ಕಲಬುರಗಿ: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಬಂಧಿತರಾಗಿರುವ ತಂದೆ - ಮಗ ಇಬ್ಬರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಪಿಎಸ್ಐ ಅಭ್ಯರ್ಥಿಯಾದ ಪ್ರಭು ಮತ್ತು ಆತನ ತಂದೆ ಶರಣಪ್ಪ ಎಂಬುವರು ಜಾಮೀನು ಮಂಜೂರಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿಯ 3ನೇ ಜೆಎಂಎಫ್ಸಿ ನ್ಯಾಯಾಲಯ ವಜಾ ಮಾಡಿದೆ. ಇದರಿಂದ ಅಪ್ಪ- ಮಗನಿಗೆ ಜೈಲೇ ಗತಿಯಾಗಿದೆ.
ಏನಿದು ಪ್ರಕರಣ: ಪಿಎಸ್ಐ ಅಭ್ಯರ್ಥಿಯಾಗಿದ್ದ ಪ್ರಭು ನಗರದ ಎಂಎಸ್ ಇರಾನಿ ಕಾಲೇಜ್ನ ಪರೀಕ್ಷಾ ಕೇಂದ್ರದಲ್ಲಿ ಬ್ಲೂ ಟೂತ್ ಬಳಸಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಈ ವೇಳೆ ಪ್ರಭು ಹಾಗೂ ಅಕ್ರಮಕ್ಕೆ ಸಹಕರಿಸಿದ ಆತನ ತಂದೆ ಶರಣಪ್ಪ ಮತ್ತು ಮಧ್ಯವರ್ತಿ ಚಂದ್ರಕಾಂತ್ ಕುಲಕರ್ಣಿ ವಿರುದ್ಧ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ತಂದೆ - ಮಗ ಇಬ್ಬರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ 3ನೇ ಜೆಎಂಎಫ್ಸಿ ನ್ಯಾಯಾಲಯ ಇಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ಓದಿ: ಹೆಂಡ್ತಿ ಮೇಲೆ ಮೃಗೀಯ ರೀತಿ ಹಲ್ಲೆ ನಡೆಸಿ, ಮುಖದ ಮೇಲೆ ಕಲ್ಲಿಂದ ಜಜ್ಜಿದ ಪಾಪಿ ಗಂಡ