ETV Bharat / city

ಅದ್ಧೂರಿಯಾಗಿ ನಡೆಯುತ್ತಿರುವ ಕಲಬುರಗಿ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ - Kalaburagi District 18th Kannada Literary Conference

ಕಲ್ಯಾಣ ಕರ್ನಾಟಕ ಭಾಗ ತನ್ನ ಒಡಲಿನಲ್ಲಿ ಸಾಹಿತ್ಯ ಕುರಿತು ಪ್ರಜ್ವಲವಾದ ಇತಿಹಾಸ ಇಟ್ಟಿಕೊಂಡಿದ್ದು, ಸಾಹಿತ್ಯಾಸಕ್ತರಿಗೆ, ಸಂಶೋಧಕರಿಗೆ ಸಂಶೋಧನೆಗೆ ಅದು ಕೈಬೀಸಿ ಕರೆಯುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನಿಲುಕದ ಅದೆಷ್ಟೋ ಸತ್ಯ ಸಂಗತಿಗಳು ಕಣ್ಣಿಗೆ ಕಾಣದಂತೆ ಕಾಲ ಗರ್ಭದಲ್ಲಿ ಅಡಗಿ ಹೋಗಿದ್ದು, ಇದನ್ನು ಸಂಶೋಧಿಸಿ ನಮೂದಿಸುವ ಲೇಖಕರ ಮತ್ತು ಪ್ರಕಾಶಕರ ಕೊರತೆ ಎದ್ದು ಕಾಣುತ್ತಿದೆ ಎಂದು ಸುಭಾಶ್ಚಂದ್ರ ಕಶೆಟ್ಟಿ ಬಾನಾಳ ಅಭಿಪ್ರಾಯ ವ್ಯಕ್ತಪಡಿಸಿದರು.

ಕಲಬುರಗಿ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ

author img

By

Published : Mar 31, 2022, 11:04 AM IST

ಕಲಬುರಗಿ: ಹೇರಳ ಸಾಹಿತ್ಯ ಸಂಪತ್ತು ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ನಿಲುಕದ ಅದೆಷ್ಟೋ ಸತ್ಯ ಸಂಗತಿಗಳು ಕಣ್ಣಿಗೆ ಕಾಣದಂತೆ ಕಾಲ ಗರ್ಭದಲ್ಲಿ ಅಡಗಿ ಹೋಗಿದ್ದು, ಇದನ್ನು ಸಂಶೋಧಿಸಿ ನಮೂದಿಸುವ ಲೇಖಕರ ಮತ್ತು ಪ್ರಕಾಶಕರ ಕೊರತೆ ಎದ್ದು ಕಾಣುತ್ತಿದೆ ಎಂದು ಕಲಬುರಗಿ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸುಭಾಶ್ಚಂದ್ರ ಕಶೆಟ್ಟಿ ಬಾನಾಳ ಅವರು ಕಳವಳ ವ್ಯಕ್ತಪಡಿಸಿದರು.

ಕೆಂಬಾಳೆ ಖ್ಯಾತಿಯ ಕಮಲಾಪೂರದ ಆಕೃತಿ ಬಿರಾದರ ಕನ್‍ವೆನ್ಶನ್ ಹಾಲ್‍ನಲ್ಲಿ ಎರಡು ನಿನ್ನೆ ಮತ್ತು ಇಂದು 2 ದಿನಗಳ ಕಾಲ ನಡೆಯಲಿರುವ ಕಲಬುರಗಿ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡದ ಮೊಟ್ಟ ಮೊದಲ ಉಪಲಬ್ಧ ಗ್ರಂಥ 'ಕವಿರಾಜಮಾರ್ಗ' ಮತ್ತು ಹಿಂದೂ ನ್ಯಾಯಶಾಸ್ತ್ರದ 'ಮಿತಾಕ್ಷರ' ಗ್ರಂಥ ನೀಡಿದ ನೆಲ ಇದಾಗಿದೆ. ಕಲ್ಯಾಣ ಕರ್ನಾಟಕ ಭಾಗ ತನ್ನ ಒಡಲಿನಲ್ಲಿ ಸಾಹಿತ್ಯ ಕುರಿತು ಪ್ರಜ್ವಲವಾದ ಇತಿಹಾಸ ಇಟ್ಟಿಕೊಂಡಿದ್ದು, ಸಾಹಿತ್ಯಾಸಕ್ತರಿಗೆ, ಸಂಶೋಧಕರಿಗೆ ಸಂಶೋಧನೆಗೆ ಅದು ಕೈಬೀಸಿ ಕರೆಯುತ್ತಿದೆ ಎಂದರು.

ಕಲಬುರಗಿ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ

ಇತಿಹಾಸ ಪ್ರಸಿದ್ಧ ಕಮಲಾಪೂರದ ದಶರಥನ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿಸಬೇಕು. ಭೌಗೋಳಿಕ ಸೂಚ್ಯಂಕ ಹೊಂದಿರುವ ಇಲ್ಲಿನ ಕೆಂಬಾಳೆ ನಾಡಿನಾದ್ಯಂತ ದೊರೆಯಲು ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು. ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಬೇಕು. ಕಮಲಾಪೂರ ಡಯಟ್ ಕಚೇರಿ ಮುಚ್ಚಬಾರದು. ಕಮಲಾಪೂರ ಮಾರ್ಗವಾಗಿ ಬೀದರ - ಬೆಂಗಳೂರು ಹೊಸ ರೈಲು ಆರಂಭಿಸಬೇಕು. ಕೆ.ಕೆ.ಆರ್.ಡಿ.ಬಿ. ಮಂಡಳಿಯು ಈ ಭಾಗದ ಸಾಹಿತಿಗಳ ಪುಸ್ತಕ ಖರೀದಿಯನ್ನು ನಿಲ್ಲಿಸಿರುವುದನ್ನು ಮತ್ತೆ ಪ್ರಾರಂಭಿಸಬೇಕು ಎಂದು ನುಡಿ ಜಾತ್ರೆ ವೇದಿಕೆ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಿದರು.

ಧ್ವಜಾರೋಹಣ: ಮೆರವಣಿಗೆಗೂ ಮುನ್ನ ಶಾಸಕ ಬಸವರಾಜ ಮತ್ತಿಮೂಡ ಅವರು ರಾಷ್ಟ್ರ ಧ್ವಜಾರೋಹಣ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ್​​ ತೇಗಲತಿಪ್ಪಿ ಅವರು ಪರಿಷತ್ ಧ್ವಜಾರೋಹಣ ನೆರವೇರಿಸಿದರು.

ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ: ಪಟ್ಟಣದ ಬಸವೇಶ್ವರ ವೃತ್ತದಿಂದ ಸಮ್ಮೇಳನದ ವೇದಿಕೆ ವರೆಗೂ ಸಾರೋಟಿಯಲ್ಲಿ ಸಮ್ಮೇಳನಾಧ್ಯಕ್ಷ ಸುಭಾಶ್ಚಂದ್ರ ಕಶೆಟ್ಟ ಬಾಚನಾಳ ಅವರ ಭವ್ಯ ಮೆರವಣಿಗೆ ಸಾಗಿತು. ಕಮಲಾಪೂರ ತಹಶೀಲ್ದಾರ್​ ಸುರೇಶ ವರ್ಮಾ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಡೊಳ್ಳು ಕುಣಿತ, ಹಲಿಗೆ ವಾದನ, ಗೊಂಬೆ ಕುಣಿತ, ಪುರವಂತಿಗೆ ಮೇಳ, ಶಹನಾಯಿ ಮೇಳ, ಹಗಲು ವೇಶ, ಹೆಜ್ಜೆ ಮೇಳ ಮೆರವಣಿಗೆ ಉದ್ದಕ್ಕೂ ಮೇಳೈಸಿತು. ಲಂಬಾಣಿ ಮಹಿಳೆಯರ ನೃತ್ಯ ಸಭಿಕರ ಗಮನ ಸೆಳೆಯಿತು. ಶಾಲಾ ವಿದ್ಯಾರ್ಥಿನಿಯರು ಕುಣಿದು ಕುಪ್ಪಳಿಸಿದರು. ಶಾಸಕ ಬಸವರಾಜ ಮತ್ತಿಮೂಡ ಅವರು ಸಹ ಮಕ್ಕಳೊಂದಿಗೆ ಕನ್ನಡದ ಗೀತೆಯೊಂದಕ್ಕೆ ಹೆಜ್ಜೆ ಹಾಕಿ ಸಂಭ್ರಮಪಟ್ಟರು. ಮಹಿಳಾ ಮಣಿಗಳು ಡೊಳ್ಳು ಬಾರಿಸಿ ತಾವು ಏನು ಕಮ್ಮಿಯಿಲ್ಲ ಎಂದು ತೋರ್ಪಡಿಸಿದರು.

ಕವಿಗೋಷ್ಠಿ: ನುಡಿ ಜಾತ್ರೆಯ ಮೊದಲನೇ ದಿನವಾದ ಬುಧವಾರ ಪ್ರಸಿದ್ಧ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ 'ಕನ್ನಡ ಕಾವ್ಯಗಳಲ್ಲಿ ಬದುಕಿನ ಮೌಲ್ಯಗಳು', ಚಿತ್ರಕಲಾವಿದ ಡಾ. ಅಯಾಜುದ್ದಿನ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ 'ಜಿಲ್ಲೆಯ ಸಮಸ್ಯೆಗಳು ಹಾಗೂ ಅಭಿವೃದ್ಧಿ' ಕುರಿತು ಹಾಗೂ ಹಿರಿಯ ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಅಧ್ಯಕ್ಷತೆಯಲ್ಲಿ 'ಮಹಿಳಾ ಕಾವ್ಯಧಾರೆ' ಕವಿಗೋಷ್ಠಿ ನಡೆಯಿತು. ಅನೇಕ ಕವಿ, ಸಾಹಿತಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ವಿಷಯವನ್ನು ಮಂಡಿಸಿದರು.

ಇದನ್ನೂ ಓದಿ: ಹಸಿರು ಇಂಧನ ಬಳಕೆ ಉತ್ತೇಜಿಸುವ ನವೀಕರಿಸಬಹುದಾದ ಇಂಧನ ನೀತಿಗೆ ಸಚಿವ ಸಂಪುಟ ಸಭೆ ಅಸ್ತು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.