ETV Bharat / city

ಕಾಳಸಂತೆಯಲ್ಲಿ ಆಂಫೊಟೆರಿಸಿನ್-ಬಿ ಔಷಧ ಮಾರಾಟ: ಜಿಮ್ಸ್ ಸ್ಟಾಫ್​ ನರ್ಸ್ ಬಂಧನ

author img

By

Published : Jun 16, 2021, 12:02 PM IST

ಜಿಮ್ಸ್ ಆಸ್ಪತ್ರೆಯಲ್ಲಿನ 6 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧವನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಿದ್ದ ಜಿಮ್ಸ್ ಆಸ್ಪತ್ರೆಯ ಸ್ಟಾಫ್​ ನರ್ಸ್ ರಾಜಶೇಖರ ಭಜಂತ್ರಿಯನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ.

kalaburagi
ಕಾಳಸಂತೆಯಲ್ಲಿ ಆಂಫೊಟೆರಿಸಿನ್-ಬಿ ಔಷಧ ಮಾರಾಟ

ಕಲಬುರಗಿ: ಬ್ಲ್ಯಾಕ್ ಫಂಗಸ್‌ ಚಿಕಿತ್ಸೆಗೆ ಬಳಸುವ ಆಂಫೊಟೆರಿಸಿನ್-ಬಿ ಇಂಜೆಕ್ಷನ್​ ಅನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದಡಿ ಮಹಾರಾಷ್ಟ್ರ ಪೊಲೀಸರು ಜಿಮ್ಸ್ ಆಸ್ಪತ್ರೆ ಸಿಬ್ಬಂದಿಯೋರ್ವನನ್ನು ಬಂಧಿಸಿ ಕರೆದೊಯ್ದಿದ್ದಾರೆ. ಸ್ಟಾಫ್​ ನರ್ಸ್ ಆಗಿರುವ ಹಾಗೂ ಸದ್ಯ ಆಸ್ಪತ್ರೆಯ ಐಸಿಯು ಇನ್‌ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದ ರಾಜಶೇಖರ ಭಜಂತ್ರಿ ಬಂಧಿತ ಆರೋಪಿ.

ಈತ ಜಿಮ್ಸ್ ಆಸ್ಪತ್ರೆಯಲ್ಲಿನ 6 ವಯಲ್ಸ್ ಆಂಫೊಟೆರಿಸಿನ್-ಬಿ ಔಷಧವನ್ನು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಿದ್ದ. ಈ ದಂಧೆಯ ಜಾಡು ಬೆನ್ನತ್ತಿದ ಮಹಾರಾಷ್ಟ್ರ ಪೊಲೀಸರು, ಸೋಮವಾರ ತಡರಾತ್ರಿ ಆರೋಪಿ ರಾಜಶೇಖರನನ್ನು ಬಂಧಿಸಿ ಮಹಾರಾಷ್ಟ್ರಕ್ಕೆ ಕರೆದೊಯ್ದಿದ್ದಾರೆ. ಕಾಳಸಂತೆಯಲ್ಲಿ ಔಷಧ ಮಾರಾಟ ದಂಧೆಯಲ್ಲಿ ಜಿಮ್ಸ್​ನ ಇನ್ನಷ್ಟು ಸಿಬ್ಬಂದಿ ಭಾಗಿಯಾಗಿರುವ ಶಂಕೆಯಿದ್ದು, ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಪ್ರೀತಿಗಾಗಿ ಗಾಂಜಾ ಮಾರಾಟ; ಎಂಜಿನಿಯರಿಂಗ್​ ಪದವೀಧರೆ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.