ETV Bharat / city

ಇನ್ಮುಂದೆ ಬಸ್ ಪ್ರಯಾಣದ ವೇಳೆ ಮೊಬೈಲ್‌ನಿಂದ ಜೋರಾದ ಶಬ್ದ ಬರುವಂತಿಲ್ಲ - ಯಾಣದ ವೇಳೆ ಮೊಬೈಲ್​​ಗಳಿಂದ ಪ್ರಯಾಣಿಕರಿಗೆ ಕಿರಿಕಿರಿ

ಪ್ರಯಾಣದ ವೇಳೆ ಮೊಬೈಲ್​​ಗಳಿಂದ ಪ್ರಯಾಣಿಕರಿಗೆ ಆಗುವ ಕಿರಿಕಿರಿ ತಪ್ಪಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮುಂದಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Nov 10, 2021, 7:04 PM IST

ಕಲಬುರಗಿ: ಪ್ರಯಾಣಿಕರಿಗೆ ಗುಣಮಟ್ಟದ ಸಾರಿಗೆ ಸೌಲಭ್ಯ ಒದಗಿಸಲು ಹಲವು ಕ್ರಮಗಳನ್ನು ಕೈಗೊಂಡಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (Kalyana Karnataka Road Transport Corporation) ಇದೀಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ.

ಪ್ರಯಾಣದ ವೇಳೆ ಮೊಬೈಲ್​​ಗಳಿಂದ ಪ್ರಯಾಣಿಕರಿಗೆ ಆಗುವ ಕಿರಿಕಿರಿ ತಪ್ಪಿಸಲು ಸಂಸ್ಥೆ ಮುಂದಾಗಿದೆ.

ಸುತ್ತೋಲೆ
ಸುತ್ತೋಲೆ

ಕರ್ನಾಟಕ ಮೋಟಾರು ವಾಹನಗಳ 1989ರ ನಿಯಮ (Karnataka Motor Vehicle Act) 94 (l) (V) ರ ಅನುಸಾರ ನಿಗಮದ ಬಸ್‌ಗಳಲ್ಲಿ ಪ್ರಯಾಣಿಕರು ಮೊಬೈಲ್ ದೂರವಾಣಿ ಮೂಲಕ ಜೋರಾಗಿ ಶಬ್ದದೊಂದಿಗೆ ಹಾಡು/ಪದ್ಯ/ವಾರ್ತೆ/ಸಿನಿಮಾ ಇತ್ಯಾದಿ ಕೇಳುವಾಗ ಶಬ್ದ ಹೊರಸೂಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಬಸ್ ಪ್ರಯಾಣದ ವೇಳೆ ಮೊಬೈಲ್​​ಗಳಲ್ಲಿ ಜೋರಾಗಿ ಸದ್ದು ಮಾಡುತ್ತಾ ಪಕ್ಕದವರಿಗೆ ತೊಂದರೆ ಕೊಡುವಂತಿಲ್ಲ. ಹಾಗೆ ಮಾಡಿದರೆ ಬಸ್‌ನಿಂದ ಕೆಳಗಿಳಿಸಲಾಗುತ್ತದೆ. ಟಿಕೆಟ್ ಹಣ ಕೂಡಾ ಹಿಂದಿರುಗಿಸುವುದಿಲ್ಲ ಎಂದು ಸಾರಿಗೆ ನಿಗಮ ಸುತ್ತೋಲೆಯಲ್ಲಿ ಎಚ್ಚರಿಸಿದೆ.

ಬಸ್ ಪ್ರಯಾಣದ ವೇಳೆ ಮೊಬೈಲ್​​ನಿಂದ ಜೋರಾಗಿ ಶಬ್ದ ಹೊರಸೂಸುವ ಮೂಲಕ ಸಹಪ್ರಯಾಣಿಕರಿಗೆ ತೊಂದರೆಯಾಗುವಂತೆ ನಡೆದುಕೊಂಡು ಕರ್ನಾಟಕ ಮೋಟಾರು ವಾಹನಗಳ ನಿಯಮ ಉಲ್ಲಂಘನೆ ಮಾಡುವವರಿಗೆ ಮೊದಲು ಚಾಲಕ-ನಿರ್ವಾಹಕರು ತಿಳಿಹೇಳಬೇಕು. ವಿನಂತಿಗೂ ಮನ್ನಣೆ ಕೊಡದಿದ್ದರೆ ಅಂತವರನ್ನು ಬಸ್ಸಿನಿಂದ ಕೆಳಗಿಳಿಸಲಾಗುವುದು. ಬಸ್ಸಿನಿಂದ ಕೆಳಗೆ ಇಳಿಯುವವರೆಗೆ ಬಸ್ ಮುಂದೆ ಹೋಗುವಂತಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

ಈ ಮುಂಚೆಯೂ ನಿಯಮವಿತ್ತು. ತೊಂದರೆಗೆ ಒಳಗಾದವರು ದೂರು ನೀಡಿದರೆ ಮಾತ್ರ ಕ್ರಮ ಕೈಗೊಳ್ಳಲಾಗುತ್ತಿತ್ತು. ಆದ್ರೆ ದೂರು ನೀಡುವ ಹಂತದವರೆಗೆ ಪ್ರಯಾಣಿಕರು ಮುಂದಾಗುತ್ತಿರಲಿಲ್ಲ. ತೊಂದರೆಯಲ್ಲಿಯೇ ಪ್ರಯಾಣ ಬೆಳೆಸುತ್ತಿದ್ದರು. ಹೀಗಾಗಿ ತೊಂದರೆ ತಪ್ಪಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸ ಸುತ್ತೋಲೆ ಹೊರಡಿಸಿದೆ. ನಿನ್ನೆ (ಮಂಗಳವಾರ) ಯಿಂದಲೇ ನೂತನ ನಿಯಮ ಜಾರಿಗೆ ಬಂದಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು 'ಈಟಿವಿ ಭಾರತ'ದ ಮೂಲಕ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.