ಕಲಬುರಗಿ: ಕೂಲಿ ಅರಿಸಿ ಹೊರ ರಾಜ್ಯದಿಂದ ಬಂದಿದ್ದ ಜನರು ಲಾಕ್ಡೌನ್ ನಡುವೆಯೂ ತಮ್ಮ ಊರು ಸೇರಲು ವಾಹನ ಸೌಕರ್ಯ ಇಲ್ಲದೆ ನೂರಾರು ಕಿಲೋ ಮೀಟರ್ ನಡೆದುಕೊಂಡೇ ಹೋಗುತ್ತಿದ್ದಾರೆ.
ಕೊರೊನಾ ಅಟ್ಟಹಾಸಕ್ಕೆ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಆಗಿದ್ದು ಆಗಲಿ, ನಮ್ಮೂರಿಗೆ ಹೋಗೋಣ ಅಂತ ಲಾಕ್‌ಡೌನ್‌ನಿಂದ ವಾಹನ ಸಂಚಾರ ಇಲ್ಲದಿದ್ರೂ ನೂರಾರು ಕಿ.ಮೀ. ನಡೆದುಕೊಂಡೇ ಹೋಗುತ್ತಿದ್ದಾರೆ.
ಸುಮಾರು 20ಕ್ಕೂ ಹೆಚ್ಚು ಜನರು ಕಾಲ್ನಡಿಗೆಯಲ್ಲಿ ಊರಿಗೆ ತೆರಳುತ್ತಿದ್ದಾರೆ. ಗಂಟುಮೂಟೆ ಕಟ್ಟಿಕೊಂಡು ರಾಯಚೂರಿನಿಂದ ಕೃಷ್ಣಾ, ಯಾದಗಿರಿ, ಸೇಡಂ, ಚಿಂಚೋಳಿ ಮಾರ್ಗವಾಗಿ ಸಾಗುತ್ತಿದ್ದಾರೆ. ಸುಮಾರು 200 ಕಿ.ಮೀ. ದೂರದ ಊರು ತಲುಪಲು ಬಿರು ಬಿಸಿಲನ್ನೂ ಲೆಕ್ಕಿಸದೆ ಪುರುಷರು, ಮಹಿಳೆಯರು ನಾಲ್ಕು ದಿನದಿಂದ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ.