ETV Bharat / city

ನವಜಾತ ಹೆಣ್ಣು ಮಗುವನ್ನು ಕೈಚೀಲದಲ್ಲಿ ತುಂಬಿ ರಸ್ತೆ ಬದಿ ಬಿಟ್ಟು ಹೋದ ಹೆತ್ತಮ್ಮ! - Newborn baby found in brief bag near Kalaburagi

ನವಜಾತ ಹೆಣ್ಣು ಮಗುವನ್ನು ಹೊಟ್ಟೆ ಹುರಿ ಕೂಡಾ ಕಟ್ ಮಾಡದೇ ಮಾಂಸದ ಮುದ್ದೆಯಂತೆ ಕೈ ಚೀಲದಲ್ಲಿ ತುಂಬಿ ರಟಕಲ್ ಗ್ರಾಮದ ಬಳಿಯ ಹಳ್ಳದ ಪಕ್ಕದಲ್ಲಿ ಹೆತ್ತವರು ಬಿಟ್ಟುಹೋಗಿದ್ದಾರೆ. ಕಣ್ಣು ಬಿಡುವ ಮುನ್ನವೇ ಹೆತ್ತಮ್ಮನಿಗೆ ಬೇಡವಾಗಿ ಅನಾಥವಾಗಿರುವ ಮಗುವನ್ನು ಕಂಡು ಗ್ರಾಮಸ್ಥರು ಮರುಗಿದ್ದಾರೆ.

Newborn baby
ನವಜಾತ ಹೆಣ್ಣುಮಗು
author img

By

Published : Aug 22, 2020, 10:54 AM IST

ಕಲಬುರಗಿ: ನವಜಾತ ಹೆಣ್ಣು ಶಿಶುವನ್ನು ಕೈ ಚೀಲದಲ್ಲಿ ಹಾಕಿ ರಸ್ತೆ ಬದಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದಲ್ಲಿ ನಡೆದಿದೆ. ಸದ್ಯ ಈ ಪುಟ್ಟ ಪಾಪುವನ್ನು ಇಲ್ಲಿನ ಯುವಕರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನವಜಾತ ಹೆಣ್ಣು ಮಗುವನ್ನು ಹೊಟ್ಟೆ ಹುರಿ ಕೂಡಾ ಕಟ್ ಮಾಡದೇ ಮೌಂಸದ ಮುದ್ದೆಯಂತೆ ಕೈ ಚೀಲದಲ್ಲಿ ತುಂಬಿ ರಟಕಲ್ ಗ್ರಾಮದ ಬಳಿಯ ಹಳ್ಳದ ಪಕ್ಕದಲ್ಲಿ ಪಾಪಿಗಳು ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಹಾಲು ತರಲು ಎಂದು ಹೊರಟ್ಟಿದ್ದ ಗ್ರಾಮದ ಯುವಕರು ಕೈಚೀಲವನ್ನು ಗಮನಿಸಿ ಪರೀಕ್ಷಿಸಿದಾಗ ಮಗು ಇರುವುದು ಗೊತ್ತಾಗಿದೆ.

ನವಜಾತ ಹೆಣ್ಣುಮಗು

ತಡಮಾಡದೇ ಮಗುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಅಗತ್ಯ ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ. ಎರಡು ಕೆಜಿ ತೂಕದ ಶಿಶು ಸದ್ಯ ಆರೋಗ್ಯವಾಗಿದೆ. ಸ್ಥಳೀಯ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ತಂಡಕ್ಕೆ ಯುವಕರು ಮಾಹಿತಿ ನೀಡಿದ್ದು, ಮಗುವನ್ನು ಅವರ ಸುಪರ್ದಿಗೆ ಒಪ್ಪಿಸಿದ್ದಾರೆ.

ಕಣ್ಣು ಬಿಡುವ ಮುನ್ನವೇ ಹೆತ್ತಮ್ಮನಿಗೆ ಬೇಡವಾಗಿ ಅನಾಥವಾಗಿರುವ ಮಗುವನ್ನು ಕಂಡು ಗ್ರಾಮಸ್ಥರು ಮರುಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.