ETV Bharat / city

ಕಲಬುರಗಿ : ಇಬ್ಬರು ಸೋಂಕಿತರ ಸಾವು.. 124 ಪಾಸಿಟಿವ್​ ಪ್ರಕರಣ ದಾಖಲು - ಕೊರೊನಾ ವರದಿ

ಕಲಬುರಗಿ ಜಿಲ್ಲೆಯಲ್ಲಿ ಇಂದು 124 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇಬ್ಬರು ಸೋಂಕಿತರು ಮೃತ ಪಟ್ಟಿದ್ದಾರೆ. ಇಂದು ಪತ್ತೆಯಾದ ಸೋಂಕಿತರ ಪೈಕಿ ಬಹುತೇಕರು ಐಎಲ್​ಐ ಹಾಗೂ ಎಸ್​ಎಆರ್​ಐ ಪ್ರಕರಣಗಳಾಗಿದ್ದು, ಕೆಲವರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲಾಗುತ್ತಿದೆ.

kalaburagi-corona-cases-report
ಕಲಬರುಗಿ
author img

By

Published : Jul 20, 2020, 11:20 PM IST

ಕಲಬುರಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಇಂದು ಇಬ್ಬರು ಮೃತಪಟ್ಟಿದ್ದು, ಹೊಸದಾಗಿ 124 ಜನರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.

ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬೀದರ್ ಜಿಲ್ಲೆಯ 57 ವರ್ಷದ ಮಹಿಳೆ (ರೋಗಿ-21336) ಜುಲೈ 3ರಂದು ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಕಲಬುರಗಿಯ ಆಸ್ಪತ್ರೆಗೆ ದಾಖಲಾಗಿ ಜುಲೈ 7ರಂದು ನಿಧನರಾಗಿದ್ದಾರೆ. ಅದರಂತೆ ಕಲಬುರಗಿಯ ಬ್ಯಾಂಕ್ ಕಾಲೋನಿ (ಏಶಿಯನ್ ಮಾಲ್ ಹಿಂದ್ಗಡೆ) ಪ್ರದೇಶದ 40 ವರ್ಷದ ಪುರುಷ (ರೋಗಿ-36931) ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜುಲೈ 12ರಂದು ಆಸ್ಪತ್ರೆಗೆ ದಾಖಲಾಗಿ ಜುಲೈ 15 ರಂದು ನಿಧನ ಹೊಂದಿದ್ದಾರೆ.

ಇಂದು ಹೊಸದಾಗಿ 124 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 2867ಕ್ಕೆ ಏರಿದೆ. ಇಂದು 55 ಜನ ಗುಣಮುಖರಾಗಿದ್ದಾರೆ. ಒಟ್ಟು 1826 ಜನರು ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 993 ಸಕ್ರಿಯ ಪ್ರಕರಣಗಳಿದ್ದು ಚಿಕಿತ್ಸೆ ಮುಂದುವರೆದಿದೆ. ಮೃತರ ಸಂಖ್ಯೆ 48ಕ್ಕೆ ಏರಿಕೆಯಾಗಿದೆ. ಇಂದಿನ ಸೋಂಕಿತರಲ್ಲಿ ಬಹುತೇಕರು ಐಎಲ್​ಐ ಹಾಗೂ ಎಸ್​ಎಆರ್​ಐ ಪ್ರಕರಣಗಳಿದ್ದು, ಕೆಲವರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.