ಕಲಬುರಗಿ ಮತ್ತು ಕೊಪ್ಪಳ ಜಿಲ್ಲೆಗಳ ಇಂದಿನ ಕೊರೊನಾ ವರದಿಯ ಸಂಪೂರ್ಣ ಅಂಕಿ - ಅಂಶಗಳ ಮಾಹಿತಿ ಈ ಕೆಳ ಕಂಡಂತಿದೆ.
ಕಲಬುರಗಿ:
ಜಿಲ್ಲೆಯಲ್ಲಿ ಹೊಸದಾಗಿ 71 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಓರ್ವ ಮೃತಪಟ್ಟಿದ್ದಾನೆ. ಸೇಡಂ ತಾಲೂಕಿನ ಮಳಖೇಡದ 47 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿರುವುದು ಇಂದಿನ ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಇದರೊಂದಿಗೆ ಮೃತರ ಸಂಖ್ಯೆ 306ಕ್ಕೆ ಏರಿಕೆಯಾಗಿದೆ. ಇಂದಿನ 71 ಜನ ಸೋಂಕಿತರು ಸೇರಿ ಒಟ್ಟು ಸೋಂಕಿತರ ಸಂಖ್ಯೆ 19,419 ಹಾಗೂ 111 ಡಿಸ್ಚಾರ್ಜ್ ಸೇರಿ ಗುಣಮುಖರಾದವರ ಸಂಖ್ಯೆ 18,475ಕ್ಕೆ ಏರಿಕೆಯಾಗಿದೆ. 638 ಜನ ಆರೈಕೆಯಲ್ಲಿದ್ದಾರೆ.
ಕೊಪ್ಪಳ:
ಜಿಲ್ಲೆಯಲ್ಲಿ ಇಂದು 34 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 13,194 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಮಾಹಿತಿ ನೀಡಿದ್ದಾರೆ. ಗಂಗಾವತಿ-17, ಕೊಪ್ಪಳ-10, ಕುಷ್ಟಗಿ-02 ಹಾಗೂ ಯಲಬುರ್ಗಾ-05 ಪ್ರಕರಣ ಸೇರಿ ಇಂದು ಒಟ್ಟು 34 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 279 ಸೋಂಕಿತರು ಮೃತಪಟ್ಟಿದ್ದು, ಇಂದು 47 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 12,358 ಜನರು ಗುಣಮುಖರಾಗಿದ್ದಾರೆ. 499 ಜನ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲಾಗಿದೆ. ಇನ್ನುಳಿದ ಪ್ರಕರಣಗಳಿಗೆ ನಿಗದಿತ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.