ಬೆಳ್ತಂಗಡಿ : ಮನೆ ಕೆಲಸಕ್ಕಾಗಿ ಅಂಗಳದಲ್ಲಿ ಜೋಡಿಸಿಟ್ಟಿದ್ದ ಕೆಂಪು ಕಲ್ಲು ಕುಸಿದು ಬಿದ್ದು ಮೂರು ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಎಂಬಲ್ಲಿ ನಡೆದಿದೆ.
ಕುಪ್ಪೆಟಿ ನಿವಾಸಿ ಅಶ್ರಪ್ ಎಂಬುವರ ಮೂರು ವರ್ಷದ ಮಹಮ್ಮದ್ ನೌಷೀರ್ ಮೃತಪಟ್ಟ ಮಗು. ಮನೆಯ ಅಂಗಳದಲ್ಲಿ ಮಗು ಆಟ ಆಡುತ್ತಿದ್ದ ಸಂದರ್ಭ ಅಂಗಳದಲ್ಲಿ ಮನೆ ಕೆಲಸಕ್ಕಾಗಿ ಇರಿಸಿದ್ದ ಕಲ್ಲು ಕುಸಿದು ಈ ಘಟನೆ ಸಂಭವಿಸಿದೆ.
ಅಶ್ರಫ್ ಅವರ ಮನೆಯ ಕಾಮಗಾರಿ ನಡೆಯುತ್ತಿದ್ದು, ಇದಕ್ಕಾಗಿ ಕಲ್ಲು ತಂದು ಇಡಲಾಗಿತ್ತು. ಆಕಸ್ಮಿಕವಾಗಿ ಕಲ್ಲು ಜಾರಿ ಮಗುವಿನ ಮೇಲೆ ಬಿದ್ದಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
(ಇದನ್ನೂ ಓದಿ: ಒಂದೇ ಕೈಯಲ್ಲಿ ರಷ್ಯಾ ಯುದ್ಧ ಟ್ಯಾಂಕರ್ ನಿಲ್ಲಿಸಿದ ಬಲಶಾಲಿ..ಸಖತ್ ಸದ್ದು ಮಾಡುತ್ತಿದೆ ವೈರಲ್ ವಿಡಿಯೋ!)