ಕಲಬುರಗಿ: ಇಲ್ಲಿನ ಗ್ರಾಮಾಂತರ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಉಡುಪಿ ಜಿಲ್ಲೆ ಕಾರ್ಕಳ ನಕ್ಸಲ್ ನಿಗ್ರಹ ಪಡೆಗೆ ವರ್ಗಾವಣೆಗೊಂಡಿದ್ದಾರೆ.
ಯಾದಗಿರಿ ಜಿಲ್ಲೆಯಿಂದ ಕಲಬುರಗಿ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದ ಯಡಾ ಮಾರ್ಟಿನ್, ಸುಮಾರು ಎರಡು ವರ್ಷಗಳ ಕಾಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಯಡಾ ಮಾರ್ಟಿನ್ ಇದೀಗ ಉಡುಪಿ ಜಿಲ್ಲೆ ಕಾರ್ಕಳದ ನಕ್ಸಲ್ ನಿಗ್ರಹ ಪಡೆಗೆ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.
ಬೆಂಗಳೂರು ಅಸಿಸ್ಟಂಟ್ ಇನ್ಸಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿದ್ದ 2015 ನೇ ಬ್ಯಾಚ್‌ನ ಡಾ. ಸಿಮಿ ಮರಿಯಂ ಜಾರ್ಜ್ ಅವರನ್ನು ಕಲಬುರಗಿ ನೂತನ ಎಸ್ಪಿಯಾಗಿ ನಿಯೋಜನೆ ಮಾಡಲಾಗಿದೆ.