ETV Bharat / city

ಕಲಬುರಗಿಯಲ್ಲಿ ಒಮಿಕ್ರಾನ್ ಭೀತಿ: ಸೋಂಕಿತನ ಜಿನೋಮಿಕ್ ರಿಪೋರ್ಟ್​ನತ್ತ ಎಲ್ಲರ ಚಿತ್ತ

author img

By

Published : Dec 9, 2021, 1:16 PM IST

ಕಲಬುರಗಿಯಲ್ಲಿ ಒಮಿಕ್ರಾನ್ ಭೀತಿ ಕಾಡುತ್ತಿದ್ದು, ನವೆಂಬರ್ 24ರಂದು ಸೌದಿಯಿಂದ ಬಂದಿದ್ದ ಕೊರೊನಾ ಸೋಂಕಿತನ ಗಂಟಲು ದ್ರವದ ಸ್ಯಾಂಪಲ್ಸ್ ಜಿನೋಮಿಕ್ ಪರೀಕ್ಷೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ.

Omicron virus fear in Kalaburagi
ಕಲಬುರಗಿಯಲ್ಲಿ ಒಮಿಕ್ರಾನ್ ಭೀತಿ

ಕಲಬುರಗಿ: ಡೆಡ್ಲಿ ಕೊರೊನಾ ಓಡಿಸಿ ಬೆಚ್ಚಗೆ ಮಲಗಿದ್ದ ಕಲಬುರಗಿ ಮಂದಿಗೆ ಇದೀಗ ಮತ್ತೊಂದು ಕಂಟಕ ಎದುರಾಗುತ್ತೇನೋ ಅನ್ನೋ ಆತಂಕ ಶುರುವಾಗಿದೆ. ಬೆಂಗಳೂರಿಗೆ ಒಂದು ಸ್ಯಾಂಪಲ್ ಕಳುಹಿಸಲಾಗಿದ್ದು, ಜಿಲ್ಲಾಡಳಿತಕ್ಕೂ ಆತಂಕ ಶುರುವಾಗಿದೆ.

ದೇಶದಲ್ಲಿಯೇ ಕೊರೊನಾಗೆ ಬಲಿಯಾದ ಮೊದಲ ಜಿಲ್ಲೆ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ತೊಗರಿಯ ‌ಕಣಜ ಕಲಬುರಗಿಯಲ್ಲಿ ಕೊರೊನಾ ಭಯವಿಲ್ಲ. ಅಷ್ಟೇ ಅಲ್ಲದೇ ಕೊರೊನಾದ ಹೊಸ ಪ್ರಕರಣಗಳು ಸಹ ಹೆಚ್ಚಿಗೇನಿಲ್ಲ. ಆದರೆ ಆಫ್ರಿಕನ್ ಮೂಲದ ಒಮಿಕ್ರಾನ್ ಅನ್ನೋ ಹೊಸ ತಳಿ ವಕ್ಕರಿಸುತ್ತಾ ಅನ್ನೋ ಚಿಂತೆ ಎಲ್ಲರಲ್ಲೂ ಶುರುವಾಗಿದೆ. ಆತನ ಟ್ರಾವೆಲ್ ಹಿಸ್ಟರಿ ಸಾಕಷ್ಟು ಭಯ ಮೂಡಿಸಿದೆ.

ಕಲಬುರಗಿಯಲ್ಲಿ ಒಮಿಕ್ರಾನ್ ಭೀತಿ

ಸೌದಿ ಅರೇಬಿಯಾದಿಂದ ನವೆಂಬರ್ 24ರಂದು ಊರಿಗೆ ವಾಪಸಾಗಿರೋ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಒಮಿಕ್ರಾನ್ ಪತ್ತೆಗಾಗಿ ಆತನ ಗಂಟಲು ದ್ರವದ ಸ್ಯಾಂಪಲ್​ಗಳನ್ನು ಬೆಂಗಳೂರಿನ ನಿಮ್ಹಾನ್ಸ್​​ಗೆ ಕಳುಹಿಸಲಾಗಿದೆ. ಇನ್ನೂ ಎರಡ್ಮೂರು ದಿನಗಳಲ್ಲಿ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದ್ದಾರೆ.

ಹೀಗಾಗಿ, ಸರ್ಕಾರ ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಬೇಕಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಇದೇ ಮಾತಿಗೆ ಕಲಬುರಗಿಯಲ್ಲಿ ಉತ್ತರಿಸಿದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮೊದಲ ಮತ್ತು ಎರಡನೇ ಅಲೆಯಲ್ಲಿ ಸರ್ಕಾರ ಎಡವಿದೆ. ಹೀಗಾಗಿ ಮೂರನೇ ಅಲೆ ಎದುರಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಕಲಬುರಗಿಯಲ್ಲಿಯೇ ಹೊಸ ತಳಿಯ ಒಂದು ಟೆಸ್ಟಿಂಗ್ ಲ್ಯಾಬ್ ಸ್ಥಾಪಿಸಿ ಅಂತ ಒತ್ತಾಯ ಮಾಡಿದ್ದೇನೆ ಎಂದು ಸ್ಪಷ್ಟಎ ನೀಡಿದ್ದಾರೆ.

ಸದ್ಯ ಜಿಲ್ಲಾಡಳಿತದ ಚಿತ್ತ ಆ ವ್ಯಕ್ತಿಯ ಒಮಿಕ್ರಾನ್ ಟೆಸ್ಟ್ ರಿಪೋರ್ಟ್‌ನತ್ತ ನೆಟ್ಟಿದೆ. ಸದ್ಯ ಖುಷಿಯ ಸಂಗತಿ ಎಂದರೆ ವಿದೇಶದಿಂದ ಬಂದ ಆ ವ್ಯಕ್ತಿಯ ಪ್ರೈಮರಿ ಕಾಂಟ್ಯಾಕ್ಟ್​​ನಲ್ಲಿದ್ದ 10 ಜನರ ಕೊರೊನಾ ವರದಿ ನೆಗೆಟಿವ್ ಬಂದಿದೆ.

ಇದನ್ನೂ ಓದಿ: BJP ನೂತನ ಕಾರ್ಪೊರೇಟರ್‌ಗೆ ಪ್ರತಿಜ್ಞಾವಿಧಿ ಸ್ವೀಕರಿಸದಂತೆ ನ್ಯಾಯಾಲಯ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.