ಕಲಬುರಗಿ: ಫೆಬ್ರವರಿ 14 ಅಂದ್ರೆ ಸಾಕು ಪ್ರೇಮಿಗಳಿಗೆ ವಿಶೇಷವಾದ ದಿನ. ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಸಂಭ್ರಮಿಸುವವರೇ ಹೆಚ್ಚು. ಆದರೆ ನಗರದಲ್ಲಿ ತಮ್ಮ ಪೋಷಕರ ಕಣ್ಣು ತಪ್ಪಿಸಿ ಪ್ರಿಯಕರ ಹಾಗೂ ಪ್ರಿಯತಮೆಯನ್ನು ಭೇಟಿಯಾಗಲು ಗಾರ್ಡನ್ ಹೋಗಿದ್ದ ಪ್ರೇಮಿಗಳಿಗೆ ಅಚ್ಚರಿ ಕಾದಿತ್ತು.
ಹೌದು, ಫೆ. 14(ನಿನ್ನೆ) ವಿಶ್ವದಾದ್ಯಂತ ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಆಚರಿಸಿದರೆ ಕಲಬುರಗಿಯ ಸಾರ್ವಜನಿಕ
![undefined](https://s3.amazonaws.com/saranyu-test/etv-bharath-assests/images/ad.png)
ಪ್ರತಿ ವರ್ಷ ಪ್ರೇಮಿಗಳ ದಿನಾಚರಣೆ ವಿರೋಧಿಸುತ್ತಾ ಬಂದಿರುವ ಶ್ರೀರಾಮಸೇನೆ ಕಾರ್ಯಕರ್ತರು, ಈ ಬಾರಿಯೂ ಪ್ರೇಮಿಗಳ ದಿನಾಚರಣೆ ಖಂಡಿಸಿದರು. ವ್ಯಾಲೆಂಟೈನ್ಸ್ ಡೇ ನಮ್ಮ ದೇಶದ ಸಂಸ್ಕೃತಿ ಅಲ್ಲ. ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ. ಇಲ್ಲಿ ಅದರ ಆಚರಣೆ ಬೇಡ ಅಂತ ಪ್ರೇಮಿಗಳ ಬಳಿ ಹೋಗಿ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು.
ನಿಜವಾದ ಪ್ರೀತಿ ಇದ್ದರೆ ಸ್ಥಳದಲ್ಲಿಯೇ ನಿಮ್ಮ ಪ್ರೇಯಸಿಯನ್ನು ಮದುವೆಯಾಗಿ ಅಂತ ಹಲವು ಲವರ್ಸ್ಗೆ ಮನವೊಲಿಸಿ 4 ಜೋಡಿಗಳಿಗೆ ಮದುವೆ ಮಾಡಿಸಿದರು. ಪಾಶ್ಚಿಮಾತ್ಯ ಸಂಸ್ಕೃತಿಗೆ ನಮ್ಮ ಯುವಕರು ಕಟ್ಟು ಬೀಳಬಾರದು ಅಂತ ಮನವಿ ಮಾಡಿದ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್ ಸ್ವಾದಿ ಹಾಗೂ ಕಾರ್ಯಕರ್ತರು, ನಮ್ಮದು ವ್ಯಾಲೆಂಟೈನ್ಸ್ ಡೇ ಗೆ ವಿರೋಧ ಹೊರತಾಗಿ ಪ್ರೀತಿ ಪ್ರೇಮಕ್ಕೆ ಅಲ್ಲ. ಪಾಶ್ಚಿಮಾತ್ಯ ಸಂಸ್ಕೃತಿ ಅನುಸರಿಸದೆ ನಿಜವಾದ ಪ್ರೀತಿ ಪ್ರೇಮದಿಂದ ಬಾಳಬೇಕು ಎಂದು ಮನವಿ ಮಾಡಿದ್ರು.
ಶ್ರೀರಾಮಸೇನೆಯ ಕಾರ್ಯಕ್ಕೆ ಕೆಲ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದರೆ ಇನ್ನೂ ಕೆಲ ಪ್ರೇಮಿಗಳು ಶ್ಲಾಘಿಸಿದರು. ಇವರ ಮನವಿಗೆ ಓಗೊಟ್ಟು ಮದುವೆ ಮಾಡಿಕೊಳ್ಳಲು ಮುಂದೆ ಬಂದರು. ಮದುವೆಗೆ ಮುಂದೆ ಬಂದ ಪ್ರೇಮಿಗಳಿಗೆ ಹಾರ ಬದಲಾಯಿಸುವ ಮೂಲಕ ಮದುವೆ ಮಾಡಿಸಿದ ಶ್ರೀರಾಮಸೇನೆ ಕಾರ್ಯಕರ್ತರು ನವ ಜೋಡಿಗೆ ಶುಭ ಹಾರೈಸಿದರು.
ಒಟ್ಟಾರೆ ವ್ಯಾಲೆಂಟೈನ್ಸ್ ಡೇ ಗೆ ವಿರೋಧ ವ್ಯಕ್ತಪಡಿಸಿದ ಶ್ರೀರಾಮಸೇನೆ ಕಾರ್ಯಕರ್ತರು ಯುವ ಪ್ರೇಮಿಗಳನ್ನು ಒಂದುಗೂಡಿಸುವ ಮೂಲಕ ಯುವಕರಿಗೆ ಪಾಶ್ಚಿಮಾತ್ಯ ಸಂಸ್ಕೃತಿ ವಿರೋಧಿಸುವಂತೆ ಪ್ರೇರೇಪಿಸಿದರು.