ETV Bharat / city

ಸಿಐಡಿಯಿಂದ ದಿವ್ಯಾ ಹಾಗರಗಿ ತೀವ್ರ ವಿಚಾರಣೆ: ಅಕ್ರಮದಲ್ಲಿ ಪ್ರಭಾವಿಗಳ ಹೆಸರು ತಳುಕು? - ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ

ದಿವ್ಯಾ ಹಾಗರಗಿ ಸಂಪೂರ್ಣ ಸಹಕಾರದಿಂದಲೇ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಮಾಡಲಾಗಿದೆಯಂತೆ. ಇದರಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಪಾತ್ರ ಕೂಡ ಬಹುಮುಖ್ಯ‌ವಾಗಿದೆ ಎಂದು ಹೇಳಲಾಗ್ತಿದೆ.

Divya Hagargi inquiry by CID
ಸಿಐಡಿಯಿಂದ ದಿವ್ಯಾ ಹಾಗರಗಿ ತೀವ್ರ ವಿಚಾರಣೆ
author img

By

Published : May 1, 2022, 1:25 PM IST

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರನ್ನು ಸಿಐಡಿ ತಂಡ ಎರಡು ದಿನಗಳಿಂದ ತೀವ್ರ ವಿಚಾರಣೆ ನಡೆಸುತ್ತಿದೆ. ದಿವ್ಯಾ ಹಾಗರಗಿ ಅಕ್ರಮ ಕುರಿತಾಗಿ ಸ್ಫೋಟಕ ಮಾಹಿತಿ ನೀಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಇವರನ್ನು ಮಹಾರಾಷ್ಟ್ರದ ಪುಣೆಯಿಂದ ಬಂಧಿಸಿ ಶುಕ್ರವಾರ ಕಲಬುರಗಿಗೆ ಕರೆತಂದ ಸಿಐಡಿ ತಂಡ, ನ್ಯಾಯಾಲಯದ ಪ್ರಾಥಮಿಕ ಕಾರ್ಯವಿಧಾನ ಮುಗಿಸಿ ಶನಿವಾರದಿಂದ ವಿಚಾರಣೆ ನಡೆಸಲು ಪ್ರಾರಂಭಿಸಿದ್ದಾರೆ.

Divya Hagargi inquiry by CID
ಸಿಐಡಿಯಿಂದ ದಿವ್ಯಾ ಹಾಗರಗಿ ತೀವ್ರ ವಿಚಾರಣೆ

ಅಕ್ರಮದ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಹಾಗೂ ಮಂಜುನಾಥ ಮೇಳಕುಂದಿಯ ಜತೆ ಸೇರಿ ಒಎಂಆರ್ ಶೀಟ್​​ ತಿದ್ದುಪಡಿ, ಬ್ಲೂಟೂತ್ ಡಿವೈಸ್​​ ಬಳಸಿ ಉತ್ತರ ಹೇಳುತ್ತಿದ್ದರಂತೆ. ಇದಕ್ಕಾಗಿ ಪೂರ್ವ ಯೋಜನೆ ಮಾಡಿಕೊಂಡಿದ್ದರಂತೆ. ಅಲ್ಲದೇ ಅಕ್ರಮಕ್ಕಾಗಿ ಲಕ್ಷ ಲಕ್ಷ ಡೀಲ್ ಮಾಡುತ್ತಿದ್ದರು ಎಂಬ ವಿಚಾರ ಬಯಲಾಗಿದೆ.

Divya Hagargi
ದಿವ್ಯಾ ಹಾಗರಗಿ

ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗೆ ಪರೀಕ್ಷಾ ಕೇಂದ್ರ ಹಾಕಿಸಿಕೊಳ್ಳುವುದರಿಂದ ಹಿಡಿದು ಪರೀಕ್ಷೆ ಮುಗಿಯುವವರೆಗೆ ಶಾಲೆಯ ಒಡತಿ ದಿವ್ಯಾ ಪ್ರಮುಖ ಪಾತ್ರಧಾರಿಯಾಗಿ ಕಾರ್ಯನಿರ್ವಹಿಸಿದ್ದಾಳೆ. ದಿವ್ಯಾ ಹಾಗರಗಿ ಸಂಪೂರ್ಣ ಸಹಕಾರದಿಂದಲೇ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಮಾಡಲಾಗಿದೆ. ಇದರಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಕಾಶಿನಾಥ್ ಪಾತ್ರ ಕೂಡ ಬಹುಮುಖ್ಯ‌ವಾಗಿದೆ ಎಂದು ಹೇಳಲಾಗ್ತಿದೆ. ಇನ್ನು ಅಕ್ರಮದಲ್ಲಿ ಮತ್ತಷ್ಟು ಪ್ರಭಾವಿಗಳ ಹೆಸರು ತಳುಕು ಹಾಕಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಪರೀಕ್ಷಾಅಕ್ರಮ: ಪ್ರಕರಣದ ಕಿಂಗ್‌ಪಿನ್ 18 ದಿನಗಳ ಪಯಣ ಹೇಗಿತ್ತು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.