ETV Bharat / city

ಹಿಜಾಬ್ ಧರಿಸಿಯೇ ವಿಧಾನಸೌಧದಲ್ಲಿ ಕೂರುತ್ತೇನೆ, ಯಾರಿಗೆ ತಾಕತ್ತಿದೆ ತಡೆಯಲಿ : ಕಾಂಗ್ರೆಸ್‌ ಶಾಸಕಿ - ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ

ಹಿಜಾಬ್ ನಮ್ಮ ಹಕ್ಕು, ಯಾವುದೇ ಕಾರಣಕ್ಕೂ ನಾವು ಬುರ್ಖಾ ಹಾಕಿಕೊಳ್ಳುವುದನ್ನು ಬಿಡುವುದಿಲ್ಲ. ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ನಾನು ಸಹ ಅಸೆಂಬ್ಲಿಯಲ್ಲಿ ಹಿಜಾಬ್ ಧರಿಸಿಯೇ ಕೂಡುತ್ತೇನೆ (ಕುಳಿತುಕೊಳ್ಳುತ್ತೇನೆ). ಧೈರ್ಯ ಇದ್ದವರು ನನ್ನ ತಡೆಯಲಿ ಎಂದು ಸವಾಲೊಡ್ಡಿದರು..

hijab
ಕೈ ಶಾಸಕಿ
author img

By

Published : Feb 5, 2022, 4:10 PM IST

Updated : Feb 5, 2022, 6:41 PM IST

ಕಲಬುರಗಿ : ನಾನು ಹಿಜಾಬ್ ಧರಿಸಿಯೇ ಅಸೆಂಬ್ಲಿಯಲ್ಲಿ ಕೂರುತ್ತೇನೆ, ಯಾರಿಗೆ ತಾಕತ್ತಿದೆ ಅವರು ಬಂದು ತಡೆಯಲಿ ಎಂದು ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಸವಾಲು‌ ಹಾಕಿದ್ದಾರೆ.

ಉಡುಪಿಯಿಂದ ಹಿಜಾಬ್ ಕಿಚ್ಚು ಈಗ ಬಿಸಿಲೂರು ಕಲಬುರಗಿಗೂ ವ್ಯಾಪಿಸಿದೆ. ಹಿಜಾಬ್ ಬೆಂಬಲಿಸಿ ನಗರದಲ್ಲಿಂದು ಶಾಸಕಿ ಖನೀಜ್ ಫಾತೀಮಾ ಅವರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಶಾಸಕಿ ಖನೀಜ್ ಫಾತೀಮಾ ಅವರ ನೇತೃತ್ವದಲ್ಲಿ ಪ್ರತಿಭಟನೆ

'ಹಿಜಾಬ್ ನಮ್ಮ ಹಕ್ಕು, ಗುಂಡಾಗಿರಿ ನಡೆಯೋದಿಲ್ಲ, ನ್ಯಾಯ ಬೇಕು' ಅಂತಾ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಸಹ ಪಾಲ್ಗೊಂಡಿದ್ದರು.

ಇದನ್ನೂ ಓದಿ: ಹಿಜಾಬ್-ಕೇಸರಿ ಶಾಲು ವಿವಾದ : ಭಾರತದ ಭವಿಷ್ಯಕ್ಕೆ ರಾಹುಲ್ ಗಾಂಧಿ ಅಪಾಯಕಾರಿ ಎಂದ ಕರ್ನಾಟಕ ಬಿಜೆಪಿ

ಈ ವೇಳೆ ಮಾತನಾಡಿದ ಶಾಸಕಿ ಖನೀಜ್ ಫಾತೀಮಾ, ಹಿಜಾಬ್ ನಮ್ಮ ಹಕ್ಕು, ಯಾವುದೇ ಕಾರಣಕ್ಕೂ ನಾವು ಬುರ್ಖಾ ಹಾಕಿಕೊಳ್ಳುವುದನ್ನು ಬಿಡುವುದಿಲ್ಲ. ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ನಾನು ಸಹ ಅಸೆಂಬ್ಲಿಯಲ್ಲಿ ಹಿಜಾಬ್ ಧರಿಸಿಯೇ ಕೂಡುತ್ತೇನೆ (ಕುಳಿತುಕೊಳ್ಳುತ್ತೇನೆ). ಧೈರ್ಯ ಇದ್ದವರು ನನ್ನ ತಡೆಯಲಿ ಎಂದು ಸವಾಲೊಡ್ಡಿದರು.

ಹಿಜಾಬ್ ಧರಿಸುವುದು ಮುಸ್ಲಿಂ ಸಮುದಾಯದವರಿಗೆ ಸಂವಿಧಾನ ನೀಡಿದ ಹಕ್ಕಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಹೊಸ ಕಾನೂನುಗಳ ಜಾರಿ ತರಲು ಹೊರಟಿದೆ. ಇದನ್ನು ಯಾವುದೇ ಕಾರಣಕ್ಕೂ ನಾವು ಒಪ್ಪೋದಿಲ್ಲ ಎಂದು ಕೈ ಶಾಸಕಿ ಕಿಡಿಕಾರಿದರು.

Last Updated : Feb 5, 2022, 6:41 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.