ಮಂಗಳೂರು: ಅಪರೂಪದ ಕೊರೊನಾ ಪ್ರಕರಣವೊಂದರಲ್ಲಿ ತೀವ್ರತರವಾಗಿ ಬಳಲುತ್ತಿದ್ದ 16ರ ಬಾಲಕಿಯೋರ್ವಳು ಚೇತರಿಸಿಕೊಂಡು ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ. ವೆನ್ಲಾಕ್ ಆಸ್ಪತ್ರೆಯಲ್ಲಿಯೇ ಈ ವಯೋಮಾನದವರಲ್ಲಿ ಈ ರೀತಿ ತೀವ್ರತರವಾಗಿ ಸೋಂಕು ಉಲ್ಬಣಗೊಂಡ ರೋಗಿಗಳಲ್ಲಿ ಚೇತರಿಕೆಯಾಗಿ ಮನೆಗೆ ತೆರಳಿರುವ ಮೊದಲ ಪ್ರಕರಣ ಇದಾಗಿದೆ.
ಬಾಲಕಿ ತೀವ್ರತರವಾದ ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿದ್ದಳು. ಅಲ್ಲದೆ, ಮಕ್ಕಳ ವಯಸ್ಸಿಗೆ ಇಷ್ಟೊಂದು ತೀವ್ರತರವಾಗಿ ಸೋಂಕು ಉಲ್ಬಣಗೊಂಡ ಪ್ರಕರಣಗಳು ಕಂಡಿರದ ಕಾರಣ ಹಾಗೂ ಬಹು ಅಂಗಾಗಗಳ ಉರಿಯೂತ ಅಂದುಕೊಂಡು ಕೂಡಾ ವೈದ್ಯರು ಚಿಕಿತ್ಸೆ ನೀಡಿದ್ದರು.
24 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಾಲಕಿ, ಒಟ್ಟು 12 ದಿನಗಳ ಕಾಲ ಐಸಿಯುವಿನಲ್ಲಿ ಚಿಕಿತ್ಸೆ ಪಡೆದಿದ್ದಳು. ಅದರಲ್ಲಿ 8 ದಿನಗಳ ಕಾಲ ಕೃತಕ ಉಸಿರಾಟದಲ್ಲಿ ಇದ್ದಳು. ಮಂಗಳವಾರ ಆಸ್ಪತ್ರೆಯ ಚಿಕಿತ್ಸೆ ಮುಗಿಸಿಕೊಂಡು ಮನೆಗೆ ತೆರಳಿದ್ದಾರೆ. ಇನ್ನೂ ಮೂರು ತಿಂಗಳ ಕಾಲ 15 ದಿನಕ್ಕೊಮ್ಮೆ ತಪಾಸಣೆಗೆ ಒಳಗಾಗಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಕರಾವಳಿಯಲ್ಲಿ 'ಕಲ್ಲಣಬೆ' ಘಮಲು : ಜಿಟಿ ಜಿಟಿ ಮಳೆ ಜೊತೆ ನಾಲಿಗೆಯಲ್ಲಿ ನೀರೂರಿಸುತ್ತೆ ಪದಾರ್ಥ