ಬಂಟ್ವಾಳ (ದಕ್ಷಿಣಕನ್ನಡ): ಬಂಟ್ವಾಳದಲ್ಲಿ 101 ವರ್ಷದ ವೃದ್ಧೆಯೊಬ್ಬರು ಉತ್ಸಾಹದಿಂದ ಬಂದು ಕೋವಿಡ್ ವ್ಯಾಕ್ಸಿನ್ ಪಡೆದು ಗಮನ ಸೆಳೆದರು.
ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಪರಾರಿ ಮನೆಯ ಮೀನಾಕ್ಷಿ ಎಂಬವರು ಮಂಗಳವಾರ ಬಿ.ಸಿ.ರೋಡ್ನ ಕೈಕಂಬದಲ್ಲಿರುವ ನಗರ ಸಂಚಾರಿ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.
ಸೊಸೆ ಹೇಮಾವತಿ, ಮೊಮ್ಮಗ ಸುಧೀರ್.ಬಿ ಜೊತೆ ಆಗಮಿಸಿ ಲಸಿಕೆ ಪಡೆದಿದ್ದು, ವೇಳೆ ಸಾಮಾಜಿಕ ಕಾರ್ಯಕರ್ತ ಸದಾಶಿವ ಪ್ರಭು, ಆಸ್ಪತ್ರೆ ವೈದ್ಯಾಧಿಕಾರಿ ಡಾ.ಅಶ್ವಿನಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಕೋವಿಡ್ ಸೋಂಕಿತರಿಂದಲೇ ಕೊರೊನಾ ಜಾಗೃತಿ