ETV Bharat / city

ಪಿಎಸ್ಐ ಅಕ್ರಮ ನೇಮಕಾತಿ ತನಿಕೆ ಚುರುಕು : ಕಲಬುರಗಿಯಲ್ಲಿ ಮೊಕ್ಕಾಂ ಹೂಡಿದ ಸಿಐಡಿ ಡಿಜಿ, ಎಸ್ಪಿ

ಆರೋಪಿ ಮಹಾಂತೇಶ್ ಪಾಟೀಲ್ ಜಬರ್ದಸ್ತ್ ದೌಲತ್ ತೋರಿದ್ದಾನೆ. ಕ್ಯಾಮೆರಾಗಳ ಮುಂದೆ ದೌಲತ್ ತೋರಿದ ಆರೋಪಿ ಮಹಾಂತೇಶ್ ಪಾಟೀಲ್, ಹಾಕ್ರಿ ಹಾಕ್ರಿ ಛೆಂದ ಹಾಕ್ರಿ ಟಿವಿಯಾಗ್‌ ನ್ಯೂಸ್, ರೊಕ್ಕ ಕೊಟ್ರು ಟಿವಿಯಾಗ್ ಅಡ್ವರ್ಟೈಸ್ ಬರಲ್ಲ, ಬರಲೀ ಛೆಂದ್‌ ಬರಲಿ ದಿನ ನ್ಯೂಸ್.. ಎಂದು ದರ್ಪದ ಮಾತು ಆಡಿದ್ದಾನೆ. ಇಂದು ವೈದ್ಯಕೀಯ ತಪಾಸಣೆ ನಡೆಸಿ ಸಿಐಡಿ ಕಚೇರಿಗೆ ಕರೆತರುವಾಗ ಮಹಾಂತೇಶ್ ಪಾಟೀಲ್ ಧಿಮಾಕಿನ ಮಾತು ಆಡಿದ್ದಾನೆ..

Pateel brothers in CID custody
ಸಿಐಡಿ ವಶದಲ್ಲಿರುವ ಪಾಟೀಲ್ ಬ್ರದರ್ಸ್
author img

By

Published : Apr 25, 2022, 2:24 PM IST

ಕಲಬುರಗಿ : ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಸಿಐಡಿ ಮತ್ತಷ್ಟು ತೀವ್ರಗೊಳಿಸಿದೆ. ಪ್ರಕರಣದ ಕಿಂಗ್‌ಪಿನ್ ಕಲಬುರಗಿ ಜಿಲ್ಲೆಯವರು ಎಂಬ ದಟ್ಟವಾದ ಶಂಕೆ ಹಿನ್ನೆಲೆ ಸಿಐಡಿ ಉನ್ನತ ಮಟ್ಟದ ಅಧಿಕಾರಿಗಳು ಇಲ್ಲಿಯೇ ಟಿಕಾಣಿ ಹೂಡಿ ತನಿಕೆ ಇನ್ನಷ್ಟು ಚುರುಕುಗೊಳಿಸಿದ್ದಾರೆ.

ಸಿಐಡಿ ವಶದಲ್ಲಿರುವ ಪಾಟೀಲ್ ಬ್ರದರ್ಸ್

ಸಿಐಡಿ ಡಿಜಿ ಪಿ.ಎಸ್.ಸಂದು ಮತ್ತು ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಕಲಬುರಗಿಗೆ ಬಂದು ಮೊಕ್ಕಾಂ ಹೂಡಿದ್ದಾರೆ. ಸ್ವತಃ ತನಿಖೆಯ ಉಸ್ತುವಾರಿಯನ್ನು ಸಿಐಡಿ ಡಿಜಿ ನೋಡಿಕೊಳ್ಳುತ್ತಿದ್ದಾರೆ. ಕಲಬುರಗಿಯ ಸಿಐಡಿ ಕಚೇರಿಗೆ ಆಗಮಿಸಿದ ಎಸ್ಪಿ ತನಿಖೆಯ ಪ್ರಗತಿ ಪರಿಶೀಲನೆ ಮಾಡುತ್ತಿದ್ದಾರೆ.

ಪಾಟೀಲ್ ಬ್ರದರ್ಸ್‌ ದರ್ಪ : ಇನ್ನೊಂದೆಡೆ ಪ್ರಕರಣದ ಕಿಂಗ್‌ಪಿನ್ ಎ‌ನ್ನಲಾದ ಪಾಟೀಲ್ ಬ್ರದರ್ಸ್ ಸಿಐಡಿ ವಶದಲ್ಲಿದ್ದರೂ ದರ್ಪ ಕಡಿಮೆ ಆಗ್ತಿಲ್ಲ. ಒಂದೆಡೆ ಆರ್.ಡಿ. ಪಾಟೀಲ್ ಕ್ಯಾಮೆರಾಗಳಿಗೆ ಬೊಟ್ಟು ತೋರಿಸಿ ಫ್ರೀ ಪ್ರಚಾರ ಮಾಡ್ತಿದ್ದೀರಿ ಮಾಡಿ ಎಂದು ಹೇಳುತ್ತಾನೆ. ಸಿಐಡಿ ವಶದಲ್ಲಿರುವ ಕಾರಣ ರಾತ್ರಿ ಎಂ.ಬಿ.ನಗರ ಠಾಣೆಯ ಕಂಬಿ ಹಿಂದೆ ಇಟ್ಟರೆ ಅಲ್ಲಿಯೂ ಕಾಲ ಮೇಲೆ ಕಾಲು ಹಾಕಿ ಕುಳಿತು ದರ್ಪ ತೋರಿದ್ದಾನೆ. ಲಾಕಪ್‌ನಲ್ಲಿ ಆರ್.ಡಿ.ಪಾಟೀಲ್​ಗೆ ವಿಶೇಷ ಆತಿಥ್ಯ ಸಿಗುತ್ತಿದೆಯಾ ಎಂಬ ಅನುಮಾನವೂ ಕೂಡ ಕಾಡುತ್ತಿವೆ.

ಇದಕ್ಕೆ ಪೂರಕವಾಗಿ ಲಾಕಪ್‌ನಲ್ಲಿಯೂ ಕುಳಿತುಕೊಳ್ಳಲು ಖುರ್ಚಿ ಕೊಟ್ಟಿರುವ ಫೋಟೋ ವೈರಲ್ ಆಗಿವೆ. ಮತ್ತೊಂದೆಡೆ ಆರೋಪಿ ಮಹಾಂತೇಶ್ ಪಾಟೀಲ್ ಜಬರ್ದಸ್ತ್ ದೌಲತ್ ತೋರಿದ್ದಾನೆ. ಕ್ಯಾಮೆರಾಗಳ ಮುಂದೆ ದೌಲತ್ ತೋರಿದ ಆರೋಪಿ ಮಹಾಂತೇಶ್ ಪಾಟೀಲ್, ಹಾಕ್ರಿ ಹಾಕ್ರಿ ಛೆಂದ ಹಾಕ್ರಿ ಟಿವಿಯಾಗ್‌ ನ್ಯೂಸ್, ರೊಕ್ಕ ಕೊಟ್ರು ಟಿವಿಯಾಗ್ ಅಡ್ವರ್ಟೈಸ್ ಬರಲ್ಲ, ಬರಲೀ ಛೆಂದ್‌ ಬರಲಿ ದಿನ ನ್ಯೂಸ್.. ಎಂದು ದರ್ಪದ ಮಾತು ಆಡಿದ್ದಾನೆ. ಇಂದು ವೈದ್ಯಕೀಯ ತಪಾಸಣೆ ನಡೆಸಿ ಸಿಐಡಿ ಕಚೇರಿಗೆ ಕರೆತರುವಾಗ ಮಹಾಂತೇಶ್ ಪಾಟೀಲ್ ಧಿಮಾಕಿನ ಮಾತು ಆಡಿದ್ದಾನೆ.

ಸಿಐಡಿ ಖೆಡ್ಡಾಗೆ ಬಿದ್ರೂ ದರ್ಪ, ಘಮಂಡ್ ಇಳಿಯುತ್ತಿಲ್ಲ. ನೂರಾರು ಜನ ಅಭ್ಯರ್ಥಿಗಳು, ಪೋಷಕರು ಹಿಡಿ ಶಾಪ ಹಾಕಿದ್ರೂ ಬ್ರದರ್ಸ್‌ಗಳಿಗೆ ಪಾಪ ಪ್ರಜ್ಞೆ ಕಾಡುತ್ತಿಲ್ವಾ ಅನ್ನೋ ಪ್ರಶ್ನೆ ಸಾರ್ವಜನಿಕರನ್ನ ಕಾಡ್ತಿದೆ‌.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ : ಕೋವಿಡ್​​ನಿಂದ ಮೃತಪಟ್ಟ ವ್ಯಕ್ತಿಯ ಮೊಬೈಲ್ ಬಳಸಿ ಅಕ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.