ಕಲಬುರಗಿ: ಎನ್ಇಪಿ ಮತ್ತು ಆನ್ಲೈನ್ ಶಿಕ್ಷಣ ನೀತಿ ವಿರೋಧಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ವಾಡಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೊರೊನಾ ಸಮಯವನ್ನು ಬಳಸಿಕೊಂಡು ಸರ್ಕಾರ ಜನ ವಿರೋಧಿ ಎನ್ಇಪಿ ಕಾಯ್ದೆ ಹಾಗೂ ಆನ್ಲೈನ್ ಶಿಕ್ಷಣ ಬೋಧನೆ ಹಾಗೂ ಪರೀಕ್ಷೆಯ ನೀತಿ ಜಾರಿಗೆ ಮುಂದಾಗಿರುವುದು ಖಂಡನಾರ್ಹ ಸಂಗತಿ ಎಂದು ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಸಂಚಾಲಯ ವೀರಭದ್ರಪ್ಪ ಆರ್.ಕೆ.ಆಕ್ರೋಶ ವ್ಯಕ್ತಪಡಿಸಿದರು.
ಆನ್ಲೈನ್ ಶಿಕ್ಷಣದಿಂದ ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ಹಿಂದೆ ಉಳಿಯುತ್ತಾರೆ ಹಾಗೂ ಅನೇಕ ಶಿಕ್ಷಕರು ಉದ್ಯೋಗದಿಂದ ವಂಚಿತರಾಗಲಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಈ ಯೋಜನೆಯನ್ನು ಕೈ ಬಿಡುವಂತೆ ಕಾರ್ಯಕರ್ತರು ಆಗ್ರಹಿಸಿದರು.