ETV Bharat / city

ವಿಕಲಚೇತನರಿಂದ ಹಕ್ಕು ಚಲಾವಣೆ... ಜೇವರ್ಗಿ, ಅಂಕೋಲಾದಲ್ಲಿ ಮಾದರಿ ಮತದಾನ - Kalaburagi

ಎಲ್ಲವೂ ಸರಿ ಇದ್ದರೂ ಮತದಾನದಿಂದ ನುಣುಚಿಕೊಳ್ಳುವವರಿಗೆ ಈ ಇಬ್ಬರು ವಿಕಲಚೇತನರು ಮಾದರಿಯಾಗಿದ್ದಾರೆ. ತಮಗೆ ಸಮೀಪದ ಬೂತ್​ಗಳಲ್ಲಿ ಮತದಾನ ಮಾಡಿದ ಇಬ್ಬರು ವಿಕಲಚೇತನರು ತಮ್ಮ ಹಕ್ಕನ್ನು ಚಲಾಯಿಸಿ ಮತದಾನದಿಂದ ತಪ್ಪಿಸಿಕೊಳ್ಳುವವರು ನಾಚುವಂತೆ ಮಾಡಿದ್ದಾರೆ.

ವಿಕಲಾಂಗ ಚೇತನರಿಂದಲೂ ಹಕ್ಕು ಚಲಾವಣೆ
author img

By

Published : Apr 23, 2019, 7:58 PM IST

Updated : Apr 23, 2019, 8:45 PM IST

ಕಲಬುರಗಿ/ಕಾರವಾರ: ಜೇವರ್ಗಿ ಹಾಗೂ ಅಂಕೋಲಾದಲ್ಲಿ ಇಬ್ಬರು ವಿಕಲಚೇತನರು ಬಿರು ಬಿಸಿಲನ್ನೂ ಲೆಕ್ಕಿಸದೆ ತಮ್ಮ ಹಕ್ಕನ್ನು ಚಲಾಯಿಸಿ ಮಾದರಿಯಾಗಿದ್ದಾರೆ.

ಕೆಂಡದಂತಹ ಬಿಸಿಲನ್ನು ಲೆಕ್ಕಿಸದೆ ವಿಕಲಚೇತನ ಮಹಿಳೆಯೊಬ್ಬಳು ಮತ ಕೇಂದ್ರಕ್ಕೆ ಆಗಮಿಸಿ ಹಕ್ಕು ಚಲಾಯಿಸಿ ಮಾದರಿಯಾದ ಘಟನೆ ತಾಲೂಕಿನ ನರಿಬೋಳ ಗ್ರಾಮದಲ್ಲಿ ನಡೆದಿದೆ.

ಗರಿಷ್ಠ 40 ಡಿಗ್ರಿ ಬಿಸಿಲಿನ ತಾಪದಲ್ಲಿಯೂ ಯಾರ ಸಹಾಯವಿಲ್ಲದೆ, ತಮಗಿರುವ ಒಂದು ಕೈ, ಒಂದು ಕಾಲಿನ ಸಹಾಯದಿಂದ ಮತಗಟ್ಟೆಗೆ ಆಗಮಿಸಿದ ಮಹಿಳೆ, ನರಿಬೋಳ ಗ್ರಾಮದ ಬೂತ್​ ಸಂಖ್ಯೆ 4ರಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಹೀಗೆ ಮಾದರಿಯಾದ ಮಹಿಳೆ ನರಿಬೋಳ ಗ್ರಾಮದ ರಜೀಯಾಬಿ ಎಂದು ತಿಳಿದುಬಂದಿದೆ.

ವಿಕಲಾಂಗ ಚೇತನರಿಂದ ಹಕ್ಕು ಚಲಾವಣೆ

ಇನ್ನು ಮಹಿಳೆಗೆ ನೇರವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸುವ ಮೂಲಕ ಸರದಿ ಸಾಲಿನಲ್ಲಿ ನಿಂತಿದ್ದವರು ಮಾನವೀಯತೆ ಮೆರೆದರು.

ಇದೇ ರೀತಿ ಅಂಕೋಲಾ ತಾಲೂಕಿನ ಬೊಬ್ರವಾಡ ಬಂದರು ಮತಗಟ್ಟೆ ವ್ಯಾಪ್ತಿಯ ವಿಕಲಚೇತನ ಮತದಾರ ವಿಜಯ ಕುಮಾರ್ ನಾಯ್ಕ, ತಮ್ಮ ಹಕ್ಕು ಚಲಾಯಿಸಿದ್ದಾರೆ. ಎರಡು ಕಾಲಿನ ಸ್ವಾಧೀನ ಕಳೆದುಕೊಂಡು ಅಂಗವೈಕಲ್ಯಕ್ಕೆ ತುತ್ತಾಗಿರುವ ಅವರು ತಮ್ಮ‌ ಹಕ್ಕನ್ನು ಚಲಾಯಿಸುವುದಕ್ಕಾಗಿಯೇ ಮನೆಯಿಂದ‌ ತೆವಳಿಕೊಂಡು ಬಂದು ಮತದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.

Intro:ಕಲಬುರ್ಗಿ ಬ್ರೇಕಿಂಗ್....
ಕೆಂಡದಂತ ಬಿಸಿಲು ಲೆಕ್ಕಿಸದೆ ವಿಕಲಚೇತನ ಮಹಿಳೆಯೊಬ್ಬಳು ಮತ ಕೇಂದ್ರಕ್ಕೆ ಆಗಮಿಸಿ ಹಕ್ಕು ಚಲಾಯಿಸಿ ಮಾಧರಿಯಾದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ನಡೆದಿದೆ.

ಗರಿಷ್ಠ 40 ಡಿಗ್ರಿ ಬಿಸಿಲಿನ ತಾಪದಲ್ಲಿಯೂ ಯಾರ ಸಹಾಯವಿಲ್ಲದೆ ಅಸ್ತಿತ್ವದಲ್ಲಿರುವ ಒಂದು ಕೈ, ಒಂದು ಕಾಲು ಸಹಾಯದಿಂದ ಮತಗಟ್ಟೆಗೆ ಆಗಮಿಸಿದ ಮಹಿಳೆ ನರಿಬೋಳ ಗ್ರಾಮದ ಭೂತ ಸಂಖ್ಯೆ 4 ರಲ್ಲಿ ಮತದಾನ ಹಕ್ಕು ಚಲಾವಣೆ ಮಾಡಿದಳು.

ಹೀಗೆ ಮಾಧರಿಯಾದ ಮಹಿಳೆ ನರಿಬೋಳ ಗ್ರಾಮದ ರಜೀಯಾಬಿ ಎಂದು ತಿಳಿದುಬಂದಿದೆ. ಎಲ್ಲವು ಸರಿ ಇದ್ದರೂ ಮತದಾನದಿಂದ ನುನುಚಿಕೊಳ್ಳುವರಿಗೆ ಮಹಿಳೆ ರಜೀಯಾಬಿ ಮಾಧರಿಯಾಗಿದ್ದಾಳೆ. ಮಹಿಳೆಗೆ ನೇರವಾಗಿ ಮತಧಾನ ಮಾಡಲು ಅವಕಾಶ ಕಲ್ಪಿಸುವ ಮೂಲಕ ಸರದಿ ಸಾಲಿನಲ್ಲಿ ನಿಂತಿದ್ದವರು ಮಾನವಿಯತೆ ಮೆರೆದರು.Body:ಕಲಬುರ್ಗಿ ಬ್ರೇಕಿಂಗ್....
ಕೆಂಡದಂತ ಬಿಸಿಲು ಲೆಕ್ಕಿಸದೆ ವಿಕಲಚೇತನ ಮಹಿಳೆಯೊಬ್ಬಳು ಮತ ಕೇಂದ್ರಕ್ಕೆ ಆಗಮಿಸಿ ಹಕ್ಕು ಚಲಾಯಿಸಿ ಮಾಧರಿಯಾದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ನಡೆದಿದೆ.

ಗರಿಷ್ಠ 40 ಡಿಗ್ರಿ ಬಿಸಿಲಿನ ತಾಪದಲ್ಲಿಯೂ ಯಾರ ಸಹಾಯವಿಲ್ಲದೆ ಅಸ್ತಿತ್ವದಲ್ಲಿರುವ ಒಂದು ಕೈ, ಒಂದು ಕಾಲು ಸಹಾಯದಿಂದ ಮತಗಟ್ಟೆಗೆ ಆಗಮಿಸಿದ ಮಹಿಳೆ ನರಿಬೋಳ ಗ್ರಾಮದ ಭೂತ ಸಂಖ್ಯೆ 4 ರಲ್ಲಿ ಮತದಾನ ಹಕ್ಕು ಚಲಾವಣೆ ಮಾಡಿದಳು.

ಹೀಗೆ ಮಾಧರಿಯಾದ ಮಹಿಳೆ ನರಿಬೋಳ ಗ್ರಾಮದ ರಜೀಯಾಬಿ ಎಂದು ತಿಳಿದುಬಂದಿದೆ. ಎಲ್ಲವು ಸರಿ ಇದ್ದರೂ ಮತದಾನದಿಂದ ನುನುಚಿಕೊಳ್ಳುವರಿಗೆ ಮಹಿಳೆ ರಜೀಯಾಬಿ ಮಾಧರಿಯಾಗಿದ್ದಾಳೆ. ಮಹಿಳೆಗೆ ನೇರವಾಗಿ ಮತಧಾನ ಮಾಡಲು ಅವಕಾಶ ಕಲ್ಪಿಸುವ ಮೂಲಕ ಸರದಿ ಸಾಲಿನಲ್ಲಿ ನಿಂತಿದ್ದವರು ಮಾನವಿಯತೆ ಮೆರೆದರು.Conclusion:
Last Updated : Apr 23, 2019, 8:45 PM IST

For All Latest Updates

TAGGED:

Kalaburagi
ETV Bharat Logo

Copyright © 2025 Ushodaya Enterprises Pvt. Ltd., All Rights Reserved.