ಕಲಬುರಗಿ : ಕೊರೊನಾ ಆತಂಕದ ನಡುವೆಯೂ ಕ್ರಿಸ್ಮಸ್ ಹಬ್ಬವನ್ನು ಕಲಬುರಗಿ ಜಿಲ್ಲೆಯಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕಲಬುರಗಿ ನಗರದ ಸೆಂಟ್ ಮೇರಿ, ಸೆಂಟ್ ಜೋಸೆಫ್, ಮೆಥೋಡಿಸ್ಟ್ ಚರ್ಚ್ ಸೇರಿ ಹಲವೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ವಿದ್ಯುತ್ ದೀಪಗಳಿಂದ ಚರ್ಚ್ಗಳನ್ನು ಅಲಂಕರಿಸಲಾಗಿತ್ತು. ಚರ್ಚ್ ಆವರಣದಲ್ಲಿ ಆಕರ್ಷಕವಾದ ಗೋದಲಿ ನಿರ್ಮಿಸಲಾಗಿತ್ತು. ಚರ್ಚ್‌ಗಳಲ್ಲಿ ನಿನ್ನೆ ರಾತ್ರಿ ವೇಳೆ ಜರುಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತ ಬಾಂಧವರು ಭಾಗವಹಿಸಿ ಕ್ರೈಸ್ತ ಗೀತೆಗಳನ್ನು, ಯೇಸು ಕ್ರಿಸ್ತರ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.
ಕ್ರಿಸ್ಮಸ್ ಹಬ್ಬದ ಕುರಿತು ಮಾತನಾಡಿದ ನಗರದ ಮೆಥೋಡಿಸ್ಟ್ ಚರ್ಚ್ನ ಧರ್ಮಗುರು ಫಾ. ಸಂತೋಷ ಡೈಯಸ್, ಇಂದು ಇಡೀ ಜಗತ್ತೇ ಏಸು ಕ್ರಿಸ್ತನ ಹುಟ್ಟು ಹಬ್ಬವನ್ನು ಸಂಭ್ರಮಿಸುತ್ತಿದೆ.
ಕಳೆದ 25 ದಿನಗಳಿಂದ ಕ್ರಿಸ್ಮಸ್ ಹಬ್ಬದ ಸಂಭ್ರಮ ಕ್ರೈಸ್ತ ಕುಟುಂಬಗಳಲ್ಲಿ ಮನೆ ಮಾಡಿತ್ತು. ಇಂದು ಕ್ರೈಸ್ತರು ದೇವಾಲಯಕ್ಕೆ ಆಗಮಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ದೇಶದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಬೇಕು ಎಂದರು.
ಇದನ್ನೂ ಓದಿ: ವಾಹನ ನೋಂದಣಿ ಪ್ರಮಾಣಪತ್ರ: ಸ್ಮಾರ್ಟ್ ಕಾರ್ಡ್ ವಿತರಣೆ ಆದೇಶ ತೆರವು ಕೋರಿ ಸಾರಿಗೆ ಇಲಾಖೆ ಅರ್ಜಿ
ಕಲಬುರಗಿ ಜನತೆ ಚರ್ಚ್ಗಳ ಜೊತೆಗೆ ತಮ್ಮ ಮನೆಗಳನ್ನು ಕೂಡ ವಿದ್ಯುತ್ ದೀಪ, ನಕ್ಷತ್ರಗಳಿಂದ ಶೃಂಗರಿಸಿ ಸಂಭ್ರಮಿಸಿದರು.