ಕಲಬುರಗಿ: ಶಾಸಕ ಪ್ರಿಯಾಂಕ್ ಖರ್ಗೆಗೆ ಸ್ವಜಾತಿ ಸ್ವಾಭಿಮಾನ ಹೆಚ್ಚಾಗಿದೆ. ಹೀಗಾಗಿ ಮುಸ್ಲಿಂ ಯುವಕರಿಂದ ಕೊಲೆಯಾದ ಹರಿಜನ ಸಮುದಾಯದ ಯುವಕನ ಮನೆಗೆ ಭೇಟಿ ನೀಡಿದ್ದಾರೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ, ಆಂದೋಲ ಮಠದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.
ಕೊಲೆಯಾದ ವಿಜಯ ಕಾಂಬಳೆ ಮನೆಗೆ ಶಾಸಕ ಪ್ರಿಯಾಂಕ್ ಖರ್ಗೆ ಭೇಟಿ ನೀಡಿದ ವಿಚಾರದ ಕುರಿತು ಮಾತನಾಡಿದ ಸ್ವಾಮೀಜಿ, ಶಾಸಕರು ಮೃತ ಯುವಕ ಹರಿಜನ ಸಮುದಾಯದವನು ಎಂಬ ಕಾರಣಕ್ಕೆ ಅವರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಇದು ಸ್ವಾಗತಾರ್ಹ. ಆದರೆ, ಈ ಹಿಂದೆ ಅವರದೇ ಕ್ಷೇತ್ರದಲ್ಲಿ ಮುಸ್ಲಿಮರಿಂದಲೇ ಕೊಲೆಯಾದ ಇಬ್ಬರು ಬೇರೆ ಜಾತಿಯ ಯುವಕನ ಮನೆಗೆ ಸೌಜನ್ಯಕ್ಕೂ ಸಹ ಭೇಟಿ ನೀಡಿಲ್ಲ.
ಒಬ್ಬ ಶಾಸಕನಾದ ಮೇಲೆ ಎಲ್ಲರನ್ನೂ ಸಮಾನವಾಗಿ ಕಾಣಬೇಕಾಗಿರುವುದು ಅವರ ಕರ್ತವ್ಯ. ಆದರೆ ಶಾಸಕ ಪ್ರಿಯಾಂಕ್ ಖರ್ಗೆ ತಾರತಮ್ಯ ನೀತಿ ಅನುಸರಿಸಿದ್ದಾರೆ. ಇದನ್ನು ಕ್ಷೇತ್ರದ ಜನ ಗಮನಿಸಿ ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಇದನ್ನೂ ಓದಿ: ಮೈಕ್ ತೆರವು ವಿಚಾರ: ನಾಳೆ ಕಲಬುರಗಿಯಲ್ಲಿ ಹನುಮಾನ್ ಚಾಲೀಸ ಪಠಣ- ಸಿದ್ದಲಿಂಗ ಸ್ವಾಮೀಜಿ