ETV Bharat / city

ಬೆಂಗಳೂರಿನವರೆಗೆ ತನಿಖೆ ನಡೆದರೆ ಪಿಎಸ್​ಐ ಅಕ್ರಮದಲ್ಲಿ ಬಿಜೆಪಿ ಪಾಲು ಬಯಲಿಗೆ ಬರಲಿದೆ: ಪ್ರಿಯಾಂಕ್ ಖರ್ಗೆ - ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಹೇಳಿಕೆ

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಕಲಬುರಗಿ ಜಿಲ್ಲೆ ಜೊತೆಗೆ ಬೆಂಗಳೂರುವರೆಗೆ ಸಿಐಡಿ ತನಿಖೆ ನಡೆಸಿದರೆ ವಿಧಾನಸೌಧದಲ್ಲಿ ಯಾವೆಲ್ಲಾ ಸಚಿವರಿಗೆ ಪಾಲು ಹೋಗಿದೆ ಎಂಬುದು ಬಯಲಿಗೆ ಬರಲಿದೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

priyank Kharge on Psi scam
ಬೆಂಗಳೂರಿನವರೆಗೆ ತನಿಖೆ ನಡೆದರೆ ಪಿಎಸ್​ಐ ಅಕ್ರಮದಲ್ಲಿ ಬಿಜೆಪಿ ಪಾಲು ಬಯಲಿಗೆ ಬರಲಿದೆ: ಪ್ರಿಯಾಂಕ್ ಖರ್ಗೆ
author img

By

Published : Apr 28, 2022, 2:33 PM IST

Updated : Apr 28, 2022, 2:47 PM IST

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ್ ಖರ್ಗೆ ಸರ್ಕಾರದ ವಿರುದ್ಧ ಮತ್ತೆ ಚಾಟಿ ಬಿಸಿದ್ದಾರೆ. ಕಲಬುರಗಿ ಜಿಲ್ಲೆ ಜೊತೆಗೆ ಬೆಂಗಳೂರುವರೆಗೆ ಸಿಐಡಿ ತನಿಖೆ ನಡೆಸಿದರೆ ವಿಧಾನಸೌಧದಲ್ಲಿ ಯಾವೆಲ್ಲಾ ಸಚಿವರಿಗೆ ಪಾಲು ಹೋಗಿದೆ ಎಂಬುದು ಬಯಲಿಗೆ ಬರಲಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಿಐಡಿ ಅಧಿಕಾರಗಳು ನನಗೆ ಎರಡನೇ ನೋಟಿಸ್ ಜಾರಿ ಮಾಡಿದ್ದಾರೆ. ಸೆಕ್ಷನ್ 91 ಪ್ರಕಾರ ನನಗೆ ಕರೆದಿದ್ದಾರೆ. ಆದರೆ, ನಾನು ಖುದ್ದಾಗಿ ಹಾಜರಾಗಬೇಕು ಅಂತಾ ಆ ಸೆಕ್ಷನ್ ಹೇಳುವುದಿಲ್ಲ. ಬಿಜೆಪಿಯವರಿಗೆ ಕಾನೂನು ಅರಿವು ಕಡಿಮೆ ಇದೆ. ಫೆಬ್ರವರಿಯಲ್ಲಿ ಪ್ರಭು ಚವ್ಹಾಣ್​​ ಸರ್ಕಾರಕ್ಕೆ ಇದೆ ವಿಷಯವಾಗಿ ಪತ್ರ ಬರೆದಿದ್ದರು. ಬಿಜೆಪಿ ಎಂಎಲ್​ಸಿ ಸಂಕನೂರ್ ಲಿಖಿತ ರೂಪದಲ್ಲೇ ಸರ್ಕಾರದ ಗಮನಕ್ಕೆ ತಂದಿದ್ದರು. ಅವರಿಬ್ಬರಿಗೆ ಯಾಕೆ ನೋಟಿಸ್ ಕೊಟ್ಟು ಕರೆಯಿಸಿಲ್ಲ? ಬಿಜೆಪಿಯವರಿಗೆ ಒಂದು ಕಾನೂನು ಕಾಂಗ್ರೆಸ್​​ನವರಿಗೆ ಒಂದು ಕಾನೂನು ಇದೆಯಾ?, ಯಾವುದೋ ಸೆಕ್ಷನ್ ಹಾಕಿ ನನ್ನನ್ನು ಹೆದರಿಸಲು ಆಗಲ್ಲ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಪ್ರಿಯಾಂಕ್ ಖರ್ಗೆ

'ದಿವ್ಯಾ ಹಿಂದೆ ಅದ್ಯಾವ ದಿವ್ಯ ಶಕ್ತಿ ಇದೆ': ಸಿಐಡಿ ನೋಟಿಸ್​ಗೆ ಏನು ಉತ್ತರ ನೀಡಬೇಕೋ, ಅದನ್ನೇ ಉತ್ತರಿಸಿದ್ದೇನೆ ಎಂದ ಅವರು ಅಕ್ರಮ‌ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಯಾಕೆ ಇದುವರೆಗೆ ಅರೆಸ್ಟ್ ಆಗಿಲ್ಲ?. ದಿವ್ಯಾ ಹಾಗರಗಿಯ ಹಿಂದೆ ಯಾವ ದಿವ್ಯ ಶಕ್ತಿ ಇದೆ ಅಂತ ಸರ್ಕಾರಕ್ಕೆ ಟಾಂಗ್ ನೀಡಿದ ಪ್ರಿಯಾಂಕ್ ಖರ್ಗೆ, ಅಕ್ರಮದಲ್ಲಿ ಬಿಜೆಪಿಯ ನಾಯಕರಿಗೂ ಪಾಲು ಹೋಗಿದೆ. ಸಿಐಡಿ ಅವರು ಕಲಬುರಗಿ ಸುತ್ತಮುತ್ತಲಲ್ಲೇ ಇದ್ದಾರೆ. ಬೆಂಗಳೂರಿನವರೆಗೆ ತನಿಖೆ ನಡೆಸಿದರೆ ವಿಧಾನಸೌಧದಲ್ಲಿರುವ ಯಾವ ಸಚಿವರುಗಳಿಗೆ ಮತ್ತು ಶಾಸಕರಿಗೆ ಎಷ್ಟು ದುಡ್ಡು ಹೋಗಿದೆ ಎಂಬುದು ಗೊತ್ತಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಪಿಎಸ್ಐ ಪರೀಕ್ಷೆ ಅಕ್ರಮ: ಸಿಐಡಿ ಕೈಗೆ ಸಿಗದ ದಿವ್ಯಾ, ಆರ್​ಟಿಐ ಕಾರ್ಯಕರ್ತ, ಪತ್ರಕರ್ತನ ಹೆಸರೂ ತಳಕು!

Last Updated : Apr 28, 2022, 2:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.