ಮಂಗಳೂರು: ಕೊರೊನಾ ಸಂದರ್ಭದಲ್ಲಿ ಜನರಿಗೆ ರೋಗದ ಕುರಿತು ಇತರೆ ಮಾಹಿತಿಯ ಅಗತ್ಯ ಇರುತ್ತದೆ. ಆದರೆ, ಇದು ಒಂದೆ ಕಡೆ ಸಿಗುವ ಸೌಲಭ್ಯವಿಲ್ಲ. ಹೀಗಾಗಿ 12ನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಸೇರಿ ಹೊಸ ವೆಬ್ಸೈಟ್ವೊಂದನ್ನು ರಚಿಸಿದ್ದಾರೆ.
www.covidwarzonedk.com ಎಂಬ ವೆಬ್ಸೈಟ್ ಮಂಗಳೂರು ಜನತೆಗೆ ಕೊರೊನಾ ಕುರಿತ ಮಾಹಿತಿಯನ್ನು ನೀಡುತ್ತಿದೆ. ನಗರದ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ನಲ್ಲಿ ಸಿಬಿಎಸ್ಇ 12 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಅಮೋಲ್ ಮೆಂಡೊನ್ಸ ಮತ್ತು ಅದ್ವಿಕ್ ಅಭ್ಯುದಿತ್ ಹೆಗ್ಡೆ ಈ ಜಾಲತಾಣವನ್ನು ರೂಪಿಸಿದ್ದಾರೆ. ಜೆಇಇ ಪರೀಕ್ಷೆಯ ಕೋಚಿಂಗ್ ಪಡೆಯುತ್ತಿರುವ ಇವರು, ಜನರ ಅನುಕೂಲಕ್ಕಾಗಿ ಈ ವೆಬ್ಸೈಟ್ ಆರಂಭಿಸಿದ್ದಾರೆ.

ಇದರಲ್ಲಿ ಕೋವಿಡ್ಗೆ ಸಂಬಂಧಿಸಿದ ಸುದ್ದಿಗಳು, ಕೊರೊನಾ ಸ್ಟಾಟಿಸ್ಟಿಕ್, ಸರ್ಕಾರದ ನಿಯಮಾವಳಿಗಳು, ಮಂಗಳೂರಿನ ಹಾಸ್ಪಿಟಲ್ ಬಗ್ಗೆ ಮಾಹಿತಿ, ಆ್ಯಂಬುಲೆನ್ಸ್ ಸೇವೆ, ಲ್ಯಾಬ್, ಫುಡ್ ಡೆಲಿವರಿ ಸರ್ವಿಸ್, ವೈದ್ಯರೊಂದಿಗೆ ಸಮಾಲೋಚನೆ ಮೊದಲಾದವುಗಳನ್ನು ಒಂದೇ ಕಡೆ ಸಿಗುವಂತೆ ಮಾಡಲಾಗಿದೆ. ತಾಲೂಕುವಾರು ಮಾಹಿತಿಗಳನ್ನು ಇದರಲ್ಲಿ ಸೇರಿಸಲು ಯೋಜನೆ ರೂಪಿಸಲಾಗುತ್ತಿದೆ. ವಿದ್ಯಾರ್ಥಿಗಳು ಕೊರೊನಾಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ಒಂದೇ ಕಡೆ ಸಿಗುವಂತೆ ಮಾಡಿರುವ ಪ್ರಯತ್ನ ಶ್ಲಾಘನೀಯವಾಗಿದೆ.