ETV Bharat / city

ಕಲಬುರಗಿ: ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಕಾನ್ಸ್​​ಟೇಬಲ್‌ ಶವ ಪತ್ತೆ!

ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪೊಲೀಸ್ ಕಾನ್ಸ್​​ಟೇಬಲ್‌ ಒಬ್ಬರ ಮೃತದೇಹ ಪತ್ತೆಯಾಗಿದೆ. ಕಲಬುರಗಿ ತಾಲೂಕಿನ ಸಾವಳಗಿ ಬಳಿ ಈ ಘಟನೆ ನಡೆದಿದೆ.

Police constable dead body found
ಶ್ರೀನಾಥ್ ಮೃತ ಕಾನ್ಸ್​​ಟೇಬಲ್
author img

By

Published : Nov 27, 2021, 11:42 AM IST

ಕಲಬುರಗಿ: ಮದುವೆಗೆ 4 ದಿನ ಬಾಕಿ ಇರುವಾಗಲೇ ಪೊಲೀಸ್ ಕಾನ್ಸ್​​ಟೇಬಲ್‌ ಓರ್ವರು ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವ ಘಟನೆ ಕಲಬುರಗಿ ತಾಲೂಕಿನ ಸಾವಳಗಿ ಬಳಿ ನಡೆದಿದೆ.

Kalaburagi
ವಿವಾಹ ಆಮಂತ್ರಣ ಪತ್ರಿಕೆ

ಶ್ರೀನಾಥ್ (25) ಮೃತ ಕಾನ್ಸ್​​ಟೇಬಲ್. ಇದೇ ಡಿಸೆಂಬರ್ 1ರಂದು ಇವರ ವಿವಾಹ ನಿಶ್ಚಯವಾಗಿತ್ತು. ಅಫಜಲಪುರ ತಾಲೂಕಿನ ಮದರಾ ಕೆ ಗ್ರಾಮದ ನಿವಾಸಿಯಾಗಿದ್ದ ಶ್ರೀನಾಥ್​​ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಾನ್ಸ್​​ಟೇಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಬೆಳ್ಳಗೆ ರೈಲು ಹಳಿ ಮೇಲೆ ಅವರ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಅಥವಾ ಕೊಲೆಯೇ? ಎಂಬ ನಿಖರ ಮಾಹಿತಿ ತಿಳಿದು ಬಂದಿಲ್ಲ.

ಮದುವೆಗೆ ನಾಲ್ಕು ದಿನ ಬಾಕಿ ಇರುವಾಗಲೇ ಶ್ರೀನಾಥ್​​ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ತನಿಖೆ ಆರಂಭಗೊಂಡಿದ್ದು, ತನಿಖೆ ನಂತರವಷ್ಟೇ ಕೊಲೆ ಅಥವಾ ಆತ್ಮಹತ್ಯೆಯೇ? ಎಂಬುವುದು ತಿಳಿದು ಬರಬೇಕಿದೆ. ಈ ಸಂಬಂಧ ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನೀವು ಧೂಮಪಾನ ವ್ಯಸನಿಗಳೇ?.. ಈ ಆಯುರ್ವೇದ ಸಿಗರೇಟ್​ ಸೇದಿ, ಆರೋಗ್ಯವಾಗಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.