ಬಾಗಿಲು ಚಿಲಕ ಹಾಕಿಕೊಂಡಿತ್ತು. ಸ್ವಲ್ಪ ಹೊತ್ತಿನ ಬಳಿಕ ವೈದ್ಯರು ಎಷ್ಟು ಕರೆದರೂ ಮಗು ಸ್ಪಂದಿಸಿಲ್ಲ. ಆತಂಕಗೊಂಡ ವೈದ್ಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು.
ತಕ್ಷಣವೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ, ಬಾಗಿಲು ಮುರಿದು ಒಳ ಹೋದಾಗ ಮಗು ಆರಾಮಾಗಿ ಮಲಗಿದ್ದು ಕಂಡು ಬಂದಿದೆ. ಮಗುವನ್ನು ನೋಡಿದ ಬಳಿಕ ಗಾಬರಿಗೊಂಡಿದ್ದ ವೈದ್ಯರು ನಿರಾಳರಾಗಿದ್ದಾರೆ.
(ಇದನ್ನೂ ಓದಿ: ತಂದೆ-ಮಗನನ್ನು ಬಲಿ ಪಡೆದ ಹುಟ್ಟುಹಬ್ಬ, ಶಾಲಾ ಆಡಳಿತ ಮಂಡಳಿ?)